ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೈಕ್ ವೀಲ್ಹಿಂಗ್, ಕಾರಿ​ಗೆ ಡಿಕ್ಕಿಯಾಗಿ ಆಸ್ಪತ್ರೆ ಸೇರಿದ ಸವಾರರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 30, 2023 | 1:03 PM

ರಾಜ್ಯದ ಹಲವು ಜಿಲ್ಲೆಗಳಲ್ಲಿ ವೀಲಿಂಗ್​ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಪೊಲೀಸರು ಎಷ್ಟೇ ಕಠಿಣ ಕ್ರಮ ಕೈಗೊಂಡರು ಪಡ್ಡೆ ಹುಡುಗರನ್ನ ನಿಯಂತ್ರಣ ಮಾಡಲಾಗುತ್ತಿಲ್ಲ. ಅದರಂತೆ ಇದೀಗ ಮಂಡ್ಯ ಜಿಲ್ಲೆಯ ಮದ್ದೂರು ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೈಕ್ ವೀಲ್ಹಿಂಗ್ ಮಾಡುವ ವೇಳೆ ಕಾರ್​ಗೆ ಡಿಕ್ಕಿಯಾಗಿದ ಘಟನೆ ನಡೆದಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೈಕ್ ವೀಲ್ಹಿಂಗ್, ಕಾರಿ​ಗೆ ಡಿಕ್ಕಿಯಾಗಿ ಆಸ್ಪತ್ರೆ ಸೇರಿದ ಸವಾರರು
ಬೆಂಗಳೂರು-ಮೈಸೂರು ಹೆ್ದ್ದಾರಿಯಲ್ಲಿ ವೀಲಿಂಗ್​ ಮಾಡುವ ವೇಳೆ ಅಪಘಾತ
Follow us on

ಮಂಡ್ಯ, ಜು.30: ರಾಜ್ಯದ ಹಲವು ಜಿಲ್ಲೆಗಳಲ್ಲಿ ವೀಲಿಂಗ್(​Wheeling) ಹಾವಳಿ ಹೆಚ್ಚಾಗಿದ್ದು, ಈ ಕುರಿತು ಪೊಲೀಸರು ಎಷ್ಟೇ ಕಠಿಣ ಕ್ರಮ ಕೈಗೊಂಡರು ಪಡ್ಡೆ ಹುಡುಗರನ್ನ ನಿಯಂತ್ರಣ ಮಾಡಲಾಗುತ್ತಿಲ್ಲ. ಇತ್ತೀಚೆಗಷ್ಟೇ ಹಾಸನದಲ್ಲಿ ಪುಂಡರು ವೀಲಿಂಗ್​ ಮಾಡುತ್ತ ಯುವತಿಯರಿಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಓರ್ವ ಯುವತಿ ತಲೆಗೆ ಬಲವಾದ ಏಟು ಬಿದ್ದಿದ್ದರಿಂದ ನಿಮಾನ್ಸ್​ಗೆ ಸೇರಿಸಲಾಗಿತ್ತು. ಅದರಂತೆ ಇದೀಗ ಮಂಡ್ಯ (Mandya) ಜಿಲ್ಲೆಯ ಮದ್ದೂರು ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೈಕ್ ವೀಲ್ಹಿಂಗ್ ಮಾಡುವ ವೇಳೆ ಕಾರ್​ಗೆ ಡಿಕ್ಕಿಯಾಗಿದೆ.

ಗಾಯಗೊಂಡ ಸವಾರರು ಆಸ್ಪತ್ರೆಗೆ ದಾಖಲು

ಇನ್ನು ಈಗಾಗಲೇ ವೀಲಿಂಗ್​ ಪುಂಡಾಟ ಮಾಡುವವರ ವಿರುದ್ದ ಅನೇಕ ದೂರುಗಳು ಬಂದಿದ್ದು, ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೂ, ಇಂತಹ ಕೃತ್ಯಗಳಿಗೆ ಬ್ರೆಕ್​ ಹಾಕಲಾಗಿಲ್ಲ. ಇನ್ನು ಇವರು ಮಾಡುವ ಹುಚ್ಚಾಟಗಳಿಗೆ ಇತರ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಬಂದಿದೆ. ಆದೇನೆ ಇರಲಿ, ಆದಷ್ಟು ಬೇಗ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇನ್ನು ಅಪಘಾತ ವೇಳೆ ಇಬ್ಬರು ಬೈಕ್​ ಸವಾರರಿಗೆ ಗಂಭೀರ ಗಾಯಗಳಾಗಿದ್ದು, ಮದ್ದೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ವೀಲಿಂಗ್​ ಮಾಡುತ್ತಿದ್ದ ಪುಂಡರಿಗೆ ಬಿಸಿ ಮುಟ್ಟಿಸಿದ ಟ್ರಾಫಿಕ್​ ಪೊಲೀಸ್​; ಐವರು ಯುವಕರು ಅರೆಸ್ಟ್​

ನಂಗಲಿ ಆರ್​ಟಿಒ ಚೆಕ್​ಪೋಸ್ಟ್​ ಸಿಬ್ಬಂದಿ ನಿರ್ಲಕ್ಷ್ಯದಿಂದ ಅಪಘಾತ; ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಆಗ್ರಹ

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ RTO ಚೆಕ್​ಪೋಸ್ಟ್​ ಬಳಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನವನ್ನು ಯಾವುದೇ ಸಿಗ್ನಲ್ ನೀಡದೆ ಏಕಾಏಕಿ ನಿಲ್ಲಿಸಿದ ಹಿನ್ನಲೆ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾದ ಘಟನೆ ನಡೆದಿದೆ. ಈ ವೇಳೆ ನಂಗಲಿ ಗ್ರಾಮದ ನಿವಾಸಿ ಗಿರೀಶ್ ಎಂಬುವವರ​ ಕಾಲು ಮುರಿತವಾಗಿ, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಈ ಘಟನೆಗೆ ಆರ್​ಟಿಒ ಚೆಕ್​ಪೋಸ್ಟ್​ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ಯಪಡಿಸಿದ್ದಾರೆ.

ಅಂತಾರಾಜ್ಯ ವಾಹನಗಳ ಚಾಲಕರಿಂದ RTO ಸಿಬ್ಬಂದಿ ಹಣ ವಸೂಲಿ

ಇನ್ನು ಇದರ ಜೊತೆ RTO ಅಧಿಕಾರಿಗಳ ವಿರುದ್ಧ ಆರೋಪವೊಂದು ಕೇಳಿಬಂದಿದೆ. ಹೌದು, ಅಂತರ್​ರಾಜ್ಯ ವಾಹನಗಳ ಚಾಲಕರಿಂದ RTO ಅಧಿಕಾರಿಗಳು ಹಣ ವಸೂಲಿ ಮಾಡುತ್ತಿದ್ದಾರಂತೆ. ಇನ್ನು ಇದನ್ನು ಕೇಳಲು ಸ್ಥಳೀಯರು ಹೋದಾಗ ಸಿಬ್ಬಂದಿಗಳು ಎಣ್ಣೆ ಕುಡಿಯುತ್ತ ಕೂತಿದ್ದು, ಜನರನ್ನು ಕಂಡು ಎಣ್ಣೆ ಬಾಟಲ್ ಸಮೇತ ಓಡಿ ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Sun, 30 July 23