ಮಂಡ್ಯ: ಮುಂದಿನ ಚುನಾವಣೆಯಲ್ಲಿ ಸುಮಲತಾ ಅಂಬರಿಶ್ (Sumalatha Ambareesh) ಅವರು ಮಂಡ್ಯ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗಲಿದ್ದಾರೆ ಎನ್ನುವ ಊಹಾಪೋಹಳಿಗೆ ತೆರೆ ಬಿದ್ದಿದೆ. ಈ ಬಗ್ಗೆ ಸ್ವತಃ ಸಂಸದ ಸುಮಲತಾ ಅಂಬರೀಶ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಜಕೀಯ ಬಿಟ್ಟರೂ ಮಂಡ್ಯ(Mandya) ಬಿಡಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯದಲ್ಲಿ ಇಂದು(ನ.17) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಂಡ್ಯ ಬಿಡುತ್ತೇನೆಂದು ಒಂದಷ್ಟು ಜನ ಕನಸು ಕಾಣುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಜನರ ಆಸೆಯಂತೆ ನಾನು ಮಂಡಕ್ಕೆ ಬಂದಿದ್ದು. ನಾನ್ಯಾಕೆ ಮಂಡ್ಯ ಜಿಲ್ಲೆ ಬಿಟ್ಟು ಮತ್ತೊಂದು ಕಡೆ ಹೋಗಬೇಕು? ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಜೆಡಿಎಸ್ ನಾಯಕರಿಗೆ ಟಾಂಗ್ ಕೊಟ್ಟರು.
ಬೇರೆ ಕ್ಷೇತ್ರ ಹುಡುಕುತ್ತಿದ್ದೇನೆ ಅನ್ನುವುದು ಯಾರ ಕನಸು ಗೊತ್ತಿಲ್ಲ. ನಾನು ರಾಜಕೀಯಕ್ಕೆ ಬಂದಿರುವುದೇ ಮಂಡ್ಯಕ್ಕೋಸ್ಕರ. ರಾಜಕೀಯದಲ್ಲಿ ಏನೇನೋ ಆಗಬೇಕೆಂದು ಮಂಡ್ಯಕ್ಕೆ ಬಂದಿಲ್ಲ. ಇಂದಲ್ಲ ನಾಳೆ ರಾಜಕೀಯ ಬಿಡುತ್ತೇನೆ. ಆದರೆ ಮಂಡ್ಯ ಬಿಡಲ್ಲ. ಮಂಡ್ಯ ಬಿಟ್ಟು ಹೋಗಲ್ಲವೆಂದು ಸಂಸದೆ ಸುಮಲತಾ ಹೇಳಿದರು. ಈ ಮೂಲಕ ಕ್ಷೇತ್ರ ಬಿಟ್ಟು ಹೋಗುತ್ತಾರೆ ಎನ್ನುವ ಚರ್ಚೆಗಳಿಗೆ ಪೂರ್ಣವಿರಾಮ ಇಟ್ಟರು.
ಮಂಡ್ಯ ಜನರ ಆಸೆ ಪ್ರಕಾರ ನಾನು ಮಂಡ್ಯಕ್ಕೆ ಬಂದಿದ್ದು. ಮಂಡ್ಯ ಬಿಟ್ಟು ಮತ್ತೊಂದು ಕಡೆ ಯಾಕೆ ಹೋಗಬೇಕು.? ಕ್ಷೇತ್ರ ಹುಡುಕುತ್ತಿದ್ದೇನೆ ಅನೋದು ಯಾರ ಕನಸು ಅಂತ ಗೊತ್ತಿಲ್ಲ. ಅವರ ಕನಸಿಗೆ ನಾನು ನೀರು ಚೆಲ್ಲಿದ ಹಾಗೆ ಎಂದು ತಿರುಗೇಟು ನೀಡಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 2:58 pm, Thu, 17 November 22