ಮಂಡ್ಯ ಜಿಲ್ಲೆಯ ಅಭಿವೃದ್ಧಿ ಇಡೀ ಇಂಡಿಯಾದ ಅಭಿವೃದ್ಧಿ: ಸಿಎಂ ಬಸವರಾಜ ಬೊಮ್ಮಾಯಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 21, 2022 | 1:45 PM

ಮಂಡ್ಯ ಜಿಲ್ಲೆಯ ಅಭಿವೃದ್ಧಿ ಇಡೀ ಇಂಡಿಯಾದ ಅಭಿವೃದ್ಧಿ. ರೈತರ ಶ್ರಮಕ್ಕೆ ಒಂದು ಗೌರವ ಕೊಡಬೇಕು. ರೈತರ ಬೆವರಿಗೆ ಬೆಲೆಯನ್ನು ತರಲು ಸಂಕಲ್ಪ ಮಾಡಲಾಗಿದೆ.

ಮಂಡ್ಯ ಜಿಲ್ಲೆಯ ಅಭಿವೃದ್ಧಿ ಇಡೀ ಇಂಡಿಯಾದ ಅಭಿವೃದ್ಧಿ: ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Follow us on

ಮಂಡ್ಯ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ (Development) ನಾವು ಬದ್ದವಾಗಿದ್ದೇವೆ. ಕಾವೇರಿ ಹೇಮಾವತಿ ಜೀವ ನದಿಗಳ ಅಭಿವೃದ್ದಿಗೆ ನಾವು ಬದ್ದ ಎಂದು ಕೆ.ಆರ್.ಪೇಟೆಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದರು. ಮಂಡ್ಯದ ಎಲ್ಲಾ ನಾಲೆಗಳನ್ನು ಯಡಿಯೂರಪ್ಪ ಸಿಎಂ ಆಗಿದ್ದಾಗ ಅಭಿವೃದ್ಧಿ ಮಾಡಿದ್ದರು. ಈ ಭೂಮಿತಾಯಿಗೆ ಹಸಿರು ಸೀರೆ ಉಡಿಸುವ ಹೇಮಾವತಿ ನೀರು ಬಿಡುಗಡೆಗೆ ಕ್ರಮಕೈಗೊಳ್ಳಲಾಗಿದೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿ ಇಡೀ ಇಂಡಿಯಾದ ಅಭಿವೃದ್ಧಿ. ರೈತರ ಶ್ರಮಕ್ಕೆ ಒಂದು ಗೌರವ ಕೊಡಬೇಕು. ರೈತರ ಬೆವರಿಗೆ ಬೆಲೆಯನ್ನು ತರಲು ಸಂಕಲ್ಪ ಮಾಡಲಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ನಮ್ಮ ಸರ್ಕಾರ ಕ್ರಮ. ಮೈ ಶುಗರ್‌ಗೆ ಸಾಕಷ್ಟು ಹಣ ಬಿಡುಗಡೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಮಂಡ್ಯದ ಕಬ್ಬು ಮೈ ಶುಗರ್‌ನಲ್ಲಿ ಅರೆಸುವ ಕೆಲಸ ನೀಡುವುದಾಗಿ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಇದನ್ನೂ ಓದಿ: ಸಿದ್ದರಾಮಯ್ಯನವರನ್ನು ಫ್ರೀಡಂ ಪಾರ್ಕ್​​ನಲ್ಲಿ ನೋಡುತ್ತಲೇ ಮಹಿಳಾ ಕಾರ್ಯಕರ್ತರು ಪುಳಕಿತರಾಗುತ್ತಾರೆ!

ಅಧಿಕಾರಕ್ಕಾಗಿ ರಾಜಕಾರಣ ಮತ್ತು ಜನರಿಗಾಗಿ ರಾಜಕಾರಣ

ರಾಜಕಾರಣದಲ್ಲಿ ಎರಡು ತರದ ರಾಜಕಾರಣ ಇದೆ. ಅಧಿಕಾರಕ್ಕಾಗಿ ರಾಜಕಾರಣ ಮತ್ತು ಜನರಿಗಾಗಿ ರಾಜಕಾರಣ. ಮೂರು ವರ್ಷದ ಹಿಂದೆ ತೆಗೆದುಕೊಂಡ‌ ನಿರ್ಧಾರದ ಪ್ರತಿಫಲ‌ ಈ ಕಾರ್ಯಕ್ರಮ. ನಾರಾಯಣಗೌಡರು ಏಕೆ ರಾಜೀನಾಮೆ ಕೊಟ್ಟರು ಅನ್ನೋದಕ್ಕೆ ಇವತ್ತು ಉತ್ತರ ಸಿಕ್ಕಿದೆ. ಹಿಂದೆ ಕೊಟ್ಟ ಅಧಿಕಾರ ತಮ್ಮ ಹಾಗೂ ತಮ್ಮವರ ಸ್ವಾರ್ಥ. ಅಧಿಕಾರ ಉಳಿಸಿಕೊಳ್ಳಲು ಕಾನೂನು ಸುವ್ಯವಸ್ಥೆ ಗಾಳಿಗೆ ತೂರಿ, ಸ್ವಾರ್ಥಕ್ಕೆ ಲಾಭ ಮಾಡಿಕೊಂಡು ಹೋದರು. ಅದು ಅಧಿಕಾರಕ್ಕಾಗಿ ಮಾಡಿದ ರಾಜಕಾರಣ ಎಂದು ಹೇಳಿದರು. ಯಡಿಯೂರಪ್ಪ ಸಿಎಂ ಆದ ನಂತರ ಜನರಿಗಾಗಿ ರಾಜಕಾರಣ ಮಾಡಿದರು. ರಾಜ್ಯದ ಜನ ಮೋದಿ, ಯಡಿಯೂರಪ್ಪರನ್ನು ನೆನೆಸಿಕೊಳ್ಳಬೇಕು. ಯಡಿಯೂರಪ್ಪ ರಾಜ್ಯಕ್ಕೆ ಹಲವು ಕಾರ್ಯಕ್ರಮ ನೀಡಿದ್ದಾರೆ. ಸಾಲ ಮನ್ನಾ, ಬಡ್ಡಿರಹಿತ ಸಾಲ, ಭೂಚೇತನ ಕಾರ್ಯಕ್ರಮ ಅಲ್ಲದೇ ಕೆರೆಗಳನ್ನು ಅಭಿವೃದ್ಧಿ ಮಾಡಿದರು ಎಂದು  ಮಾಜಿ ಸಿಎಂ ಯಡಿಯೂರಪ್ಪರನ್ನು ಸಿಎಂ ಬೊಮ್ಮಾಯಿ ಹಾಡಿ ಹೊಗಳಿದರು.

ಯಡಿಯೂರಪ್ಪ ರಾಜ್ಯದ ಆಸ್ತಿ. ಅವರ ಹೃದಯ ಸದಾ ಬೂಕನಕೆರೆಯಲ್ಲಿದೆ. ಆ ಆಸ್ತಿಯನ್ನು ಉಳಿಸಿಕೊಳ್ಳಬೇಕು ಬಳಸಿಕೊಳ್ಳಬೇಕು. ನಾನು ನನ್ನ ಕ್ಷೇತ್ರದಲ್ಲೂ ಇಷ್ಟೊಂದು ಅಭಿವೃದ್ಧಿ ಆಗಿಲ್ಲ. ಅದು ಹೇಗೆ ಮಾಡಿದೆ? ಯಡಿಯೂರಪ್ಪ ಅವರತ್ರ ಹೋಗೋದು ಸಹಿ‌ ಮಾಡಿಸೋದು. ಯಡಿಯೂರಪ್ಪ ಸಹಾ ನಿನ್ನ ನೋಡಿದ ತಕ್ಷಣ ಸಹಿ‌ ಮಾಡಿದ್ದಾರೆ ಎಂದು ಭಾಷಣದ ವೇಳೆ ನಾರಾಯಣ ಗೌಡರನ್ನು‌ ಬೊಮ್ಮಾಯಿ ಕಿಚಾಯಿಸಿದರು.

Published On - 1:44 pm, Thu, 21 July 22