ಮಂಡ್ಯ: ಅರ್ಧಕ್ಕೆ ನಿಂತ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ; ಕೆಲಸ ಪೂರ್ಣಗೊಳಿಸದೇ ಗುತ್ತಿಗೆದಾರ ಎಸ್ಕೇಪ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 05, 2023 | 8:43 PM

ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಖ್ಯಾತಿ ಪಡೆದಿರುವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ, ಇದೀಗ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೇ ಗುತ್ತಿಗೆದಾರ ಎಸ್ಕೇಪ್ ಆಗಿರುವುದರಿಂದ ದಶಪಥ ಹೆದ್ದಾರಿಯ ಸರ್ವಿಸ್ ರಸ್ತೆಗಳಲ್ಲಿ ವಾಹನ ಸವಾರರು ಸಂಚಾರಿಸಲು ಹರಸಾಹಸ ಪಡುವಂತೆ ಆಗಿದ್ದು, ಸಾವು ನೋವುಗಳು ಕೂಡ ಹೆಚ್ಚಾಗುತ್ತಿವೆ.

ಮಂಡ್ಯ: ಅರ್ಧಕ್ಕೆ ನಿಂತ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ; ಕೆಲಸ ಪೂರ್ಣಗೊಳಿಸದೇ ಗುತ್ತಿಗೆದಾರ ಎಸ್ಕೇಪ್
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇ
Follow us on

ಮಂಡ್ಯ, ನ.05: ಸಾಕಷ್ಟು ಸದ್ದು ಮಾಡಿರುವ ನೂತನ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಮಧ್ಯೆ ಕಾಮಗಾರಿ ಪೂರ್ಣಗೊಳಿಸದೇ, ಅರ್ಧಕ್ಕೆ ನಿಲ್ಲಿಸಿ ಸಂಬಂಧಪಟ್ಟ ಗುತ್ತಿಗೆದಾರ ಎಸ್ಕೇಪ್ ಆಗಿದ್ದಾನೆ. ಅಂದಹಾಗೆ ಸಾವಿರಾರು ಕೋಟಿ ರೂ ವೆಚ್ಚದಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ(Bengaluru-Mysuru Expressway)ಯನ್ನ ನಿರ್ಮಾಣ ಮಾಡಿ, ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಳಿಸಲಾಗಿದೆ. ಆದರೆ, ದಶಪಥ ಹೆದ್ದಾರಿಯಲ್ಲಿ ಆರು ಪಥ ಬಾರಿ ವಾಹನಗಳಿಗೆ, ನಾಲ್ಕು ಪಥ ಸರ್ವಿಸ್ ರಸ್ತೆಗೆಂದು ಮೀಸಲಿಡಲಾಗಿದೆ. ಆದರೆ, ಸರ್ವಿಸ್ ರಸ್ತೆಯಲ್ಲಿ ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ.

ಹೌದು, ಅಲ್ಲಲ್ಲಿ ಕಾಮಗಾರಿಗಳು ಅರ್ಧಕ್ಕೆ ನಿಂತಿದೆ. ಇದರಿಂದ ಸರ್ವಿಸ್ ರಸ್ತೆಯಲ್ಲಿ ಸಂಚಾರಿಸುವ ವಾಹನ ಸವಾರರು ಪರದಾಡುವಂತೆ ಆಗಿದೆ. ಅಲ್ಲದೆ ಸರ್ವಿಸ್ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಜೊತೆಗೆ ಹೆದ್ದಾರಿಯಲ್ಲಿ ಮೇಲ್ಸೆತುವೆ, ಅಂಡರ್ ಪಾಸ್, ಸ್ಕೈ ವಾಕರ್​ಗಳ ನಿರ್ಮಾಣ ಮಾಡದೇ, ಕಾಮಗಾರಿಯ ಗುತ್ತಿಗೆಯನ್ನು ಪಡೆದಿದ್ದ ಡಿಬಿಎಲ್ ಕಂಪನಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೂ ಕೂಡ ಕಾರಣವಾಗಿದೆ.

ಇದನ್ನೂ ಓದಿ:ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತ, ಪಲ್ಟಿಯಾದ ಕಂಟೇನರ್ ಕೆಳಗೆ ಸಿಲುಕಿ ಚಾಲಕನ ನರಳಾಟ

ಲೀಸ್ ಪಡೆದ ಜಮೀನಿಗೂ ಹಣ ಕೊಡದೇ ಎಸ್ಕೇಪ್

ಇನ್ನು ದಶಪಥ ಹೆದ್ದಾರಿಯಲ್ಲಿ ಕಾಮಗಾರಿಗೊಳ್ಳದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತೆ ಆಗಿದೆ. ಅದರಲ್ಲೂ ಮಳೆ ಬಂದರೂ ಸರ್ವಿಸ್ ರಸ್ತೆಯಲ್ಲಿ ಸಂಚಾರಿಸಲು ಸಾಧ್ಯವಾಗುವುದಿಲ್ಲ. ಇನ್ನು ಹೆದ್ದಾರಿಯಲ್ಲಿ ಟೋಲ್ ದರ ದುಬಾರಿಯಾಗಿರುವುದರಿಂದ ಬಹುತೇಕ ವಾಹನಗಳು ಸರ್ವಿಸ್ ರಸ್ತೆಯನ್ನೇ ಬಳಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಮಗಾರಿಯನ್ನ ಸಂಬಂಧಪಟ್ಟ ಗುತ್ತಿಗೆದಾರ ಪೂರ್ಣಗೊಳಿಸದೇ ಹೋಗಿದ್ದಾರೆ. ಇನ್ನು ಕಾಮಗಾರಿ ವೇಳೆ ಹಲವು ರೈತರಿಂದ ಜಮೀನಿಗಳನ್ನ ಲೀಸ್ ಪಡೆದು, ತಮ್ಮ ಪರಿಕರಗಳನ್ನ ಜಮೀನಿನಲ್ಲಿ ಇಟ್ಟುಕೊಳ್ಳಲಾಗಿತ್ತು. ಆದರೆ ಕಾಮಗಾರಿಯನ್ನ ಮುಗಿಸಿದ ನಂತರ ಪರಿಕರಗಳನ್ನ ಎತ್ತಿಕೊಂಡು ಹೋಗಿದ್ದು, ಲೀಸ್ ಪಡೆದ ಜಮೀನಿನ ಮಾಲೀಕರಿಗೆ ಹಣವನ್ನ ನೀಡಿಲ್ಲ.

ಈ ಕುರಿತು ಜಿಲ್ಲಾಧಿಕಾರಿಗಳಿಗೂ ಸಹ ರೈತರು ದೂರು ನೀಡಿದ್ದಾರೆ. ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಕೂಡ ಪತ್ರ ಬರೆದ ಕಾಮಗಾರಿ ಪೂರ್ಣ ಗೊಳಿಸುವಂತೆ ಸೂಚನೆ ನೀಡಿದ್ದಾರೆ. ಒಟ್ಟಾರೆ ದಶಪಥ ಹೆದ್ದಾರಿಯ ಸರ್ವಿಸ್ ರಸ್ತೆಗಳ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ