ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ (Srirangapatna Jama Masjid) ಸರ್ವೆಗೆ ನಿರ್ದೇಶನ ಕೋರಿ ಭಜರಂಗ ಸೇನೆ ಸಂಘಟನೆ ಬೆಂಗಳೂರಿನ ಹೈಕೋರ್ಟ್‌ನಲ್ಲಿ (High Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಯನ್ನು ಸಲ್ಲಿಸಿದೆ. ಅರ್ಜಿಯಲ್ಲಿ ವಿವಾದಿತ ಸ್ಥಳದಲ್ಲಿ ಮೂಡಲ ಬಾಗಿಲು ಆಂಜನೇಯ ದೇಗುಲವಿತ್ತು. ಗರುಡ ಕಂಭ, ಸ್ತೂಪ, ಹಿಂದೂ ದೇವರ ಚಿತ್ರಗಳಿವೆ. ಟಿಪ್ಪು ಅವಧಿಯಲ್ಲಿ ಆಂಜನೇಯ ದೇಗುಲ ಮಸೀದಿಯಾಗಿಸಲಾಗಿದೆ. ಹೀಗಾಗಿ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಸರ್ವೆ, ಉತ್ಖನನ ನಡೆಸಬೇಕು. ಮತ್ತು ಮದರಸಾ ತೆರವುಗೊಳಿಸಿ ದೇಗುಲವಾಗಿ ಸಂರಕ್ಷಿಸಲು ನಿರ್ದೇಶನ ನೀಡುವಂತೆ ಮನವಿ ಮಾಡಿದೆ.
ಆರ್ಕಿಯಲಾಜಿಕಲ್ ಸರ್ವೆ ಆಫ್ ಮೈಸೂರು-1912 ಪುಸ್ತಕದಲ್ಲಿ ಏನಿದೆ?
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಹಿನ್ನೆಲೆ ಹಿಂದೂಪರ ಮುಖಂಡರು ಸ್ಫೋಟಕ ಸಾಕ್ಷ್ಯ ಬಹಿರಂಗಪಡಿಸಿದ್ದರು. ದೆಹಲಿಯ ಪುರಾತತ್ವ ಇಲಾಖೆಯ ಆರ್ಕಿಯಲಾಜಿಕಲ್ ಸರ್ವೆ ಆಫ್ ಮೈಸೂರು-1912 ಪುಸ್ತಕದಲ್ಲಿ ಜಾಮಿಯಾ ಮಸೀದಿಯ ಸ್ಫೋಟಕ ರಹಸ್ಯ ಬಯಲಾಗಿದೆ. ಮೂಡಲಬಾಗಿಲು ಆಂಜನೇಯ ದೇಗುಲದ ವಿಷಯ ಪ್ರಸ್ತಾಪ ಮಾಡಲಾಗಿದ್ದು, ಟಿಪ್ಪು ಪರಿವೀಕ್ಷಣಾ ಗೋಪುರ ನಿರ್ಮಿಸಿದ್ದ ಎಂದು ರಾಜ್ಯ ವಕ್ಫ್ ಬೋರ್ಡ್ ಸಮರ್ಥನೆ ಮಾಡಿಕೊಳ್ಳುತ್ತಿತ್ತು. ಆದರೆ ಆರ್ಕಿಯಲಾಜಿಕಲ್ ಸರ್ವೆ ಪುಸ್ತಕ ಬೇರೆ ಹೇಳಿದೆ. ಕಾವೇರಿ ನದಿಯಲ್ಲಿ ಗೌರಿಖಡ ಎಂಬ ಜಾಗದಲ್ಲಿ ಆಂಜನೇಯನ ಮೂರ್ತಿಯನ್ನು ಟಿಪ್ಪು ಎಸೆದಿದ್ದ. ದಳವಾಯಿ ದೊಡ್ಡಯ್ಯನವರು ಮೂರ್ತಿ ತಂದು ಮರು ಪ್ರತಿಷ್ಠಾಪಿಸಿದರು ಎಂದು ಸರ್ವೆ ಪುಸ್ತಕ ಬಿಚ್ಚಿಟ್ಟಿದೆ.
ಜಾಮೀಯ ಮಸೀದಿ ಶೇ.100ರಷ್ಟು ಮಸೀದಿಯೇ, ಬ್ರಿಟಿಷರ ಉಲ್ಲೇಖವನ್ನು ಒಪ್ಪಲ್ಲ
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಶೇ.100ರಷ್ಟು ಮಸೀದಿಯೇ ಎಂದು ಟಿಪ್ಪು ವಕ್ಫ್ ಬೋರ್ಡ್ ಉಪಾಧ್ಯಕ್ಷ ಆಸಿಫ್ ಸೇಠ್ ಹೇಳಿಕೆ ನೀಡಿದ್ದರು. ಮಸೀದಿ ಇರುವ ಜಾಗ ವಕ್ಫ್ ಬೋರ್ಡ್ಗೆ ಸೇರಿದ್ದಾಗಿದೆ. ಇದರ ನಿರ್ವಹಣೆಯನ್ನು ಎಎಸ್ಐ ಮಾಡುತ್ತಿದೆ. ಟಿಪ್ಪು ವಕ್ಫ್ ಬೋರ್ಡ್ ಯಾವಾಗ ಸ್ಥಾಪನೆ ಆಯ್ತೋ ಅಂದಿನಿಂದ ಇದು ವಕ್ಫ್ ಬೋರ್ಡ್ ಆಸ್ತಿಯಾಗಿದೆ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ಟಿಪ್ಪು ಜಾಗವನ್ನೆಲ್ಲ ಆರ್ಕ್ಯಾಲಜಿ ಡಿಪಾರ್ಟ್ಮೆಂಟ್ ಅವರು ನಿರ್ವಹಣೆಗೆ ಪಡೆದಿದೆ ಎಂದಿದ್ದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:10 pm, Wed, 16 November 22