ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತ, ಪಲ್ಟಿಯಾದ ಕಂಟೇನರ್ ಕೆಳಗೆ ಸಿಲುಕಿ ಚಾಲಕನ ನರಳಾಟ

ಚನ್ನಪಟ್ಟಣ ತಾಲೂಕಿನ ಕುಂತೂರುದೊಡ್ಡಿ ಗ್ರಾಮದ ಬಳಿ ಕಂಟೇನರ್ ಪಲ್ಟಿಯಾಗಿದ್ದು ಕಂಟೇನರ್ ಅಡಿ ಸಿಲುಕಿ ಚಾಲಕ‌ ನರಳಾಡಿದ್ದಾನೆ. ಹೈವೆಯಿಂದ ಸರ್ವಿಸ್ ರಸ್ತೆಗೆ ಕಂಟೇನರ್ ಉರುಳಿದ್ದು ಸ್ಥಳೀಯರು, ಪೊಲೀಸರು ಚಾಲಕನನ್ನು ರಕ್ಷಿಸಲು ಹರಸಾಹಸಪಟ್ಟಿದ್ದಾರೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತ, ಪಲ್ಟಿಯಾದ ಕಂಟೇನರ್ ಕೆಳಗೆ ಸಿಲುಕಿ ಚಾಲಕನ ನರಳಾಟ
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತ
Follow us
| Updated By: ಆಯೇಷಾ ಬಾನು

Updated on: Sep 15, 2023 | 10:13 AM

ರಾಮನಗರ, ಸೆ.15: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ(Bengaluru Mysuru Expressway) ಆರಂಭವಾದ ದಿನದಿಂದಲೂ ಒಂದಲ್ಲಾವೊಂದು ವಿಷಯಕ್ಕೆ ಚರ್ಚೆಯಾಗುತ್ತಲೇ ಬಂದಿದೆ. ಮಾರ್ಚ್ ನಲ್ಲಿ ಲೋಕಾರ್ಪಣೆಗೊಂಡ ಈ ರಸ್ತೆಯಲ್ಲಿ ಹೆಚ್ಚು ಅಪಾಘತಗಳು ಸಂಭವಿಸಿವೆ(Accident). ಈಗ ಮತ್ತೊಂದು ಅವಘಡವಾಗಿದೆ. ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಟೈರ್ ಸ್ಪೋಟಗೊಂಡು ಸಿಮೆಂಟ್ ತುಂಬಿದ ಕಂಟೇನರ್ ಪಲ್ಟಿಯಾಗಿದೆ. ಚನ್ನಪಟ್ಟಣ ತಾಲೂಕಿನ ಕುಂತೂರುದೊಡ್ಡಿ ಗ್ರಾಮದ ಬಳಿ ಕಂಟೇನರ್ ಪಲ್ಟಿಯಾಗಿದ್ದು ಕಂಟೇನರ್ ಅಡಿ ಸಿಲುಕಿ ಚಾಲಕ‌ ನರಳಾಡಿದ್ದಾನೆ.

ಹೈವೆಯಿಂದ ಸರ್ವಿಸ್ ರಸ್ತೆಗೆ ಕಂಟೇನರ್ ಉರುಳಿದ್ದು ಸ್ಥಳೀಯರು, ಪೊಲೀಸರು ಚಾಲಕನನ್ನು ರಕ್ಷಿಸಲು ಹರಸಾಹಸಪಟ್ಟಿದ್ದಾರೆ. ಸದ್ಯ ಜೆಸಿಬಿ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿ ಚಾಲಕನನ್ನು ರಕ್ಷಿಸಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಸಿಮೆಂಟ್ ಲೋಡ್ ತುಂಬಿಕೊಂಡು ಕಂಟೇನರ್ ಹೋಗ್ತಿತ್ತು. ಈ ವೇಳೆ ಟೈರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಬೃಹತ್ ಕಂಟೇನರ್ ಹೈವೆಯಿಂದ ಸರ್ವಿಸ್ ರಸ್ತೆಗೆ ಉರುಳಿದೆ. ಈ ಪರಿಣಾಮ ಲಾರಿ ಇಂಜಿನ್ ಮತ್ತು ಕಂಟೇನರ್ ಇಬ್ಬಾಗವಾಗಿದೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಟೋ, ಬೈಕ್​ ಮುಖಾಮುಖಿ; ಓರ್ವ ಸಾವು

ಮೈಸೂರು: ಲಿಂಗದೇವರು ಕೊಪ್ಪಲಿನಲ್ಲಿ ಆಟೋ, ಬೈಕ್​ ಮುಖಾಮುಖಿ ಡಿಕ್ಕಿಯಾಗಿ ಸ್ವಾಮಿ(30) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಂಜು, ಕುಮಾರ್​ ಎಂಬುವರಿಗೆ ಗಾಯಗಳಾಗಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದ ಬಳಿಕ ಆಟೋ ಚಾಲಕ ಪರಾರಿಯಾಗಿದ್ದಾನೆ. ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ