ಸುಂದರ ಸಂಸಾರಕ್ಕೆ ಕೊಳ್ಳಿ ಇಟ್ಟ ಆ ಒಂದು ವಿಷಯ.. ನಿರ್ಜನ ಪ್ರದೇಶದಲ್ಲಿ ಗಂಡನ ಆತ್ಮಹತ್ಯೆ, ಪತ್ನಿ ಆಸ್ಪತ್ರೆಗೆ ದಾಖಲು

| Updated By: ಆಯೇಷಾ ಬಾನು

Updated on: Jun 08, 2021 | 8:05 AM

ಸುಂದರ ಕುಟುಂಬ.. ಅಪ್ಪ, ಅಮ್ಮನ ಜೊತೆ ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗನಿದ್ದ. ಎಲ್ರು ಖುಷಿಯಾಗೇ ಬದುಕು ದೂಡ್ತಿದ್ರು. ಮಕ್ಕಳ ಮೇಲೆ ಪೋಷಕರು ರಾಶಿ ರಾಶಿ ಕನಸುಕಂಡಿದ್ರು. ಆದ್ರೆ, ಸಂಸಾರದಲ್ಲಿ ಬೀಸಿದ ಬಿರುಗಾಳಿಯಿಂದ ಮನೆಯ ಒಡೆಯ ಮಸಣ ಸೇರಿದ್ರೆ, ಮನೆಯೊಡತಿ ಸಾವು ಬದುಕಿನ ನಡುವೆ ಹೋರಾಡ್ತಿದ್ದಾಳೆ.

ಸುಂದರ ಸಂಸಾರಕ್ಕೆ ಕೊಳ್ಳಿ ಇಟ್ಟ ಆ ಒಂದು ವಿಷಯ.. ನಿರ್ಜನ ಪ್ರದೇಶದಲ್ಲಿ ಗಂಡನ ಆತ್ಮಹತ್ಯೆ, ಪತ್ನಿ ಆಸ್ಪತ್ರೆಗೆ ದಾಖಲು
ನಿರ್ಜನ ಪ್ರದೇಶ (ಘಟನೆ ನಡೆದ ಸ್ಥಳ)
Follow us on

ಮೈಸೂರು: ನಾಗೇಶ್ ಹಾಗೂ ಸೌಮ್ಯಾ ಇಬ್ಬರು ಗಂಡ, ಹೆಂಡ್ತಿ. ಮೂಲತಃ ಚಾಮರಾಜನಗರ ಜಿಲ್ಲೆ ಗಾಳಿಪುರ ಗ್ರಾಮದವರು. ಸದ್ಯ ಮೈಸೂರಿನ ಹೊಸಬಂಡಿಕೇರಿಯಲ್ಲಿ ವಾಸವಾಗಿದ್ರು. ಈ ನಾಗೇಶ್ ವೆಲ್ಡಿಂಗ್ ಕೆಲ್ಸ್ ಮಾಡ್ತಿದ್ರು. 15 ವರ್ಷದ ಮಗ ಹಾಗೂ 13ವರ್ಷದ ಮಗಳ ಜೊತೆ ಖುಷಿಯಾಗಿ ಕಾಲ ಕಳೀತಿದ್ರು. ಆದ್ರೆ, ಸಡನ್ ಆಗಿ ಅದೇನ್ ಆಯ್ತೋ ಗೊತ್ತಿಲ್ಲ. ಇವರ ಜೀವನದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಮೈಸೂರು ಹೊರವಲಯದ ಶ್ರೀನಗರದ ಸಮೀಪ, ನಾಗೇಶ್ ಶವ ಪತ್ತೆಯಾಗಿದೆ. ಇಷ್ಟೇ ಅಲ್ಲ, ನಾಗೇಶ್ ಪತ್ನಿ ಸೌಮ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು, ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕುಟುಂಬಸ್ಥರಿಗೂ ಏನಾಗಿದೆ ಅನ್ನೋದು ಗೊತ್ತಾಗಿಲ್ಲ ಯಾಕಂದ್ರೆ ಏನಾಯ್ತು ಅಂತ ಹೇಳಬೇಕಾದ ಸೌಮ್ಯ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ, ಸ್ಥಳೀಯರ ಪ್ರಕಾರ ಗಂಡ ಹೆಂಡತಿ ಇಬ್ಬರೂ ಮೊನ್ನೆ ಸಂಜೆ ವರುಣಾ ನಾಲೆ ಬಳಿ ಬಂದಿದ್ದಾರೆ ಈ ವೇಳೆ ಪತಿ, ಪತ್ನಿಯ ಕುತ್ತಿಗೆ ಕೊಯ್ದು ಕೆಳಗೆ ತಳ್ಳಿದ್ದಾನೆ. ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆವರೆಗೂ ಸೌಮ್ಯಾ ರಕ್ತದ ಮಡುವಿನಲ್ಲಿ ಬಿದ್ದಿದ್ದು, ನಿನ್ನೆ ಬೆಳಗ್ಗೆ ಸ್ಥಳೀಯರೊಬ್ಬರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರಂತೆ.

ಸದ್ಯ, ಮೈಸೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಂಬಂಧಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ. ಇಷ್ಟೇ ಅಲ್ಲ, ನಿಗೂಢವಾದ ಈ ಕೇಸ್ನ ಅಸಲಿ ಸತ್ಯ ಗೊತ್ತಾಗಬೇಕಿದ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೀತಿರೋ ಸೌಮ್ಯಾ ಗುಣಮುಖ ಆಗಬೇಕಿದೆ.

ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಪ್ರಕರಣ: ಹಿರಿಯ ಪುತ್ರಿಗೆ ಸರ್ಕಾರಿ ಉದ್ಯೋಗ, ಮನೆ ದುರಸ್ಥಿಯ ಭರವಸೆ ನೀಡಿದ ಸಚಿವ ಸುರೇಶ್​ ಕುಮಾರ್