ಮಂಡ್ಯ, ಸೆ.30: ತಮಿಳುನಾಡಿಗೆ ಕಾವೇರಿ ನೀರು(Cauvery) ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶಕ್ಕೆ ನಿನ್ನೆ(ಸೆ.29) ರೈತಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿತ್ತು. ಇದೀಗ ಮತ್ತೆ 3 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುವಂತೆ ಕಾವೇರಿ ಪ್ರಾಧಿಕಾರ ಆದೇಶ ನೀಡಿದೆ. ಈ ಹಿನ್ನೆಲೆ ಇಂದು (ಸೆ.30) ಮಳವಳ್ಳಿ(Malavalli)ಯಲ್ಲಿ ರಕ್ತ ಚಳುವಳಿ ನಡೆಸಲಾಗಿದೆ. ಹೌದು, ಬೈಕ್ ರ್ಯಾಲಿ ಮೂಲಕ ಕಾವೇರಿ ನದಿ ಬಳಿಗೆ ರಕ್ತ ತಂದ ವಿವಿಧ ಕನ್ನಡಪರ ಸಂಘಟನೆ ಕಾರ್ಯಕರ್ತರು, ಕಾವೇರಿ ನದಿಗೆ ರಕ್ತ ಸುರಿಯಲು ಯತ್ನಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಸತ್ತೆಗಾಲ ಸೇತುವೆ ಬಳಿ ನಡೆದಿದೆ.
ಹೌದು, ರಾಜ್ಯದಲ್ಲಿ ಕಾವೇರಿ ಕಿಚ್ಚು ಭುಗಿಲೆದ್ದಿದ್ದು, ಅದರಂತೆ ಇಂದು ಪ್ರತಿಭಟನಾಕಾರರು ಕಾವೇರಿ ನೀರಿಗೆ ರಕ್ತ ಸುರಿಯಲು ಮುಂದಾಗಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಇದಕ್ಕೆ ಅನುಮತಿ ಇಲ್ಲ, ಪ್ರತಿಭಟನೆ ಬೇರೆ ರೀತಿಯಲ್ಲಿ ಮಾಡಿ ಎಂದು ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನಿಸಿದರು. ಈ ವೇಳೆ ‘
ಅವರಿಗೆ TMC ಗಟ್ಟಲೇ ನೀರು ಹೋಗುತ್ತಿದ್ದು, ಕೆಆರ್ಎಸ್ ಬರಿದಾಗುತ್ತಿದೆ. ಅದನ್ನ ಯಾರು ತಡೆಯೋರಿಲ್ಲ. ನಮ್ಮ ರಕ್ತ ಕೊಡ್ತೀವಿ ಅಂದ್ರೆ ತಡೆಯಲು ಬರ್ತೀರಾ? ಎಂದು ಪೊಲೀಸರಿಗೆ ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ. ಬಳಿಕ ರಕ್ತ ಇಲ್ಲೇ ಕೊಟ್ಟು, ನದಿ ಬಳಿ ಹೋಗಿ ಎಂದು ಖಾಕಿ ಸೂಚಿಸಿದ ಸನ್ನವೇಶ ನಡೆಯಿತು.
ಇದನ್ನೂ ಓದಿ:ಕಾವೇರಿ ವಿವಾದ: ಮತ್ತೆ ಸುಪ್ರಿಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿದ ರಾಜ್ಯ ಸರ್ಕಾರ
ಇನ್ನು ಕಾವೇರಿಗಾಗಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಮಹತ್ವದ ಸಭೆ ನಡೆಯಲಿದೆ. ಹಾಲಿ & ಮಾಜಿ ಶಾಸಕರು, ಜನಪ್ರತಿನಿಧಿಗಳು, ಮುಖಂಡರಿಗೆ ಈ ಸಭೆಯಲ್ಲಿ ಆಹ್ವಾನಿಸಲಾಗಿದ್ದು, ಮುಂದಿನ ಹೋರಾಟದ ರೂಪರೇಷೆ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ. ಈ ವೇಳೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲವೆಂದು ಸರ್ಕಾರ ದೃಢ ನಿರ್ಧಾರ ಕೈಗೊಳ್ಳುವಂತೆ ರೈತ ಹಿತರಕ್ಷಣಾ ಸಮಿತಿ ಆಗ್ರಹಿಸಲಿದೆ. CWMA, CWRC ರದ್ದತಿಗೆ ಸರ್ಕಾರ ಕಾನೂನು ಹೋರಾಟ ಮಾಡಬೇಕು. ಈ ವಿಚಾರಗಳ ಬಗ್ಗೆ ಇಂದಿನ ರೈತ ಹಿತರಕ್ಷಣಾ ಸಮಿತಿ ಸಭೆಯಲ್ಲಿ ನಿರ್ಧರಿಸಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ