AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ: ಅಕ್ರಮ ಕಲ್ಲು ಗಣಿಗಾರಿಕೆ ನಿಯಂತ್ರಣಕ್ಕೆ ಕ್ರಮ; 11 ಕಲ್ಲು ಗಣಿ ಗುತ್ತಿಗೆಗಳ ರದ್ದು, 11 ಹೊಸ ಚೆಕ್‌ಪೋಸ್ಟ್ ಸ್ಥಾಪನೆ

ಮಂಡ್ಯ ಜಿಲ್ಲೆಯಾದ್ಯಂತ ಅನಧಿಕೃತ ಉಪಖನಿಜ ಗಣಿಗಾರಿಕೆ, ದಾಸ್ತಾನು ಸಂಬಂಧ 12 ಪಿ. ಸಿ.ಆರ್. ಗಳನ್ನು ಸಂಬಂಧಿಸಿದ ನ್ಯಾಯಾಲಯಗಳಲ್ಲಿ ದಾಖಲಿಸಲಾಗಿದ್ದು, ಇನ್ನೂ ಹಲವಾರು ಪ್ರಕರಣಗಳನ್ನು ದಾಖಲಿಸುವ ಕಾರ್ಯ ಪ್ರಗತಿಯಲ್ಲಿದೆ. ಅನಧಿಕೃತ ಉಪಖನಿಜ ಸಾಗಾಣಿಕೆ ಸಂಬಂಧ ಏಪ್ರಿಲ್ 2021 ರಿಂದ ಇಲ್ಲಿಯವರೆಗೆ ಒಟ್ಟು 119 ವಾಹನಗಳಿಂದ 33.73 ಲಕ್ಷಗಳನ್ನು ಸಂಗ್ರಹಿಸಲಾಗಿದೆ - ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪದ್ಮಜಾ

ಮಂಡ್ಯ: ಅಕ್ರಮ ಕಲ್ಲು ಗಣಿಗಾರಿಕೆ ನಿಯಂತ್ರಣಕ್ಕೆ ಕ್ರಮ; 11 ಕಲ್ಲು ಗಣಿ ಗುತ್ತಿಗೆಗಳ ರದ್ದು, 11 ಹೊಸ ಚೆಕ್‌ಪೋಸ್ಟ್ ಸ್ಥಾಪನೆ
ಮಂಡ್ಯ: ಅಕ್ರಮ ಕಲ್ಲು ಗಣಿಗಾರಿಕೆ ನಿಯಂತ್ರಣಕ್ಕೆ ಕ್ರಮ: 11 ಕಲ್ಲು ಗಣಿ ಗುತ್ತಿಗೆಗಳ ರದ್ದು, 11 ಹೊಸ ಚೆಕ್‌ಪೋಸ್ಟ್ ಸ್ಥಾಪನೆ
TV9 Web
| Updated By: ಸಾಧು ಶ್ರೀನಾಥ್​|

Updated on: Aug 03, 2021 | 5:37 PM

Share

ಮಂಡ್ಯ:  ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ಜುಲೈ 28 ರಂದು ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ( ಗಣಿ ) ಸಭೆಯಲ್ಲಿ ಅವಧಿ ವಿಸ್ತರಿಸಿ ನೀಡಿದ ಕಲ್ಲು ಗಣಿಗುತ್ತಿಗೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಪ್ರಾಧಿಕಾರದಿಂದ ಇದುವರೆಗೂ ಪರಿಸರ ವಿಮೋಚನಾ ಪತ್ರವನ್ನು ಪಡೆದು ಕಚೇರಿಗೆ ಹಾಜರುಪಡಿಸದೆ ಇರುವ 11 ಕಲ್ಲು ಗಣಿ ಗುತ್ತಿಗೆಗಳನ್ನು ರದ್ದುಪಡಿಸಲು ನಿರ್ಣಯಿಸಲಾಗಿರುತ್ತದೆ. ಅದರಂತೆ ಮಂಡ್ಯ ಜಿಲ್ಲೆಯಾದ್ಯಂತ ಪರಿಸರ ವಿಮೋಚನಾ ಪತ್ರ ಪಡೆಯದೆ ಇದ್ದ 11 ಕಲ್ಲು ಗಣಿ ಗುತ್ತಿಗೆಗಳನ್ನು ಜುಲೈ 31 ರಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿರುತ್ತದೆ .

ಪಾಂಡವಪುರ ತಾಲ್ಲೂಕು ಬೇಬಿ ಬೆಟ್ಟದ ಕಾವಲು ಗ್ರಾಮದ ವ್ಯಾಪ್ತಿಯಲ್ಲಿನ 11 ಕ್ರಷರ್ ಘಟಕಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ, ಮಂಡ್ಯ ಜಿಲ್ಲೆ ರವರು ಜುಲೈ 28 ರಂದು ನಡೆದ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ ಸಭೆಯ ತೀರ್ಮಾನದಂತೆ ರದ್ದುಪಡಿಸಿರುತ್ತಾರೆ.

ಹಿರಿಯ ಭೂವಿಜ್ಞಾನಿ ಮತ್ತು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ, ಮಂಡ್ಯ ಜಿಲ್ಲೆ ಇವರು ಕ್ರಷರ್ ಪರವಾನಿಗೆಗೆ ಸಹಿ ಮಾಡಿ ವಿತರಿಸಿರುವ ಕ್ರಷರ್ ಪರವಾನಿಗೆಗಳನ್ನು ಜುಲೈ 28 ರಂದು ನಡೆದ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ ಸಭೆಯಲ್ಲಿ ರದ್ದುಪಡಿಸಲು ತೀರ್ಮಾನಿಸಲಾಗಿದ್ದು, ಅದರಂತೆ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ, ಮಂಡ್ಯ ಜಿಲ್ಲೆ ರವರು 22 ಕ್ರಷರ್‌ಗಳ ಕ್ರಷರ್‌ ಪರವಾನಿಗೆ ( ಫಾರಂ- A ) ಯನ್ನು ರದ್ದುಪಡಿಸಿರುತ್ತಾರೆ .

ಚಾಲಿತ ದಳದ ರಚನೆ : ಮಂಡ್ಯ ಜಿಲ್ಲೆಯ ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ನಾಗಮಂಗಲ ತಾಲ್ಲೂಕುಗಳಲ್ಲಿ ಅನಧಿಕೃತ ಕಲ್ಲುಗಣಿಗಾರಿಕೆ / ಸಾಗಾಣಿಕೆ ನಿಯಂತ್ರಣ ಸಂಬಂಧ ಜಿಲ್ಲಾ ಟಾಸ್ಕ್ ಫೋರ್ಸ್ ವತಿಯಿಂದ ತಾಲ್ಲೂಕುವಾರು ಕಂದಾಯ ಇಲಾಖೆ , ಅರಣ್ಯ ಇಲಾಖೆ, ಪಂಚಾಯತ್‌ ರಾಜ್ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ / ಸಿಬ್ಬಂದಿಯನ್ನು ಒಳಗೊಂಡಂತೆ ಚಾಲಿತ ದಳವನ್ನು ರಚಿಸಲಾಗಿದೆ. ಅದರಂತೆ ಚಾಲಿತ ದಳವು ಕಾರ್ಯನಿರ್ವಹಿಸುತ್ತಿದೆ.

ಚೆಕ್‌ಪೋಸ್ಟ್ ಸ್ಥಾಪನೆ: ಮಂಡ್ಯ ಜಿಲ್ಲೆಯಾದ್ಯಂತ ಅನಧಿಕೃತ ಕಲ್ಲು ಗಣಿಗಾರಿಕೆ / ಸಾಗಾಣಿಕೆ ನಿಯಂತ್ರಣ ಸಂಬಂಧ ಜಿಲ್ಲಾ ಟಾಸ್ಕ್ ಫೋರ್ಸ್ ವತಿಯಿಂದ ಕಂದಾಯ ಇಲಾಖೆ, ಅರಣ್ಯ ಇಲಾಖೆ , ಪಂಚಾಯತ್‌ರಾಜ್‌ ಇಲಾಖೆ , ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ / ಸಿಬ್ಬಂದಿಯನ್ನು ಒಳಗೊಂಡಂತೆ 11 ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಲಾಗಿರುತ್ತದೆ .

ಜಂಟಿ ತಂಡ ರಚನೆ: ಮಂಡ್ಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಅನಧಿಕೃತ ಉಪಖನಿಜ ಗಣಿಗಾರಿಕೆ / ಸಾಗಾಣಿಕೆ ಹಾಗೂ ಕ್ರಷರ್ ಘಟಕಗಳು ಕಾರ್ಯನಿರ್ವಹಣೆ ಸಂಬಂಧ ಅತೀ ಹೆಚ್ಚು ದೂರು ಬರುತ್ತಿರುವ ಪ್ರದೇಶಗಳಾದ ಮಂಡ್ಯ ತಾಲ್ಲೂಕಿನ ರಾಗಿಮುದ್ದನಹಳ್ಳಿ , ಆನೆಕುಪ್ಪೆ , ಮದ್ದೂರು ತಾಲ್ಲೂಕಿನ ಕೆ. ಹೊನ್ನಲಗೆರೆ, ಶಿಂಷಾ ನದಿ ಪಾತ್ರ, ಶ್ರೀರಂಗಪಟ್ಟಣ ತಾಲ್ಲೂಕಿನ ಚನ್ನನಕೆರೆ, ಜಕ್ಕನಹಳ್ಳಿ, ಕಾಳೇನಹಳ್ಳಿ, ಗೌಡಹಳ್ಳಿ, ಗಣಂಗೂರು, ಹಂಗರಹಳ್ಳಿ, ಮುಂಡಗದೊರೆ, ಸಿದ್ದಾಪುರ, ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಕಾವಲು, ಚಿನಕುರಳಿ, ಕಾಮನಾಯಕನಹಳ್ಳಿ, ಶಂಭೂನಹಳ್ಳಿ ನರಹಳ್ಳಿ, ನಾಗಮಂಗಲ ತಾಲ್ಲೂಕಿನ ಸಂಕನಹಳ್ಳಿ, ಗಂಗಸಮುದ್ರ , ದೇವರಹೊಸೂರು, ಕಾಂತಾಪುರ, ಕೆ.ಆರ್. ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು. ಹೇಮಾವತಿ ನದಿ ಪಾತ್ರ , ಮಳವಳ್ಳಿ ತಾಲ್ಲೂಕಿನ ಆಗಸನಪುರ ಗ್ರಾಮಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿ ನಿಗಾವಹಿಸಲು ಕಂದಾಯ, ಅರಣ್ಯ, ಪಂಚಾಯತ್‌ ರಾಜ್, ಪ್ರಾದೇಶಿಕ ಸಾರಿಗೆ, ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಂತೆ ಜಂಟಿ ತಂಡಗಳನ್ನು ರಚನೆ ಮಾಡಲಾಗಿರುತ್ತದೆ.

ಪ್ರಕರಣ ದಾಖಲಿಸಿರುವ ವಿವರ: ಮಂಡ್ಯ ಜಿಲ್ಲೆಯಾದ್ಯಂತ ಅನಧಿಕೃತ ಉಪಖನಿಜ ಗಣಿಗಾರಿಕೆ, ದಾಸ್ತಾನು ಸಂಬಂಧ 12 ಪಿ. ಸಿ.ಆರ್. ಗಳನ್ನು ಸಂಬಂಧಿಸಿದ ನ್ಯಾಯಾಲಯಗಳಲ್ಲಿ ದಾಖಲಿಸಲಾಗಿದ್ದು, ಇನ್ನೂ ಹಲವಾರು ಪ್ರಕರಣಗಳನ್ನು ದಾಖಲಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಅನಧಿಕೃತ ಉಪಖನಿಜ ಸಾಗಾಣಿಕೆ ಸಂಬಂಧ ಏಪ್ರಿಲ್ 2021 ರಿಂದ ಇಲ್ಲಿಯವರೆಗೆ ಒಟ್ಟು 119 ವಾಹನಗಳಿಂದ 33.73 ಲಕ್ಷಗಳನ್ನು ಸಂಗ್ರಹಿಸಲಾಗಿರುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಪದ್ಮಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಆರ್​ಎಸ್ ಸುತ್ತಮುತ್ತಲ ಗಣಿಗಾರಿಕೆ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರ ಗಮನ ಸೆಳೆದ ಸುಮಲತಾ

(illegal stone mining regulation 11 check posts established in mandya district )