ಕೇರಳಿಗರ ಕಳ್ಳಾಟ: ನಕಲಿ ಕೊವಿಡ್ ನೆಗೆಟಿವ್ ವರದಿ ಸಲ್ಲಿಸಿ ಕೊಡಗು ಪ್ರವೇಶ; ಆತಂಕದಲ್ಲಿ ಜಿಲ್ಲೆಯ ಜನತೆ

ಕೊರೊನಾ ಆತಂಕ ಎಲ್ಲೆಡೆ ಹೆಚ್ಚಾಗುತ್ತಿದೆ. ಕೇರಳದಿಂದ ಬರುತ್ತಿರುವವರಿಗೆ ಕೊವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಕೇರಳದಿಂದ ಬರುತ್ತಿರುವ ಜನರು ನಕಲಿ ಕೊವಿಡ್ ವರದಿಯನ್ನು ಸಲ್ಲಿಸಿ ಕೊಡಗಿಗೆ ಪ್ರವೇಶಿಸಿದ್ದಾರೆ. ಜಿಲ್ಲೆಯ ಜನತೆಗೆ ಆತಂಕ ಹೆಚ್ಚಾಗಿದೆ.

ಕೇರಳಿಗರ ಕಳ್ಳಾಟ: ನಕಲಿ ಕೊವಿಡ್ ನೆಗೆಟಿವ್ ವರದಿ ಸಲ್ಲಿಸಿ ಕೊಡಗು ಪ್ರವೇಶ; ಆತಂಕದಲ್ಲಿ ಜಿಲ್ಲೆಯ ಜನತೆ
ಸಾಂದರ್ಭಿಕ ಚಿತ್ರ
Follow us
shruti hegde
|

Updated on:Mar 23, 2021 | 1:39 PM

ಕೊಡಗು: ಕೊರೊನಾ ಮಹಾಮಾರಿ ತನ್ನ ಆರ್ಭಟವನ್ನು ಮತ್ತೆ ಹೆಚ್ಚಿಸುತ್ತಿದೆ. ಕೇರಳದಿಂದ ಬರುತ್ತಿರುವವರಿಗೆ ಕೊವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಕೇರಳದಿಂದ‌ ಕೊಡಗು ಪ್ರವೇಶಿಸುವವರು ನಕಲಿ ವರದಿ ಸಲ್ಲಿಸಿ ಕೊಡಗು ಪ್ರವೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೊನಾ ಆತಂಕ ಜಿಲ್ಲೆಯಲ್ಲಿ ಹೆಚ್ಚಾಗಿದೆ.

ಜನರು ಕುಟ್ಟ ಚೆಕ್ ಪೋಸ್ಟ್​ ಬಳಿ ನಕಲಿ ವರದಿ ಸಲ್ಲಿಸಿ ಕೊಡಗು ಪ್ರವೇಶಿಸಿದ್ದಾರೆ. ಹೀಗಾಗಿ ಎಲ್ಲರಿಗೂ ಕೊರೊನಾ ಹರಡುವ ಆತಂಕ ಏರ್ಪಟ್ಟಿದೆ. ಕಳೆದ‌ 24 ಗಂಟೆಗಳಲ್ಲಿ 38 ಮಂದಿಗೆ ಕೊರೊನಾ‌ ಸೋಂಕು ದೃಢಪಟ್ಟಿದೆ. ಈ ಹಿಂದೆ ದಿನಕ್ಕೆ‌ ಒಂದೆರೆಡು ಪ್ರಕರಣ ವರದಿಯಾಗುತ್ತಿತ್ತು. ಇಂದು ಒಂದೇ ದಿನ‌ 22 ಮಂದಿಗೆ ಸೋಂಕು ತಗುಲಿದೆ. ನಿನ್ನೆ ಸೋಮವಾರ ಒಂದೇ ದಿನ 16 ಮಂದಿಗೆ ಸೋಂಕು ತಗುಲಿದೆ. ನಕಲಿ ಕೋವಿಡ್ ಟೆಸ್ಟ್ ರಿಪೋರ್ಟ್ ತೋರಿಸಿ ನೂರಾರು ಮಂದಿ ಒಳ ನುಸುಳಿದ್ದಾರೆ. ಹೀಗಾಗಿ ವರದಿ ಅಸಲಿಯೋ ನಕಲಿಯೋ ಎಂದು ಚೆಕ್​ಪೋಸ್ಟ್​ ಬಳಿ ಸಿಬ್ಬಂದಿ ಪರದಾಟುವಂತಹ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ದೇಶದಲ್ಲಿ ಕೊರೊನಾ 2ನೇ ಅಲೆಯ ಆತಂಕ.. ಮತ್ತೊಮ್ಮೆ ತತ್ತರಿಸಿದ ಮಹಾರಾಷ್ಟ್ರ, ಕೇರಳ

ಕರ್ನಾಟಕದಲ್ಲಿ ಇಂದು 1,179 ಕೊರೊನಾ ಕೇಸ್ ಪತ್ತೆ

Published On - 1:36 pm, Tue, 23 March 21