ಜನ ಬುದ್ಧಿ ಕಲಿಸಿದರೆ ನಾನು ಕಲಿಯುತ್ತೇನೆ: ಸಂಸದೆ ಸುಮಲತಾ ಅಂಬರೀಶ್

| Updated By: guruganesh bhat

Updated on: Jul 13, 2021 | 3:21 PM

ನಾನು ಸಿನಿಮಾದವಳೇ, ಅಲ್ಲಿ ಭ್ರಷ್ಟಾಚಾರ ಇರೋದಿಲ್ಲ. ನಾನು ಏನೇ ಮಾತಾಡಿದ್ರು ರಾಜಕೀಯ ಅರ್ಥ ಕೊಡ್ತಾರೆ. ಜನರು ಬುದ್ಧಿ ಕಲಿಸುತ್ತಾರೆ ಅನ್ನುತ್ತಾರಲ್ಲ. ಜನರು ಬುದ್ಧಿ ಕಲಿಸಿದರೆ ನಾನು ಕಲಿಯುತ್ತೇನೆ ಎಂದು ಸಹ ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಜನ ಬುದ್ಧಿ ಕಲಿಸಿದರೆ ನಾನು ಕಲಿಯುತ್ತೇನೆ: ಸಂಸದೆ ಸುಮಲತಾ ಅಂಬರೀಶ್
ಸುಮಲತಾ ಅಂಬರೀಷ್
Follow us on

ಮಂಡ್ಯ: ನನ್ನ ಬಗ್ಗೆ ಅಸಂಬದ್ಧ ಪದ ಬಳಕೆ ಮಾಡಿ ಮನ್‌ಮುಲ್ ಹಗರಣದ ವಿಚಾರದ ಕುರಿತು ಜನರ ಗಮನವನ್ನು ಕಡಿಮೆಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಆರೋಪಿಸಿದ್ದಾರೆ. ನಾನು ಧ್ವನಿ ಎತ್ತಿದರೆ ರಾಜಕೀಯವಾಗಿ ಬಳಸಿಕೊಳ್ತಾರೆ ಅಂತಾರೆ. ನಾನು ರಾಜಕೀಯವಾಗಿ ಮಾತನಾಡಲ್ಲ. ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ ತಂದೆ ಅಂತಾರೆ. ಇದರಿಂದ ರೈತರಿಗೆ ಏನು ಉಪಯೋಗ ಎಂದು ಅವರು ಪ್ರಶ್ನಿಸಿದ್ದಾರೆ. ನನಗೆ ರಾಜಕೀಯವೂ ಹೊಸದು, ಭ್ರಷ್ಟಾಚಾರವೂ ಹೊಸದು. ನಾನು ಸಿನಿಮಾದವಳೇ, ಅಲ್ಲಿ ಭ್ರಷ್ಟಾಚಾರ ಇರೋದಿಲ್ಲ. ನಾನು ಏನೇ ಮಾತಾಡಿದ್ರು ರಾಜಕೀಯ ಅರ್ಥ ಕೊಡ್ತಾರೆ. ಜನರು ಬುದ್ಧಿ ಕಲಿಸುತ್ತಾರೆ ಅನ್ನುತ್ತಾರಲ್ಲ. ಜನರು ಬುದ್ಧಿ ಕಲಿಸಿದರೆ ನಾನು ಕಲಿಯುತ್ತೇನೆ ಎಂದು ಸಹ ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಸುಮಲತಾ ಪರ ಬೆನ್ನಿಗೆ ನಿಂತಿದ್ದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮನೆ ಮೇಲೆ ಕೆಲ ಕಿಡಿಗೇಡಿಗಳು ಮದ್ಯದ ಬಾಟಲಿ ಎಸೆದು ದಾಳಿ ಮಾಡಿದ್ದರು. ಈ ಘಟನೆ ಬಗ್ಗೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಇಂಥಾ ಕೃತ್ಯ ನಡೆದಿತ್ತು ಎಂದರು.

ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್, ಇದು ಈ ಹಿಂದೆಯೂ ನಡೆದಿತ್ತು. ನಟ ದರ್ಶನ್ ಮನೆ ಮೇಲೂ ಹೀಗೆ ದಾಳಿ ಮಾಡಲಾಗಿತ್ತು. ಅವರ ಮಾತಿಗೆ ಹೆದರಿಲ್ಲ ಅಂದ್ರೆ ಇಂತಹ ವರ್ತನೆ ಇರುತ್ತೆ. ಈ ರೀತಿ ಮಾಡುವುದರಿಂದ ನನಗೆ ಮತ್ತಷ್ಟು ಶಕ್ತಿ ಬರುತ್ತದೆ. ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲವೆಂದರು.

ನಾಳೆ ಬೇಬಿಬೆಟ್ಟ, ಕೆಆರ್ಎಸ್ ಜಲಾಶಯಕ್ಕೆ ಭೇಟಿ ನೀಡುವೆ. ಕೆಆರ್ಎಸ್ನಲ್ಲಿ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸುವೆ. ಗಣಿ & ಭೂವಿಜ್ಞಾನ ಇಲಾಖೆ ಸಚಿವರ ಜತೆ ಮಾತಾಡಿದ್ದೇನೆ. ಈ ವಾರದಲ್ಲಿ ಮಂಡ್ಯ ಜಿಲ್ಲೆಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಗಣಿ ಮತ್ತು ಭೂವಿಜ್ಞಾನ ಸಚಿವ ನಿರಾಣಿ ಭರವಸೆ ನೀಡಿದ್ದಾರೆ ಎಂದರು.

ಇದನ್ನೂ ಓದಿ: 

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಜೊತೆಗಿನ ಫೋಟೋ ವೈರಲ್ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದೇನು?

ಸುಮಲತಾ ಹೆಚ್​ಡಿಕೆ ಪುತ್ರನನ್ನ ಸೋಲಿಸಿದ್ದಕ್ಕೆ ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ: ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಹೇಳಿಕೆ

(Mandya MP Sumalatha Ambareesh says if people teach i will learn )