Mandya News: ಟಾರ್ಗೆಟ್ ಮಾಡಿದ್ದು ತಮ್ಮನನ್ನ, ಹಂತಕರ ಕೈಯಲ್ಲಿ ತಗ್ಲಾಕೊಂಡು ದುರಂತ ಅಂತ್ಯ ಕಂಡಿದ್ದು ಅಣ್ಣ

ಟಾರ್ಗೆಟ್ ಮಾಡಿದ್ದು ತಮ್ಮನನ್ನ. ಆದ್ರೆ, ಹಂತಕರ ಕೈಯಲ್ಲಿ ತಗಲಾಕಿ ಕೊಂಡಿದ್ದು ಅಣ್ಣ. ಸಕ್ಕರೆ ನಾಡು ಮಂಡ್ಯದಲ್ಲೊಂದು ಭಯಾನಕ ಕೊಲೆ ನಡೆದಿದೆ.

Mandya News: ಟಾರ್ಗೆಟ್ ಮಾಡಿದ್ದು ತಮ್ಮನನ್ನ, ಹಂತಕರ ಕೈಯಲ್ಲಿ ತಗ್ಲಾಕೊಂಡು ದುರಂತ ಅಂತ್ಯ ಕಂಡಿದ್ದು ಅಣ್ಣ
ಕೊಲೆಯಾದ ವೆಂಕಟೇಶ್
Follow us
ರಮೇಶ್ ಬಿ. ಜವಳಗೇರಾ
|

Updated on:Jun 05, 2023 | 2:18 PM

ಮಂಡ್ಯ: ಹಂತಕರು ಟಾರ್ಗೆಟ್ ಮಾಡಿದ್ದು ತಮ್ಮನನ್ನು. ಆದ್ರೆ, ಅಣ್ಣ ತಗಲಾಕಿಕೊಂಡು ದುರಂತ ಅಂತ್ಯಕಂಡಿದ್ದಾನೆ. ತಮ್ಮನ ಮೇಲಿನ ಸೇಡಿಗೆ ಅಣ್ಣನನ್ನ ಅಪಹರಿಸಿಕೊಂಡು ಹೋಗಿ  ಕೊಲೆ ಮಾಡಲಾಗಿದೆ. ಹೌದು..ದುಷ್ಕರ್ಮಿಗಳು ತಮ್ಮನ ಮೇಲಿನ ಸೇಡಿಗೆ ಅಣ್ಣನನ್ನ ಕಿಡ್ಯ್ನಾಪ್ ಮಾಡಿ ಬರ್ಬರವಾಗಿ ಹತ್ಯೆಗೈದು ಸುಟ್ಟು ಹಾಕಿರುವ ಘಟನೆ ಮಂಡ್ಯದ(Mandya) ಸಾಥನೂರು ಗ್ರಾಮದಲ್ಲಿ ನಡೆದಿದೆ. ಪೊಲೀಸರ ನೆಪದಲ್ಲಿ ಬಂದ ದುಷ್ಕರ್ಮಿಗಳು, ವೆಂಕಟೇಶ್ ನನ್ನ ಕಿಡ್ನ್ಯಾಪ್ ಮಾಡಿಕೊಂಡು ಹೋಗಿ ಈರೇಗೌಡನ ಕೊಪ್ಪಲು ಅರಣ್ಯಪ್ರದೇಶದಲ್ಲಿ ಕೊಲೆ ಮಾಡಿ ಸುಟ್ಟು ಹಾಕಿದ್ದು, 13 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮದ್ವೆಗೆ 5 ದಿನ ಮೊದಲೇ ಯುವಕನ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಹಿಳೆಯೊಂದಿಗಿನ ಲವ್ವಿಡವ್ವಿಯೇ ಕಾರಣ

ಭೀಮೇಶ್ ಹಾಗೂ ವಿನಯ್ ಎನ್ನುವರು ಹಣಕಾಸಿನ ವಿಚಾರಕ್ಕೆ ಕೊಲೆಯಾದ ವೆಂಕಟೇಶ್ ಸಹೋದರ ರಮೇಶ್ ಜೊತೆ ಗಲಾಟೆ ಮಾಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೆ ಮೇ 23 ರಂದು ಪೊಲೀಸರೆಂದು ಹೇಳಿಕೊಂಡು ರಮೇಶ್ ನನ್ನು ಹುಡುಕಿಕೊಂಡು ಅವರ ಮನೆ ಬಂದಿದ್ದರು. ಆದ್ರೆ, ಮನೆಯಲ್ಲಿ ತಮ್ಮ ರಮೇಶ್ ಇಲ್ಲದ ಕಾರಣ ಆತನ ಅಣ್ಣ ವೆಂಕಟೇಶ್​ನನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದರು. ಬಳಿಕ ವೆಂಕಟೇಶ್​ನನ್ನು ಹತ್ಯೆ ನಂತರ ಈರೇಗೌಡನ ಕೊಪ್ಪಲು ಅರಣ್ಯಪ್ರದೇಶದಲ್ಲಿ ಸುಟ್ಟು ಹಾಕಿದ್ದಾರೆ. ಪ್ರಕರಣ ನಡೆದು 13 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಮಂಡ್ಯ ಗ್ರಾಮಾಂತರ ಪೊಲೀಸರು ನಾಲ್ವರು ಕೊಲೆ ಪಾತಕಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸೇಡು ತೀರಿಸಿಕೊಳ್ಳಲು ವೆಂಕಟೇಶ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ಪೊಲೀಸರ ಮಾಹಿತಿ

ಈ ಹಿಂದೆ ಹಣಕಾಸು ಸಮಸ್ಯೆ ಬಗೆಹರಿಸಲು ರಮೇಶ್ ಭೀಮೇಶ್‌ ನನ್ನು ಬೆಂಗಳೂರಿಗೆ ಕೆರೆಸಿಕೊಂಡಿದ್ದ, ತನ್ನನ್ನು ಸ್ಥಳಕ್ಕೆ ಆಗಮಿಸಿದಾಗ ರಮೇಶ್ ತನ್ನ ಸಹಚರರೊಂದಿಗೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಭೀಮೇಶ್ ದೂರು ದಾಖಲಿಸಿದ್ದನು. ಈ ಘಟನೆಯಲ್ಲಿ ಬೆಂಗಳೂರು ಪೊಲೀಸರಿಂದ ಬಂಧನವಾಗಿದ್ದ ರಮೇಶ್‌ನನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ರಮೇಶ್ ಬಿಡುಗಡೆಯ ಬಗ್ಗೆ ಮಾಹಿತಿ ತಿಳಿದ ಭೀಮೇಶ್ ಮತ್ತು ಅವನ ಸಹಚರರು ರಮೇಶ್‌ನನ್ನು ಹತ್ಯೆ ಮಾಡಲು ಹೊಂಚು ಹಾಕಿದ್ದರು. ಅದರಂತೆ ಪೊಲೀಸರು ಎಂದು ಹೇಳಿಕೊಂಡು ರಮೇಶ್​ ಮನೆ ಬಂದಿದ್ದರು. ಆದ್ರೆ, ಮನೆಯಲ್ಲಿ ರಮೇಶ್ ಇಲ್ಲದ ಕಾರಣ ಅಣ್ಣ ವೆಂಕಟೇಶ್ ನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Published On - 2:17 pm, Mon, 5 June 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ