ಬಡವರ ಅಕ್ಕಿಗೂ ಅಂಟಿದ ಕಮಿಷನ್ ಭೂತ: ಅಧಿಕಾರಿಗಳ ವಿರುದ್ಧ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಗಂಭೀರ ಆರೋಪ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 17, 2023 | 6:02 PM

ರಾಜ್ಯದಲ್ಲಿ ಬಡವರಿಗೆ ನೀಡುವ ಪಡಿತರ ಮೇಲೂ ಕಮಿಷನ್​ ಭೂತ ಆವರಿಸಿದ್ದು, ಪ್ರತಿ ಕಾರ್ಡಿಗೂ ಇಂತಿಷ್ಟು ಕಮಿಷನ್ ಕೊಡಬೇಕು ಎಂದು ಅಧಿಕಾರಿಗಳಿಂದ ಬೇಡಿಕೆ ಇಡಲಾಗಿದೆ ಎಂದು ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಗಂಭೀರ ಆರೋಪ ಮಾಡಿದ್ದಾರೆ.  

ಬಡವರ ಅಕ್ಕಿಗೂ ಅಂಟಿದ ಕಮಿಷನ್ ಭೂತ: ಅಧಿಕಾರಿಗಳ ವಿರುದ್ಧ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಗಂಭೀರ ಆರೋಪ
ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ
Follow us on

ಮಂಡ್ಯ, ಆಗಸ್ಟ್​ 17: ರಾಜ್ಯ ರಾಜಕೀಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದ ಗುತ್ತಿಗೆದಾರರ ಕಮಿಷನ್ ಆರೋಪ ಮತ್ತು ಸಚಿವರ ವಿರುದ್ಧ ಶಾಸಕರ ಅಸಮಾಧಾನದ ಪತ್ರ ಪ್ರಕರಣಗಳು ಇನ್ನೇನು ತಣ್ಣಗಾಗುವ ಮೊದಲೇ ಮತ್ತೊಂದು ಗಂಭೀರ ಆರೋಪ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಕೇಳಿಬಂದಿದೆ. ರಾಜ್ಯದಲ್ಲಿ ಬಡವರಿಗೆ ನೀಡುವ ಪಡಿತರದ ಮೇಲೂ ಕಮಿಷನ್​ ಭೂತ ಆವರಿಸಿದ್ದು, ಪ್ರತಿ ಕಾರ್ಡಿಗೂ ಇಂತಿಷ್ಟು ಕಮಿಷನ್ ಕೊಡಬೇಕು ಎಂದು ಅಧಿಕಾರಿಗಳು ಬೇಡಿಕೆ ಇಡುತ್ತಿದ್ದಾರೆ ಎಂದು ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.

ಅಧಿಕಾರಿ ವಿರುದ್ಧ ತನಿಖೆ ನಡೆಸಿ ಸಸ್ಪೆಂಡ್ ಮಾಡಿ: ಕೃಷ್ಣಪ್ಪ ಆಗ್ರಹ

ನಗರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಒಂದು ಅಂಗಡಿಯಿಂದ 500 ಕಾರ್ಡ್ ಇದ್ದರೇ ₹3000 ರೂ. ಕಮಿಷನ್, 800 ಕಾರ್ಡ್​ಗಳು ಇದ್ದರೆ ₹4000 ರೂ. ಕಮಿಷನ್ ಬೇಡಿಕೆ ಇಟ್ಟಿದ್ದಾರೆ. 1 ಸಾವಿರ ರೇಷನ್ ಕಾರ್ಡ್​ಗಳಿದ್ದರೇ ₹4000 ಕಮಿಷನ್​ಗೆ ಬೇಡಿಕೆ ಇಡಲಾಗಿದ್ದು, ಮೇಲಧಿಕಾರಿಗಳು ಟಾರ್ಗೆಟ್ ಮಾಡಿ ತೊಂದರೆ ಕೊಡುತ್ತಿದ್ದಾರೆ. ಕಮಿಷನ್​ಗೆ ಬೇಡಿಕೆ ಇಟ್ಟಿರುವ ಅಧಿಕಾರಿ ವಿರುದ್ಧ ತನಿಖೆ ನಡೆಸಿ ಸಸ್ಪೆಂಡ್ ಮಾಡುವಂತೆ ಕೃಷ್ಣಪ್ಪ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ಗೆ ಮರು ಸೇರ್ಪಡೆಗೆ ಬೆಂಬಲಿಗರ ಮನವಿ, ಸಮಯ ಕೇಳಿದ ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್

ಸಿಎಂ ಸಿದ್ಧರಾಮಯ್ಯ ಅವರೇ ನಿಮ್ಮ ಕನಸಿನ ಯೋಜನೆ ಹಳ್ಳ ಹಿಡಿಯೋದು ಬೇಡ. ಸಭೆ ಕರೆಯಿರಿ ಭ್ರಷ್ಟ ಅಧಿಕಾರಿಗಳ ಬಗ್ಗೆ ನಾವು ಮಾಹಿತಿ‌ ಕೊಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡಿಗೆ ಹೆಚ್ಚುವರಿ ಕಾವೇರಿ ನೀರು, ನಮ್ಮ ಹೊಟ್ಟೆಗೇ ಹಿಟ್ಟಿಲ್ಲ, ನೆರೆಮನೆಯವರ ಜುಟ್ಟಿಗೆ ಮಲ್ಲಿಗೆ: ಹೆಚ್​ಡಿಕೆ ಕಿಡಿ

ಫುಡ್ ಶಿರಸ್ತೇದಾರ್ ಕಿರುಕುಳ ಕೊಡುತ್ತಿರುವ ಬಗ್ಗೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಿಂದ ದೂರು ಬಂದಿತ್ತು. ಹೀಗಾಗಿ ‌1 ತಿಂಗಳ ಹಿಂದೆಯೇ ನಾವು ಸಭೆ ಕೂಡ ಮಾಡಿದ್ದೇವೆ. ಕೃಷ್ಣಮೂರ್ತಿ ಎಂಬ ವ್ಯಕ್ತಿ ಗೋದಾಮು ಬಳಿ ಮಾಲೀಕರಿಗೆ ಧಮ್ಕಿ ಹಾಕಿಸಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು, ಮಂತ್ರಿಗಳ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.

ಭಾರಿ ಸಂಚಲನ ಸೃಷ್ಟಿಸಿದ ಗುತ್ತಿಗೆದಾರರ ಕಮಿಷನ್ ಆರೋಪ

ರಾಜ್ಯ ರಾಜಕೀಯದಲ್ಲಿ ಗುತ್ತಿಗೆದಾರರ ಕಮಿಷನ್ ಆರೋಪ ಭಾರಿ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಬಿಎಂಪಿಯ ಕಂಟ್ರ್ಯಾಕ್ಟರ್ ಲಂಚದ ಆರೋಪ ಸಾಕಷ್ಟು ಸದ್ದು ಮಾಡುತ್ತಿದೆ. ಗುತ್ತಿಗೆದಾರರ 15 ಪರ್ಸೆಂಟ್ ಕಮಿಷನ್​ ಆರೋಪವನ್ನು ಕಾಂಗ್ರೆಸ್​ ಸರ್ಕಾರ ತಳ್ಳಿ ಹಾಕಿತ್ತು. ಸದ್ಯ ಇದೀಗ ಮತ್ತೊಂದು ಕಮಿಷನ್​ ಆರೋಪ ಕೇಳಿಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:00 pm, Thu, 17 August 23