Mandya: ಕೆಆರ್​ಎಸ್ ಸಮೀಪ ಗಣಿ ಪ್ರದೇಶದಲ್ಲಿ ಸ್ಫೋಟಕ ಪತ್ತೆ; ಮುಂದುವರಿದ ಶೋಧಕಾರ್ಯ

4 ತಂಡಗಳಾಗಿ ವಿಂಗಡಿಸಿ ಸ್ಫೋಟಕಗಳಿಗಾಗಿ ಹುಡುಕಾಟ ನಡೆಸಲಾಗಿದೆ. ನಿನ್ನೆಯಿಂದ ಆರಂಭಗೊಂಡಿರುವ ಶೋಧ ಕಾರ್ಯಾಚರಣೆ, 2 ಸಾವಿರ ಎಕರೆ ಪ್ರದೇಶದಲ್ಲಿ ನಡೆಯುತ್ತಿದೆ. ಮುಂದಿನ 3ರಿಂದ 4 ದಿನಗಳು ಶೋಧ ಕಾರ್ಯ ನಡೆಯಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

Mandya: ಕೆಆರ್​ಎಸ್ ಸಮೀಪ ಗಣಿ ಪ್ರದೇಶದಲ್ಲಿ ಸ್ಫೋಟಕ ಪತ್ತೆ; ಮುಂದುವರಿದ ಶೋಧಕಾರ್ಯ
ಸ್ಫೋಟಕಗಳಿಗೆ ಶೋಧಕಾರ್ಯ
Updated By: ganapathi bhat

Updated on: Aug 07, 2021 | 6:12 PM

ಮಂಡ್ಯ: ಕೆಆರ್​ಎಸ್ ಸಮೀಪ ಗಣಿ ಪ್ರದೇಶದಲ್ಲಿ ಸ್ಫೋಟಕ ಪತ್ತೆಯಾದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಕೊನೆಗೂ ಎಚ್ಚೆತ್ತುಕೊಂಡಿದೆ. ಬೇಬಿ ಬೆಟ್ಟ, ಚಿನಕುರಳಿ ಗಣಿಗಾರಿಕೆ ಪ್ರದೇಶದಲ್ಲಿ ಕೂಂಬಿಂಗ್ ನಡೆಸಲಾಗಿದೆ. ಬಾಂಬ್ ಪತ್ತೆ ದಳ, ಸ್ಫೋಟಕ ಪತ್ತೆ ದಳದಿಂದ ಕೂಂಬಿಂಗ್ ಮಾಡಲಾಗಿದೆ. ಬೆಂಗಳೂರು, ಮೈಸೂರು, ಹಾಸನದ ತಂಡದಿಂದ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆಗೆ ಮಂಡ್ಯ ಜಿಲ್ಲೆಯ ತಂಡ ಸಾಥ್ ನೀಡಿದೆ.

ಸ್ಫೋಟಕಗಳ ಹುಡುಕಾಟದಲ್ಲಿ ಗಣಿ, ಕಂದಾಯ, ಪೊಲೀಸ್ ಇಲಾಖೆಯ ಸಿಬ್ಬಂದಿ ಭಾಗಿಯಾಗಿದ್ದಾರೆ. 4 ತಂಡಗಳಾಗಿ ವಿಂಗಡಿಸಿ ಸ್ಫೋಟಕಗಳಿಗಾಗಿ ಹುಡುಕಾಟ ನಡೆಸಲಾಗಿದೆ. ನಿನ್ನೆಯಿಂದ ಆರಂಭಗೊಂಡಿರುವ ಶೋಧ ಕಾರ್ಯಾಚರಣೆ, 2 ಸಾವಿರ ಎಕರೆ ಪ್ರದೇಶದಲ್ಲಿ ನಡೆಯುತ್ತಿದೆ. ಮುಂದಿನ 3ರಿಂದ 4 ದಿನಗಳು ಶೋಧ ಕಾರ್ಯ ನಡೆಯಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ನಿನ್ನೆ 3 ಕ್ವಾರಿಗಳ ಬಳಿ ಸ್ಫೋಟಕ ಸಾಮಗ್ರಿ ಪತ್ತೆಯಾಗಿತ್ತು. ಸ್ಫೋಟಕ ಸಿಕ್ಕ ಕ್ವಾರಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ: ಲೋಕಸಭೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಸ್ತಾಪ; ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸಂಸದೆ ಸುಮಲತಾ ಒತ್ತಾಯ

ಮಂಡ್ಯ: ಅಕ್ರಮ ಕಲ್ಲು ಗಣಿಗಾರಿಕೆ ನಿಯಂತ್ರಣಕ್ಕೆ ಕ್ರಮ; 11 ಕಲ್ಲು ಗಣಿ ಗುತ್ತಿಗೆಗಳ ರದ್ದು, 11 ಹೊಸ ಚೆಕ್‌ಪೋಸ್ಟ್ ಸ್ಥಾಪನೆ

(Explosive found in Mandya near KRS Dam Illegal Mining Coombing continued)

Published On - 6:05 pm, Sat, 7 August 21