Bharat Jodo Yatra: ಕರ್ನಾಟಕದಲ್ಲಿ 6ನೇ ದಿನ: ಚಲುವರಾಯಸ್ವಾಮಿಯ ಮಗ, ನಟ ಸಚಿನ್ ಜೊತೆ ರಾಹುಲ್ ಗಾಂಧಿ ಪೆಪ್ ಟಾಕ್

Rahul Gandhi: ತಮ್ಮ ಮಗುವಿನೊಂದಿಗೆ ಬಂದು ರಾಹುಲ್ ಪರಿಚಯ ಮಾಡಿಕೊಂಡ ತಂದೆಯ ಜೊತೆ ರಾಹುಲ್ ಸೆಲ್ಫಿ ತೆಗೆಸಿಕೊಂಡರು. ತಮ್ಮದೇ ಮೊಬೈಲ್ ನಲ್ಲಿ ರಾಹುಲ್ ಮಗುವಿನ ಫೋಟೋ ಸೆರೆ ಹಿಡಿದರು. ಮಗುವಿನ ಫೋಟೋ ತೆಗೆದು ರಾಹುಲ್ ಖುಷಿಪಟ್ಟರು. ಪುಟಾಣಿ ಮಗು ರಾಹುಲ್ ಗೆ ಶೇಕ್ ಹ್ಯಾಂಡ್ ನೀಡಿತು.

Bharat Jodo Yatra: ಕರ್ನಾಟಕದಲ್ಲಿ 6ನೇ ದಿನ: ಚಲುವರಾಯಸ್ವಾಮಿಯ ಮಗ, ನಟ ಸಚಿನ್ ಜೊತೆ  ರಾಹುಲ್ ಗಾಂಧಿ ಪೆಪ್ ಟಾಕ್
Bharat Jodo Yatra: ಕರ್ನಾಟಕದಲ್ಲಿ 6ನೇ ದಿನ: ಚಲುವರಾಯಸ್ವಾಮಿಯ ಮಗ, ನಟ ಸಚಿನ್ ಜೊತೆ ರಾಹುಲ್ ಪೆಪ್ ಟಾಕ್
Updated By: ಸಾಧು ಶ್ರೀನಾಥ್​

Updated on: Oct 07, 2022 | 11:44 AM

ಮಂಡ್ಯ: ಆರನೇ ದಿನವಾದ ಇಂದು ಶುಕ್ರವಾರ ಬೆಳಗ್ಗೆ 7 ಗಂಟೆಗೆ ನಿಗದಿಯಂತೆ ಭಾರತ್ ಜೋಡೋ ಯಾತ್ರೆ (Bharat Jodo Yatra) ಕರ್ನಾಟಕದಲ್ಲಿ ಕೆ. ಮಲ್ಲೇನಹಳ್ಳಿಯಿಂದ ಮುಂದುವರಿಯಿತು (Mandya). 11 ಕಿಮೀ ದಾಟಿದ ಪಾದಯಾತ್ರೆ ಅಂಚೆ ಚಿಟ್ಟನಹಳ್ಳಿ ಮೈದಾನದಲ್ಲಿ ಬ್ರೇಕ್ ತೆಗೆದುಕೊಂಡಿದೆ. ಮತ್ತೆ 4 ಗಂಟೆಗೆ ಇಂದಿನ ಪಾದಯಾತ್ರೆ ಪ್ರಾರಂಭವಾಗಲಿದೆ. 7 ಗಂಟೆಗೆ ಬೆಳ್ಳೂರ್ ಟೌನ್ ಬಸ್ ನಿಲ್ದಾಣದ ಬಳಿ ಪಾದಯಾತ್ರೆ ಅಂತ್ಯವಾಗಲಿದ್ದು, ಕಾರ್ನರ್ ಮೀಟಿಂಗ್ ಜರುಗಲಿದೆ. ಅದಾದ ಬಳಿಕ ಆದಿ ಚುಂಚನಗಿರಿ ಮಠ ಸ್ಟೇಡಿಯಂನಲ್ಲಿ ವಾಹನಗಳಲ್ಲಿ ರಾತ್ರಿ ವಾಸ್ತವ್ಯ ಏರ್ಪಾಟಾಗಿದೆ. ಪಾದಯಾತ್ರೆ ನಾಗಮಂಗಲ ತಲುಪುತ್ತಿದ್ದಂತೆ ಚಲುವನಾರಾಯಣಸ್ವಾಮಿ, ಧ್ರುವನಾರಾಯಣ ಸೇರಿ ಹಲವಾರು ನಾಯಕರು ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ (Rahul Gandhi), ಕೆ.ಸಿ. ವೇಣುಗೋಪಾಲ್​​​ ಅವರುಗಳ ಜೊತೆ ಹೆಜ್ಜೆ ಹಾಕಿದರು. ಇನ್ನೂ ಅನೇಕ ಕಾರ್ಯಕರ್ತರು (Karnataka Congress) ರಾಹುಲ್ ಗಾಂಧಿ ಜೊತೆ ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದಾರೆ.

ಈ ಮಧ್ಯೆ, ಎರಡು ಬಾರಿ ವಿಶ್ವ ದಾಖಲೆ ಮಾಡಿರುವ ಬಾಲಕಿ ರೀಫಾ ತಸ್ಕೀನ್ ರಾಹುಲ್ ಗಾಂಧಿಯನ್ನ ಭೇಟಿಯಾದರು. ರೀಫಾ ತಮ್ಮ 7ನೇ ವಯಸ್ಸಿನಲ್ಲೇ ಎಲ್ಲಾ ರೀತಿ ವಾಹನಗಳನ್ನ ಚಲಾಯಿಸಿ ವಿಶ್ವದಾಖಲೆ ಮಾಡಿದ್ದಾರೆ. ಒಂದೇ ನಿಮಿಷದಲ್ಲಿ 50 ಬಾರಿ ಡ್ರಿಫ್ಟಿಂಗ್ ಮಾಡಿ ರೀಫಾ ಮತ್ತೊಂದು ಸಾಧನೆಯನ್ನೂ ಮಾಡಿದ್ದಾರೆ. ರೀಫಾ ಹಾಗೂ ತಂದೆ ತಾಜ್ ಗೆ ವಿಶೇಷ ಪಾಸ್ ಸಿಕ್ಕಿದ್ದು, ರಾಹುಲ್ ಗಾಂಧಿಯನ್ನ ರೀಫಾ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಡ್ರಿಫ್ಟಿಂಗ್ ಮಾಡಲಿದ್ದಾರೆ.

ರಾಹುಲ್ ಗಾಂಧಿಯನ್ನ ಕಾರ್​ನಲ್ಲಿ ಕೂರಿಸ್ಕೊಂಡ್ ರೀಫಾ ಡ್ರಿಫ್ಟಿಂಗ್

ರಾಹುಲ್​ ಗಾಂಧಿಗೆ ವಿಶೇಷ ಉಡುಗೊರೆ ನೀಡಿದ ವಕೀಲರು:

ಮಂಡ್ಯದ ನಾಗಮಂಗಲ ವಕೀಲರಿಂದ ರಾಹುಲ್ ಗಾಂಧಿಗೆ ವಿಶೇಷ ಉಡುಗೊರೆ ಸಂದಾಯವಾಗಿದೆ. ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಫೋಟೊ ನೀಡಿದ್ದಾರೆ. ಟಿಪ್ಪು ಸುಲ್ತಾನ್ ಪುಸ್ತಕ, ಕುವೆಂಪು ಪುಸ್ತಕ ಕೊಟ್ಟು ವಕೀಲರು ಭಾವೈಕ್ಯತೆ ಸಾರಿದ್ದಾರೆ. ಇನ್ನು, ಭಾರತ್ ಜೋಡೊ ಯಾತ್ರೆಯ 6ನೇ ದಿನ ಹಿನ್ನೆಲೆ ಕಾರ್ಯಕರ್ತರಿಗೆ ಬಿಸಿ ಬಿಸಿ ಟೊಮ್ಯಾಟೊ ಬಾತ್ ಸಿದ್ದವಾಗಿದೆ.

ಚಲುವರಾಯಸ್ವಾಮಿಯ ಮಗ, ನಟ ಸಚಿನ್ ಜೊತೆ ರಾಹುಲ್ ಪೆಪ್ ಟಾಕ್

ಕನ್ನಡ ಚಿತ್ರರಂಗದ ಯುವ ನಟ ಸಚಿನ್ ಜೊತೆ ರಾಹುಲ್​ ಗಾಂಧಿ ಆತ್ಮೀಯವಾಗಿ ಮಾತನಾಡಿದರು. ನಟ ಸಚಿನ್ ಅವರು ಚಲುವರಾಯಸ್ವಾಮಿಯ ಮಗ. ಈತ ಹ್ಯಾಪಿ ಬರ್ತ್ ಡೇ ಸಿನ್ಮಾದ ಹೀರೋ ಸಹ. ಬಾಳೆ ತೋಟದ ವಿಶ್ರಾಂತಿ ಸಮಯದಲ್ಲಿ ಚಲುವರಾಯಸ್ವಾಮಿ ಮಗ ಸಚಿನ್ ಜೊತೆ ರಾಹುಲ್ ಆತ್ಮೀಯವಾಗಿ ಮಾತನಾಡಿದರು. ತೊಳಲಿ ಕೆರೆ ಬಳಿ ಬ್ರೇಕ್​​ಫಾಸ್ಟ್​​ಗಾಗಿ ಪಾದಯಾತ್ರೆಗೆ ರಾಹುಲ್ ಗಾಂಧಿ ಬ್ರೇಕ್ ತೆಗೆದುಕೊಂಡರು.

ಪುಟಾಣಿ‌ ಮಗುವಿನ ಫೋಟೋ ತೆಗೆದ ರಾಹುಲ್ ಗಾಂಧಿ

ತಮ್ಮ ಮಗುವಿನೊಂದಿಗೆ ಬಂದು ರಾಹುಲ್ ಪರಿಚಯ ಮಾಡಿಕೊಂಡ ತಂದೆಯ ಜೊತೆ ರಾಹುಲ್ ಸೆಲ್ಫಿ ತೆಗೆಸಿಕೊಂಡರು. ತಮ್ಮದೇ ಮೊಬೈಲ್ ನಲ್ಲಿ ರಾಹುಲ್ ಮಗುವಿನ ಫೋಟೋ ಸೆರೆ ಹಿಡಿದರು. ಮಗುವಿನ ಫೋಟೋ ತೆಗೆದು ರಾಹುಲ್ ಖುಷಿಪಟ್ಟರು. ಪುಟಾಣಿ ಮಗು ರಾಹುಲ್ ಗೆ ಶೇಕ್ ಹ್ಯಾಂಡ್ ನೀಡಿತು.

Published On - 11:39 am, Fri, 7 October 22