ದೆಹಲಿ: ಹೆಜ್ಜಾಲ ಟು ಚಾಮರಾಜನಗರ ರೈಲು ಯೋಜನೆಗೆ ಬೇಗ ಚಾಲನೆ ನೀಡಿ ಅಂತಾ ಸಂಸದೆ ಸುಮಲತಾ ಅಂಬರೀಶ್ ಮನವಿ ಮಾಡಿದರು. ಸಂಸತ್ತಿನಲ್ಲಿ ಮಂಡ್ಯ ಸಂಸದೆ ಸುಮಲತಾ ತಮಗೆ ಸಿಕ್ಕ 30ಸೆಕೆಂಡ್ ಸಮಯದಲ್ಲಿ ಮಾತನಾಡಿ ನೆನೆಗುದಿಗೆ ಬಿದ್ದ ರೈಲು ಯೋಜನೆಗಿರುವ ಅಡೆತಡೆ ನಿವಾರಿಸಲು ಪ್ರಸ್ತಾಪಿಸಿದ್ರು. ರಾಮನಗರ ಜಿಲ್ಲೆಯ ಹೆಜ್ಜಾಲದಿಂದ ಮಂಡ್ಯ ಮೂಲಕ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗದ ಬಗ್ಗೆ ಎರಡೂವರೆ ವರ್ಷದ ಹಿಂದೆಯೇ ಘೋಷಣೆ ಆಗಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷ ಆಡಳಿತದಲ್ಲಿ ಇರೋದ್ರಿಂದ ಯಾವುದೇ ಅಡೆತಡೆ ಇದ್ರೂ ಸುಲಭವಾಗಿ ನಿವಾರಣೆ ಮಾಡಬಹುದು. ಆದ್ದರಿಂದ, ಬಹುನಿರೀಕ್ಷಿತ ರೈಲು ಯೋಜನೆ ಕಾರ್ಯರೂಪಕ್ಕೆ ತರಬೇಕೆಂದು ಸುಮಲತಾ ಅಂಬರೀಶ್ ಒತ್ತಾಯಿಸಿದ್ರು.
ಇನ್ಸ್ಪೆಕ್ಷನ್ ಹೀಗೂ ಮಾಡಬಹುದು ನೋಡಿ: ಆಹಾರದ ಗುಣಮಟ್ಟ ತಿಳಿಯಲು ಊಟ ಸೇವಿಸಿದ ಡಿ.ಸಿ
ಇತ್ತ, ವಿಧಾನಸಭೆಯಲ್ಲಿ ನಡೆಯುತ್ತಿರುವ ಹಲವು ಚರ್ಚೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅದರಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯರ ಮನಸ್ಸಿಗೆ ಅತ್ಯಂತ ಹತ್ತಿರವಾದ ಚರ್ಚೆಯ ವಿಷಯ ಅಂದರೆ ಅದು ಇಂದಿರಾ ಕ್ಯಾಂಟೀನ್ನ ಬಂದ್ ಮಾಡಲು ಬಿಎಸ್ವೈ ಸರ್ಕಾರ ನಡೆಸುತ್ತಿರುವ ಹುನ್ನಾರ ಎಂದು ಹೇಳಿದರೆ ಅದು ತಪ್ಪಾಗಲಾರದು. ಬಡವರ ಪರ ಇರುವ ಕಾಳಜಿಯ ಪ್ರತೀಕವಾಗಿ ತಮ್ಮ ಕನಸಿನ ಕೂಸಾದ ಇಂದಿರಾ ಕ್ಯಾಂಟೀನ್ನ ಬಂದ್ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಮಸಲತ್ತು ನಡೆಸುತ್ತಿದೆ ಎಂದು ಅವರು ಸದಾ ವಾದಿಸುತ್ತಿದ್ದಾರೆ.
ಇತ್ತ, ಇಂದಿರಾ ಕ್ಯಾಂಟೀನ್ನಲ್ಲಿ ಸಾರ್ವಜನಿಕರಿಗೆ ನೀಡುತ್ತಿರುವ ಊಟದ ಗುಣಮಟ್ಟ ಸರಿಯಿದ್ಯೋ ಇಲ್ವೋ ಅಂತಾ ಪರಿಶೀಲನೆ ನಡೆಸಲು ಖುದ್ದು ಜಿಲ್ಲಾಧಿಕಾರಿಯೇ ಆಗಮಿಸಿದ ಪ್ರಸಂಗ ಜಿಲ್ಲೆಯ ಕೊಳ್ಳೇಗಾಲದ ಪಟ್ಟಣದಲ್ಲಿ ನಡೆದಿದೆ. ಇಂದಿರಾ ಕ್ಯಾಂಟೀನ್ನಲ್ಲಿ ಸಾರ್ವಜನಿಕರಿಗೆ ನೀಡುತ್ತಿರುವ ಊಟದ ಗುಣಮಟ್ಟವನ್ನು ತಾವೇ ಸ್ವತಃ ನೋಡಲೆಂದು ಡಿಸಿ ಡಾ.ಎಂ.ಆರ್.ರವಿ ಇಂದು ಕೊಳ್ಳೇಗಾಲದ ಇಂದಿರಾ ಕ್ಯಾಂಟೀನ್‌ಗೆ ಭೇಟಿಕೊಟ್ಟರು. ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ಕ್ಯಾಂಟೀನ್‌ಗೆ ಭೇಟಿ ನೀಡಿದರು.
ಪರಿಶೀಲನೆ ವೇಳೆ ಡಿಸಿ ಡಾ.ರವಿ ಮಧ್ಯಾಹ್ನದ ಊಟ ಸೇವಿಸಿದರು. ಈ ವೇಳೆ, ಡಿಸಿ ರವಿಗೆ ಕೊಳ್ಳೇಗಾಲ ಎಸಿ ಡಾ.ಗಿರೀಶ್ ದಿಲೀಪ್ ಬಡೋಲೆ, ತಹಶೀಲ್ದಾರ್ ಕುನಾಲ್ ಮತ್ತು ನಗರಸಭೆ ಪೌರಾಯುಕ್ತ ವಿಜಯ್ ಸಾಥ್ ನೀಡಿದರು.
ಇದನ್ನೂ ಓದಿ: ರೇಷ್ಮೆ ಇಲಾಖೆ ಅಧಿಕಾರಿಯಿಂದ ಲಂಚ ಸ್ವೀಕಾರ: ಎಸಿಬಿ ದಾಳಿ ವೇಳೆ ಸತ್ಯ ಬಯಲು
Published On - 5:18 pm, Tue, 16 March 21