ಮಂಡ್ಯ: ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ! ವೇದಿಕೆಯಲ್ಲಿ ಬಾಲಕನಿಗೆ ಮುತ್ತಿಟ್ಟ ಮಹಿಳಾ ನೃತ್ಯಗಾರರು

ಗ್ರಾಮದೇವತೆ ಹಬ್ಬದಲ್ಲಿ ರಸಮಂಜನರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮಹಿಳಾ ನೃತ್ಯಗಾರರು ಅಶ್ಲೀಲವಾಗಿ ಡ್ಯಾನ್ಸ್ ಮಾಡಿದ್ದಾರೆ. ಜೊತೆಗೆ ಬಾಲಕನೊಬ್ಬನನ್ನ ವೇದಿಕೆಗೆ ಕರೆದುಕೊಂಡು ಆತನಿಗೆ ಮುತ್ತಿಟ್ಟು ಅಸಭ್ಯವಾಗಿ ವರ್ತಿಸಿದ್ದಾರೆ.

ಮಂಡ್ಯ: ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ! ವೇದಿಕೆಯಲ್ಲಿ ಬಾಲಕನಿಗೆ ಮುತ್ತಿಟ್ಟ ಮಹಿಳಾ ನೃತ್ಯಗಾರರು
ನೃತ್ಯ ಮಾಡುತ್ತಿದ್ದಾರೆ
Edited By:

Updated on: Mar 09, 2022 | 11:11 AM

ಮಂಡ್ಯ: ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ (Dance) ಮಾಡಿರುವ ಘಟನೆ ಮಂಡ್ಯ (Mandya) ಜಿಲ್ಲೆ ನಾಗಮಂಗಲ ತಾಲೂಕಿನ ತೋಳಸಿ ಕೊಬ್ಬರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದೇವತೆ ಹಬ್ಬದಲ್ಲಿ ರಸಮಂಜನರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮಹಿಳಾ ನೃತ್ಯಗಾರರು ಅಶ್ಲೀಲವಾಗಿ ಡ್ಯಾನ್ಸ್ ಮಾಡಿದ್ದಾರೆ. ಜೊತೆಗೆ ಬಾಲಕನೊಬ್ಬನನ್ನ ವೇದಿಕೆಗೆ ಕರೆದುಕೊಂಡು ಆತನಿಗೆ ಮುತ್ತಿಟ್ಟು ಅಸಭ್ಯವಾಗಿ ವರ್ತಿಸಿದ್ದಾರೆ. ಕಾರ್ಯಕ್ರಮದಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ ಹಾಗೂ ಮಾಜಿ ಶಾಸಕ ಚಲುವರಾಯಸ್ವಾಮಿ ಭಾಗಿಯಾಗಿದ್ದರು. ಸದ್ಯ ನೃತ್ಯದ ಬಗ್ಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಗಾಂಜಾ ಸಪ್ಲೈ ಮಾಡುತ್ತಿದ್ದ ಅರೋಪಿ ಬಂಧನ:
ನೆಲಮಂಗಲ: ಹೊರ ರಾಜ್ಯದ ಕಾರ್ಮಿಕರಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ ಅರೋಪಿಯನ್ನು ಬಂಧಿಸಲಾಗಿದೆ. ದಾಬಸ್ ಪೇಟೆ ಪೊಲೀಸರಿಂದ ಬೆಂಗಳೂರಿನ ಬನಶಂಕರಿಯ ಮಧು(20) ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ.  2ಕೆಜಿ ಗಾಂಜಾ, ನಗದು, ಮೊಬೈಲ್ ಜಪ್ತಿ ಮಾಡಿದ್ದಾರೆ. ದಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನಾಭರಣ ಕಳ್ಳತನ ಮಾಡುತಿದ್ದ ಆರೋಪಿ ಅರೆಸ್ಟ್:
ಬೀಗ ಹಾಕಿದ ಮನೆ ಗುರುತಿಸಿ ಚಿನ್ನಾಭರಣ ಕಳ್ಳತನ ಮಾಡುತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಲೋಕನಾಥ್ ಬಂಧಿತ ಆರೋಪಿ. ಆರೋಪಿ ಕಾಮಾಕ್ಷಿ ಪಾಳ್ಯದ ಮನೆಯೊಂದರಲ್ಲಿ ಕೃತ್ಯ ಎಸಗಿದ್ದ. ಆರೋಪಿ ವಿಚಾರಣೆ ವೇಳೆ ಆರು ಮನೆಗಳ್ಳತನ ಕೃತ್ಯ ಬಯಲಾಗಿದೆ. ಬಂಧಿತನಿಂದ 14 ಲಕ್ಷ ಮೌಲ್ಯದ 288 ಗ್ರಾಂ ಚಿನ್ನಭಾರಣ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ

ರಷ್ಯಾ ವಿರುದ್ಧದ ಉಕ್ರೇನ್ ಹೋರಾಟ ಬೆಂಬಲಿಸಿ ಶಸ್ತ್ರ ಹಿಡಿಯಲು ಸಿದ್ಧರಾದ ಕೆಲ ಭಾರತೀಯರು

ಅಮ್ಮನನ್ನು ಕಳೆದುಕೊಂಡು ಅನಾಥಳಾದ ಪುಟ್ಟ ಹುಡುಗಿ ಕುಡಿಯಲು ನೀರು ಸಿಗದೆ ಜೀವ ಬಿಟ್ಟಳು; ರಷ್ಯಾ ದಾಳಿ ಸೃಷ್ಟಿಸಿದ ಭೀಕರತೆ

Published On - 11:03 am, Wed, 9 March 22