ಮಂಡ್ಯ: ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 29 ವಿದ್ಯಾರ್ಥಿಗಳು ಅಸ್ವಸ್ಥರಾದಂತಹ ಘಟನೆ ಜಿಲ್ಲೆ ಮದ್ದೂರು ತಾಲೂಕಿನ ಅಂಬರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. 19 ವಿದ್ಯಾರ್ಥಿನಿಯರು, 10 ವಿದ್ಯಾರ್ಥಿಗಳಿಗೆ ವಾಂತಿ ಭೇದಿಯಿಂದ ಮಕ್ಕಳು ಅಸ್ವಸ್ಥಗೊಂಡಿದ್ದರು. ಅಸ್ವಸ್ಥ 29 ವಿದ್ಯಾರ್ಥಿಗಳಿಗೆ ಮಿಮ್ಸ್ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ಘಟಕದಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಬಾರದ ಹಿನ್ನೆಲೆ ವಿದ್ಯಾರ್ಥಿನಿಯರಿಂದ ಪ್ರತಿಭಟನೆ:
ಹುಬ್ಬಳ್ಳಿ: ಅಗಡಿ ಗ್ರಾಮದಲ್ಲಿ ತಡರಾತ್ರಿ ವರೆಗೂ ಸಾರಿಗೆ ಬಸ್ ತಡೆದು ಪ್ರತಿಭಟನೆ ಮಾಡಿದ್ದಾರೆ. ಗ್ರಾಮಸ್ಥರು ಮತ್ತು ಶಾಲಾ ಮಕ್ಕಳಿಂದ ಬಸ್ ನಿಲ್ಲಿಸಿ ಆಕ್ರೋಶ ವ್ಯಕ್ತವಾಗಿದೆ. ಶಾಲಾ ಸಮಯಕ್ಕೆ ಬಸ್ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರಿಂದ ಪ್ರತಿಭಟನೆ ಮಾಡಲಾಗಿದೆ. ಸಾರಿಗೆ ಆಧಿಕಾರಿಯ ಬೇಜವಾಬ್ದಾರಿ ವರ್ತನೆಯಿಂದ ಗ್ರಾಮಸ್ಥರು ರೊಚ್ಚಿಗೆದಿದ್ದಾರೆ. ಬಸ್ ಬಿಡಿಸಿಕೊಳಲು ಇಂದು ಅಗಡಿ ಗ್ರಾಮಕ್ಕೆ ಸಾರಿಗೆ ಅಧಿಕಾರಿಗಳು ಆಗಮಿಸಲಿದ್ದಾರೆ. ಗ್ರಾಮಸ್ಥರ ಬಸ್ ಬಂಧನ ಸಾರಿಗೆ ಅಧಿಕಾರಿಗಳಿಗೆ ತಲೆ ಬಿಸಿಯಾಗಿದೆ. ಹುಬ್ಬಳ್ಳಿ ಗ್ರಾಮೀಣ ದಿಪೋಗೆ ಸೇರಿದ ಬಸ್ ಆಗಿದೆ.
ಈವರೆಗೂ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಇಲ್ಲ!
ಚಾಮರಾಜನಗರ: ಆ ಗ್ರಾಮಕ್ಕೆ ಈವರೆಗೂ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಇಲ್ಲ! ರಸ್ತೆಯ ಸ್ಥಿತಿಯಂತೂ ಅಧೋಗತಿಯಾಗಿದೆ. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೇ ಒಂದು ಖಾಸಗಿ ಬಸ್ ಅವಲಂಬಿಸಬೇಕು. ಪ್ರತಿದಿನ ಹಣ ತೆತ್ತು ಶಾಲೆಗಳಿಗೆ ಪ್ರಯಾಣಿಸಬೇಕು. ತೀರಾ ಹದಗೆಟ್ಟ ರಸ್ತೆ, ದ್ವಿಚಕ್ರ ವಾಹನವಿರಲಿ ಸೈಕಲ್‌ನಲ್ಲು ಹೋಗಲಾರದಷ್ಟು ರಸ್ತೆ ಹದಗೆಟ್ಟಿದೆ. ಇದು ಚಾಮರಾಜನಗರ ತಾಲೂಕು ಕುಮಚಳ್ಳಿ ಗ್ರಾಮಸ್ಥರ ದುಸ್ಥಿತಿ. ಕುಮಚಳ್ಳಿಯಿಂದ ತಮ್ಮಡಹಳ್ಳಿವರೆಗೆ 5 ಕಿಲೋಮೀಟರ್ ರಸ್ತೆ. ಹಳ್ಳಕೊಳ್ಳಗಳೇ ತುಂಬಿದ ರಸ್ತೆ.
ಇಲ್ಲಿ ರಸ್ತೆ ಯಾವುದು ಗುಂಡಿ ಯಾವುದು? ದುರ್ಬೀನು ಹಾಕಿ ಹುಡುಕಬೇಕು. ಅದಗೆಟ್ಟ ರಸ್ತೆಯಿಂದ ಬೇಸತ್ತ ಗ್ರಾಮಸ್ಥರು. ಒಮ್ಮೆ ಮಾತ್ರ ಗುಂಡ್ಲುಪೇಟೆ ಶಾಸಕ ನಿರಂಜನ್‌ಕುಮಾರ್ ಭೇಟಿ ನೀಡಿದ್ದು, ಮತ್ತೆ ತಲೆ ಹಾಕಿಲ್ಲ. ಹಲವು ಬಾರಿ ಮನವಿ ಮಾಡಿದರು ಶಾಸಕರ ನಿರ್ಲಕ್ಷ್ಯ. ಅರಣ್ಯರೋಧನವಾಗಿದೆ ಗ್ರಾಮಸ್ಥರ ಕೂಗು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:10 pm, Fri, 16 September 22