ಲೋಕ ಚುನಾವಣೆ: ಬಿಜೆಪಿ ಮಾಸ್ಟರ್ ಪ್ಲ್ಯಾನ್, ಹಳೆ ಮೈಸೂರು ಭಾಗದ ಮೇಲೆ ಕಣ್ಣು, ಪಕ್ಷ ಸಂಘಟನೆಗೆ ಮುಂದಾದ ಬಿಜೆಪಿ ನೂತನ ಸಾರಥಿ

ಒಟ್ಟಾರೆ ಲೋಕಸಭಾ ಚುನಾವಣೆಯನ್ನ ಗಮನದಲ್ಲಿ ಇಟ್ಟುಕೊಂಡು ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಮುಂದಾಗಿದ್ದು, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೇ ಕಾದು ನೋಡಬೇಕಿದೆ.

ಲೋಕ ಚುನಾವಣೆ: ಬಿಜೆಪಿ ಮಾಸ್ಟರ್ ಪ್ಲ್ಯಾನ್, ಹಳೆ ಮೈಸೂರು ಭಾಗದ ಮೇಲೆ ಕಣ್ಣು, ಪಕ್ಷ ಸಂಘಟನೆಗೆ ಮುಂದಾದ ಬಿಜೆಪಿ ನೂತನ ಸಾರಥಿ
ಲೋಕ ಚುನಾವಣೆ: ಬಿಜೆಪಿ ಮಾಸ್ಟರ್ ಪ್ಲ್ಯಾನ್, ಹಳೆ ಮೈಸೂರು ಭಾಗದ ಮೇಲೆ ಕಣ್ಣು
Follow us
| Edited By: ಸಾಧು ಶ್ರೀನಾಥ್​

Updated on: Nov 21, 2023 | 5:59 PM

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತ್ತು. ಇದೀಗ ರಾಜ್ಯ ಬಿಜೆಪಿಗೆ (Karnataka BJP) ನೂತನ ಸಾರಥಿಯಾಗಿ ಆಯ್ಕೆಯಾಗಿರೋ ಬಿ ವೈ ವಿಜಯೇಂದ್ರ (BY Vijayendra), ಲೋಕಸಭಾ ಚುನಾವಣೆಯನ್ನ ಗಮನದಲ್ಲಿ ಇಟ್ಟುಕೊಂಡು ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿದ್ದಾರೆ (Old Mysore Lok sabha constituencies). ಅದರಲ್ಲೂ ಮಂಡ್ಯದಲ್ಲಿ ಈ ಬಾರಿ ಕಮಲವನ್ನ ಅರಳಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದು, ಪಕ್ಷ ಸಂಘಟನೆಗೆ ಕೂಡ ಮುಂದಾಗಿದ್ದಾರೆ.

ಹೌದು ಲೋಕಸಭಾ ಚುನಾವಣೆಯನ್ನ ಗಮನದಲ್ಲಿ ಇಟ್ಟುಕೊಂಡು ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಈಗಿನಿಂದಲೇ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆ. ಅದರಲ್ಲೂ ಯಡಿಯೂರಪ್ಪ ಪುತ್ರ ಬಿ ವೈ ಬಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಫುಲ್ ಆಕ್ಟೀವ್ ಆಗಿದ್ದು, ಹಳೇ ಮೈಸೂರು ಮೇಲೆ ಕಣ್ಣಿಟ್ಟಿದ್ದಾರೆ.

ಅಂದಹಾಗೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಳೇ ಮೈಸೂರು ಭಾಗದಲ್ಲಿ ಹೀನಾಯ ಸೋಲುಕಂಡಿತ್ತು. ಅದರಲ್ಲೂ ಸಕ್ಕರೆ ನಗರಿ ಮಂಡ್ಯದಲ್ಲಿ ಏಳು ಸ್ಥಾನಗಳಲ್ಲಿ ಮೊದಲ ಬಾರಿಗೆ ಗೆದ್ದಿದ್ದ, ಕೆ ಆರ್ ಪೇಟೆ ಕ್ಷೇತ್ರದಲ್ಲೂ ಕೂಡ ಹೀನಾಯವಾಗಿ ಸೋಲಾಗಿತ್ತು. ಹೀಗಾಗಿ ಹಳೇ ಮೈಸೂರು ಭಾಗದ ಒಂದು ಜಿಲ್ಲೆಯಾದ ಮಂಡ್ಯದ ಮೇಲೆ ಕಣ್ಣಿಟ್ಟಿರುವ ವಿಜಯೇಂದ್ರ, ರಾಜ್ಯಾಧ್ಯಕ್ಷ ನಂತರ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.

ನಿನ್ನೆ ಸೋಮವಾರ ಮಂಡ್ಯ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡಿ ಕಾರ್ಯಕರ್ತರಿಗೆ ಹುರುಪು ನೀಡಲು ಮುಂದಾಗಿದ್ದಾರೆ. ಮಂಡ್ಯ ನಗರಕ್ಕೆ ಆಗಮಿಸಿದ್ದ ವಿಜಯೇಂದ್ರ ಮೊದಲಿಗೆ ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಿದ್ರು. ಮಂಡ್ಯ ನಗರದ ಕಲ್ಲಹಳ್ಳಿ ನಗರದಲ್ಲಿರೋ ಶ್ರೀನಿವಾಸ್ ಭೇಟಿ ನೀಡಿ ಮಾತುಕತೆ ನಡೆಸಿದ್ರು. ಇನ್ನು ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ವಿಜಯೇಂದ್ರ ಅವರಿಗೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದ್ರು. ನಂತರ ಬಿಜೆಪಿ ಕಾರ್ಯಕರ್ತರ ಸಭೆಯನ್ನ ನಡೆಸಿ, ಕಾರ್ಯಕರ್ತರ ಜೊತೆ ನಾನಿರುತ್ತೇನೆ ಎಂದು ಭರವಸೆ ನೀಡಿದ್ರು.

Also Read: ಮಂಡ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದೇಕೆ? ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೊಟ್ಟ ಕಾರಣ ಹೀಗಿದೆ

ಎರಡು ದಿನಗಳ ಕಾಲ ಮೈಸೂರು ಪ್ರವಾಸ ಮುಗಿಸಿ ನೇರವಾಗಿ ಮಂಡ್ಯಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಗುಡುಗಿದ್ರು. ಮೊದಲ ಬಾರಿಗೆ ಕೆ ಆರ್ ಪೇಟೆಯಲ್ಲಿ ವಿಜಯ ಪತಾಕೆ ಹಾರಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಹಿನ್ನೆಡೆಯಾಗಿದೆ. ಈಗಾಗಲೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಹೋರಾಟ ಮಾಡುತ್ತೇವೆ. ಬಿಜೆಪಿ ಕಾರ್ಯಕರ್ತರಿಗೆ ಶಕ್ತಿ ಕೊಡುತ್ತೇನೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.

ಇದೆ ವೇಳೆ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ರು. ರೈತರ ಜೊತೆ ನಿಲ್ಲುವ ಕೆಲಸವನ್ನ ಯಾವೊಬ್ಬ ಸಚಿವರೂ ಮಾಡುತ್ತಿಲ್ಲ. ಏಳು ತಾಸು ವಿದ್ಯುತ್ ಕೊಡಲು ಸಾಧ್ಯವಾಗುತ್ತಿಲ್ಲ. ಬೆಂಬಲ ಬೆಲೆ ಕೇಳಲು ರೈತರು ಹೋದರೆ ಅರೆಸ್ಟ್ ಮಾಡಿಸುತ್ತಿದ್ದಾರೆ, ರಾಜ್ಯದಲ್ಲಿ ಮಂತ್ರಿಗಳ ಗೂಂಡಾ ಗರ್ಜನೆ ನಡೆಯುತ್ತಿದೆ. ಇದಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತೇವೆ ಎಂದು ಸವಾಲು ಹಾಕಿದ್ರು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ.

ಒಟ್ಟಾರೆ ಲೋಕಸಭಾ ಚುನಾವಣೆಯನ್ನ ಗಮನದಲ್ಲಿ ಇಟ್ಟುಕೊಂಡು ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಮುಂದಾಗಿದ್ದು, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೇ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸಂಸಾರದಲ್ಲಿನ ಬಿರುಕಿಗೆ ಕಾರಣ ತಿಳಿಸಿದ ವರ್ತೂರು ಸಂತೋಷ್
ಸಂಸಾರದಲ್ಲಿನ ಬಿರುಕಿಗೆ ಕಾರಣ ತಿಳಿಸಿದ ವರ್ತೂರು ಸಂತೋಷ್
ನಾಲ್ಕನೇ ಟಿ20 ಪಂದ್ಯಕ್ಕಾಗಿ ರಾಯ್​ಪುರ ತಲುಪಿದ ಟೀಮ್ ಇಂಡಿಯಾ ಆಟಗಾರರು
ನಾಲ್ಕನೇ ಟಿ20 ಪಂದ್ಯಕ್ಕಾಗಿ ರಾಯ್​ಪುರ ತಲುಪಿದ ಟೀಮ್ ಇಂಡಿಯಾ ಆಟಗಾರರು
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು