Bharat Jodo Yatra: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬಿಜೆಪಿ ಸರ್ವನಾಶ ಮಾಡಿದೆ: ರಾಹುಲ್ ಗಾಂಧಿ
ಬಿಜೆಪಿಯವರು 2 ಇಂಡಿಯಾ ನಿರ್ಮಾಣ ಮಾಡುತ್ತಿದ್ದಾರೆ. ಒಂದು ಶ್ರೀಮಂತರ ಇಂಡಿಯಾ ಮತ್ತೊಂದು ಇನ್ನೊಂದು ಕೋಟ್ಯಂತರ ಬಡವರ ಬಡ ಇಂಡಿಯಾ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಮಂಡ್ಯ: ಬಿಜೆಪಿಯವರು 2 ಇಂಡಿಯಾ ನಿರ್ಮಾಣ ಮಾಡುತ್ತಿದ್ದಾರೆ. ಒಂದು ಶ್ರೀಮಂತರ ಇಂಡಿಯಾ ಮತ್ತೊಂದು ಇನ್ನೊಂದು ಕೋಟ್ಯಂತರ ಬಡವರ ಬಡ ಇಂಡಿಯಾ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬಿಜೆಪಿ (BJP) ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ನಾಗಮಂಗಲ ತಾಲೂಕಿನ ಬೆಳ್ಳೂರು ನಿಲ್ದಾಣ ಬೆಳ್ಳೂರು ಬಸ್ ನಿಲ್ದಾಣದಲ್ಲಿ ಭಾರತ್ ಜೋಡೋ ಸಮಾವೇಶದಲ್ಲಿ (Bharat Jodo Yatra) ಮಾತನಾಡಿದ ಅವರು ನಾವು ಎರಡು ಇಂಡಿಯಾ ಒಪ್ಪಿಕೊಳ್ಳುವುದಿಲ್ಲ. ಬಿಜೆಪಿ ಮಾಡಲು ಹೊರಟಿರುವ ದ್ವೇಷದ ಇಂಡಿಯಾ ಒಪ್ಪಿಕೊಳ್ಳಲ್ಲ. ಜನರ ಜೇಬಿನಿಂದ ಹಣ ವಿಶ್ವದ 2ನೇ ಶ್ರೀಮಂತ ವ್ಯಕ್ತಿಗೆ ಹೋಗುತ್ತಿದೆ ಎಂದು ಹೇಳಿದರು.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ನಮ್ಮ ಭಾರತದಲ್ಲಿದ್ದಾರೆ. ಜನರ ಪಾಕೆಟ್‌ನ ದುಡ್ಡು ಅವರನ್ನು ಶ್ರೀಮಂತರನ್ನಾಗಿಸುತ್ತಿದೆ. ರಾಕೆಟ್ ವೇಗದಲ್ಲಿ ಶ್ರೀಮಂತರನ್ನಾಗಿ ಮಾಡಿದೆ. ಅವರಿಗೆ ಏರ್‌ಪೋರ್ಟ್, ಬಂದರು ಬೇಕು, ಕೃಷಿ, ಕೈಗಾರಿಕೆ ಬೇಕು. ಆದರೆ ನಿಮ್ಮ ಮಕ್ಕಳು ಮಾತ್ರ ನಿರುದ್ಯೋಗಿಗಳಾಗುತ್ತಿದ್ದಾರೆ ನಿಮ್ಮ ಮಕ್ಕಳನ್ನು ನೀವು ಒಳ್ಳೇ ಶಾಲಾ, ಕಾಲೇಜಿಗೆ ಕಳಿಸಲೂ ಕಷ್ಟ ಪಡಬೇಕು. ಪದವಿ ಸರ್ಟಿಫಿಕೆಟ್ ಯಾವುದೇ ಕೆಲಸಕ್ಕೆ ಬರಲ್ಲ. ಅವರಿಗೆ ಕರ್ನಾಟಕದಲ್ಲಿ ಅಥವಾ ಭಾರತದಲ್ಲಿ ಉದ್ಯೋಗ ಸಿಗುವುದಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬಿಜೆಪಿ ಸರ್ವನಾಶ ಮಾಡಿದೆ ಎಂದು ಕಿಡಿಕಾರಿದರು.
ಸಮಾವೇಶ ಬಳಿಕ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ‘ಕೈ’ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿ ಕಾಲಭೈರವೇಶ್ವರನ ದರ್ಶನ ಪಡೆದರು. ರಾಹುಲ್ ಗಾಂಧಿಗೆ ಮಂಗಳ ವಾದ್ಯದ ಜೊತೆ ರಾಹುಲ್ ಗಾಂಧಿಗೆ ಪೂರ್ಣಕುಂಭ ಮೂಲಕ ಮಠಕ್ಕೆ ಸ್ವಾಗತ ಮಾಡಿಕೊಂಡರು. ಶ್ರೀಮಠದ ಕಾರ್ಯದರ್ಶಿಯಾಗಿರುವ ಪ್ರಸನ್ನನಾಥ ಸ್ವಾಮೀಜಿ ರಾಹುಲ್ ಗಾಂಧಿಗೆ ಹಾರ ಹಾಕಿ ಬರಮಾಡಿಕೊಂಡರು. ಬಳಿಕ ರಾಹುಲ್ ಗಾಂಧಿ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿಯಾದರು.
ಶ್ರೀಗಳ ಆಶೀರ್ವಾದ ಪಡೆದ ನಂತರ ರಾಹಲ್ ಮಠದ ಮಕ್ಕಳ ಜತೆ ಭಜನೆ ಮಾಡಿದರು. ಭಜನೆ ನಂತರ ಇಂದಿನ ಭಾರತ್ ಜೋಡೋ ಪಾದಯಾತ್ರೆ ಅಂತ್ಯ ಮಾಡಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ, ರಣದೀಪ್ ಸುರ್ಜೇವಾಲ, ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕಲ್ಲಿಕ್ ಮಾಡಿ