ಮಂಡ್ಯ: ಜನಾಶೀರ್ವಾದ ಯಾತ್ರೆ ವೇಳೆ ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿ ಗ್ರಾಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಾಟಿ ಮಾಡಿದ್ದರು. ಅಂದು ನಾಟಿ ಮಾಡಿದ್ದ ಭತ್ತವನ್ನ ಬಿಜೆಪಿ ಕಾರ್ಯಕರ್ತರು ಇಂದು ಕೂಯ್ಲು ಮಾಡಿದ್ದಾರೆ. ಆಗಸ್ಟ್ 16 ರಂದು ಕೊಮ್ಮೇರಹಳ್ಳಿ ಗ್ರಾಮದ ಜಮೀನೊಂದರಲ್ಲಿ ರೈತ ಮಹಿಳೆಯರ ಜೊತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಾಟಿ ಮಾಡಿದ್ದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ ನೇತೃತ್ವದಲ್ಲಿ ಇಂದು ಬಿಜೆಪಿ ಕಾರ್ಯಕರ್ತರು ಭತ್ತ ಕೂಯ್ಲು ಮಾಡಿದ್ದಾರೆ.
ಇನ್ನು ಗದ್ದೆಯಲ್ಲಿ ‘ಶೋಭಾ ಕರಂದ್ಲಾಜೆ ನೆಟ್ಟಿದ್ದ ಭತ್ತದ ಕೂಯ್ಲು ಕಾರ್ಯಕ್ರಮ’ ನಡೆಯಲಿದೆ ಅಂತ ಬ್ಯಾನರ್ ಹಾಕಿದ್ದಾರೆ. ಬ್ಯಾನರ್ನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಕೊಯ್ಲು ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ಆಗಸ್ಟ್ 16ಕ್ಕೆ ಭೇಟಿ ನೀಡಿದ್ದ ಶೋಭಾ ಕರಂದ್ಲಾಜೆ ಟ್ರ್ಯಾಕ್ಟರ್ ಚಾಲನೆ ಮಾಡಿ, ನಾಟಿ ಯಂತ್ರದ ಮೂಲಕ ನಾಟಿ ಮಾಡಿದ್ದರು. ಕೆಸರು ಗದ್ದೆಯಲ್ಲಿ ಮಹಿಳೆಯರೊಂದಿಗೆ ಸೇರಿ ಗದ್ದೆ ಕೆಲಸದಲ್ಲಿ ಭಾಗಿಯಾಗಿದ್ದರು. ಮಂತ್ರಿ ಜವಾಬ್ದಾರಿ ಬಳಿಕ ಮೊದಲು ಮಂಡ್ಯಕ್ಕೆ ಬಂದಿದ್ದೇನೆ. ಪ.ಜಾ, ಪ.ಪಂ ಮಹಿಳೆಯರು ಸೇರಿದಂತೆ ಎಲ್ಲಾ ಜಾತಿ, ವರ್ಗಗಳಿಗೆ ಸಚಿವ ಸ್ಥಾನ ನೀಡಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವುದು ಪ್ರಧಾನಿಗಳ ಆಶಯ ಅಂತ ಶೋಭಾ ಹೇಳಿದ್ದರು.
ಚಿಕ್ಕ-ಚಿಕ್ಕ ರೈತರನ್ನ ಒಟ್ಟಗೂಡಿಸಿ ಕೃಷಿಗೆ ಉತ್ತೇಜನ ನೀಡಬೇಕು. ಕೃಷಿ ಮೂಲಭೂತ ಸೌಕರ್ಯ ನಿಧಿಯಲ್ಲಿ 1 ಲಕ್ಷ ಕೋಟಿ ಮೀಸಲಿಡಲಾಗಿದೆ. ಸಬ್ಸಿಡಿ, ಸಾಲ, ಕೃಷಿ ಉತ್ಪನ್ನಗಳನ್ನ ಒದಗಿಸಿ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಆತ್ಮನಿರ್ಭರ ಯೋಜನೆಯಡಿ ಸಾವಯವ ಬೆಲ್ಲ ಹೆಚ್ಚು ರಫ್ತಾಗಬೇಕು ಅಂತ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದಾಗ ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ
ಮೈಸೂರಿನ ಕಾರು ಶೋ ರೂಮ್ನಲ್ಲಿ ಅಗ್ನಿ ಅವಘಡ! ಕಾರುಗಳು ಸುಟ್ಟು ಭಸ್ಮ
ರಾತ್ರೋರಾತ್ರಿ ಬೃಹತ್ ಮರಗಳು ಮಂಗಮಾಯ; ಕಡಿದ ಮರಕ್ಕೆ ಶ್ರದ್ಧಾಂಜಲಿ, ತಪ್ಪಿತಸ್ಥರ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ
Published On - 1:13 pm, Sun, 26 December 21