ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ; ಸಾವಿರಾರು ಕರುಳ ಬಳ್ಳಿಗಳನ್ನ ಕೊಂದಿದ್ದವ ಅರೆಸ್ಟ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 05, 2024 | 6:36 PM

ಅದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣ. ಕರುಳ ಬಳ್ಳಿಗಳನ್ನ ಕೊಲ್ಲುವಂತಹ ಹೇಯ ಕೃತ್ಯವನ್ನ ಪಾಪಿಗಳು ಎಸಗುತ್ತಿದ್ದರು. ಈ ಕುರಿತು ಪೊಲೀಸರು ಹಾಗೂ ಆರೋಗ್ಯ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡರೂ ಆ ಪಾಪಿಗಳು ಮಾತ್ರ ಕರಾಳ ದಂಧೆಯನ್ನ ಆಕ್ರಮವಾಗಿ ನಡೆಸುತ್ತಿದ್ದರು. ಇಡೀ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ನೆಟ್​ ವರ್ಕ್ ಸ್ಥಾಪನೆ ಮಾಡಿಕೊಂಡು ಹೇಯಕೃತ್ಯವನ್ನ ಎಸೆಗುತ್ತಿದ್ದ ಕಿಂಗ್ ಪಿನ್ ಸೇರಿ ಹಲವು ದಂಧೆಕೋರನ್ನ ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ.

ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ; ಸಾವಿರಾರು ಕರುಳ ಬಳ್ಳಿಗಳನ್ನ ಕೊಂದಿದ್ದವ ಅರೆಸ್ಟ್
ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಆರೋಪಿ ಅರೆಸ್ಟ್​
Follow us on

ಮಂಡ್ಯ, ಸೆ.05:  ಸಕ್ಕರೆ ನಗರಿ ಮಂಡ್ಯ(Mandya) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದ ಹೆಣ್ಣುಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಹಣದಾಸೆಗೆ ಕರುಳಬಳ್ಳಿಗಳನ್ನ ಕೊಲ್ಲುವಂತಹ ಹೇಯ ಕೃತ್ಯವನ್ನ ಪಾಪಿಗಳು ಎಸುಗುತ್ತಿದ್ದರು. ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಏನೆಲ್ಲ ಕ್ರಮಗಳನ್ನ ತೆಗೆದುಕೊಂಡರೂ, ತಮ್ಮದೇ ಆದ ನೆಟ್ ವರ್ಕ್ ಮಾಡಿಕೊಂಡು ಕರಾಳದಂಧೆಯನ್ನ ಈ ಆರೋಪಿಗಳು ನಡೆಸುತ್ತಿದ್ದರು. ಇನ್ನು ಇಂತಹ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಪ್ರಕರಣದ ಕಿಂಗ್ ಪಿನ್ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಎಮ್ ಶೆಟ್ಟಿಹಳ್ಳಿ ಗ್ರಾಮದ ಅಭಿಷೇಕ್, ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮೂಲದ ವಿರೇಶ್ ಸೇರಿ ಒಟ್ಟು 12 ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 23 ಲಕ್ಷ ರೂ. ಮೌಲ್ಯದ ಎರಡು ಸ್ಕ್ಯಾನಿಂಗ್ ಮಶೀನ್, ಮೂರು ಕಾರು ಹಾಗೂ ಮೂರು ಮೊಬೈಲ್ ಗಳನ್ನ ವಶಕ್ಕೆ ಪಡೆದಿದ್ದಾರೆ.

ಮೊದಲಿಗೆ ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಆಲೆಮನೆಯಲ್ಲಿ ನಡೆಯುತ್ತಿದ್ದ ಕರಾಳದಂಧೆಯನ್ನ ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಭೇದಿಸಿ ಹಲವು ಮಂದಿಯನ್ನ ಬಂಧಿಸಿದ್ದರು. ನಂತರ ಈ ಪ್ರಕರಣವನ್ನು ಸಿಐಡಿಗೂ ವಹಿಸಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ಕಿಂಗ್ ಪಿನ್ ಆಗಿದ್ದ ಅಭಿಷೇಕ್ ಬಂಧನವಾಗದೇ ತಲೆಮರೆಸಿಕೊಂಡಿದ್ದ. ಬಳಿಕ ಪಾಂಡವಪುರದ ಹೆಲ್ತ್ ಕ್ವಾಟ್ರಸ್, ಮೇಲುಕೋಟೆ, ನಾಗಮಂಗಲ ಸೇರಿದಂತೆ ಹಲವು ಕಡೆಗಳಲ್ಲಿ ನಡೆಯುತ್ತಿದ್ದ ಕರಾಳದಂಧೆ ಬೇಧಿಸಿ ಹಲವು ಆರೋಪಿಗಳನ್ನ ಬಂಧನ ಮಾಡಲಾಗಿತ್ತು. ಆದರೆ, ಐದು ಪ್ರಕರಣಗಳಲ್ಲಿ ಸಿಐಡಿ ಪೊಲೀಸರು ಸೇರಿದಂತೆ ಮಂಡ್ಯ ಜಿಲ್ಲೆಯ ಪೊಲೀಸರಿಗೆ ಚಳ್ಳೆಯನ್ನು ತಿನ್ನಿಸಿ ಕಿಂಗ್ ಪಿನ್ ಅಭಿಷೇಕ್ ಕರಾಳದಂಧೆಯನ್ನ ಮುಂದುವರೆಸಿಕೊಂಡು ಹೋಗಿದ್ದ. ಈತನ ಬಂಧನಕ್ಕಾಗಿಯೇ ಏಳು ತಂಡಗಳನ್ನ ರಚನೆ ಮಾಡಲಾಗಿತ್ತು. ಕೊನೆಗೂ ಐನಾತಿ ಅಭಿಷೇಕ್ ಬಂಧನವಾಗಿದೆ.

ಇದನ್ನೂ ಓದಿ:ಮಂಡ್ಯದಲ್ಲಿ ನಿಲ್ಲದ ಹೆಣ್ಣುಭ್ರೂಣ ಪತ್ತೆ, ಹತ್ಯೆ ದಂಧೆ: ಮಾವಿನಕೆರೆ ತೋಟದ ಮನೆಯಲ್ಲಿ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿಗಳು

ಒಮಿನಿ ಕಾರಿನಲ್ಲೇ ನಡೆಯುತ್ತಿತ್ತು ಸ್ಕ್ಯಾನಿಂಗ್

‘ಅಂದಹಾಗೆ ಹಳೇ ಮೈಸೂರು ಭಾಗದ ಜಿಲ್ಲೆಗಳಾದ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಈ ಖತರ್ನಾಕ್​ಗಳು ನೆಟ್ ವರ್ಕ್ ಹೊಂದಿದ್ದರು. ಇನ್ನು ಹಾಡ್ಯ ಆಲೆಮನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅಭಿಷೇಕ್ ಬಂಧನವಾಗಿರಲಿಲ್ಲ. ಈ ಪ್ರಕರಣವನ್ನೇ ಬಳಸಿಕೊಂಡು ಡಿಮ್ಯಾಂಡ್ ಕ್ರಿಯೇಟ್​ ಮಾಡಿಕೊಂಡು ಕಿಂಗ್ ಪಿನ್ ಅಭಿಷೇಕ್, ಮತ್ತೊಬ್ಬ ಆರೋಪಿ ವಿರೇಶ್​ನ ಸಹಾಯದಿಂದ ದಂಧೆ ಮುಂದುವರೆಸಿದ್ದ. ಐದು ಪ್ರಕರಣಗಳಲ್ಲಿ ಚಾಲಕಿ ಅಭಿಷೇಕ್ ಬಂಧನವಾಗಿರಲಿಲ್ಲ. ಇನ್ನು ಇಂತಹದ್ದೆ ಸ್ಥಳದಲ್ಲೇ ಸ್ಕ್ಯಾನಿಂಗ್ ಮಾಡಿದ್ರೆ ಸಿಕ್ಕಿಬಿಳುತ್ತೇವೆ ಎಂದು ಒಮಿನಿ ಕಾರಿನಲ್ಲೇ ಮಹಿಳೆಯರಿಗೆ ಸ್ಕ್ಯಾನಿಂಗ್ ಮಾಡುತ್ತಿದ್ದರು.

ಕರುಳಬಳ್ಳಿ ಹೊರೆತೆಗೆದು ಮೆಡಿಕಲ್ ವೇಸ್ಟ್ ಜೊತೆ ಎಸೆಯುತ್ತಿದ್ದ ಕೀಚಕರು

ಒಂದು ಹೆಣ್ಣುಭ್ರೂಣಲಿಂಗ ಪತ್ತೆ ಹಾಗೂ ಹತ್ಯೆಗೆ 25 ಸಾವಿರದಿಂದ 1 ಲಕ್ಷ ಪಡೆಯುತ್ತಿದ್ದರು. ಇನ್ನು ಕರುಳಬಳ್ಳಿಗಳನ್ನ ಕೊಂದು ಮೆಡಿಕಲ್ ವೆಸ್ಟ್ ಜೊತೆ ಎಸೆಯುತ್ತಿದ್ದರು. ಇವರ ದಂಧೆ ಯಾರಿಗೂ ತಿಳಿಯಬಾರದು, ಪೊಲೀಸರ ಕೈಗೆ ಸಿಗಬಾರದು ಎಂದು ಮೊಬೈಲ್ ಕಾಲ್ ಬದಲು ಇಂಟರ್​ನೆಟ್ ಕಾಲ್ ಮಾಡುತ್ತಿದ್ದ ಇವರು, ಹೆಣ್ಣುಭ್ರೂಣ ಪತ್ತೆ ಮಾಡಲು ವೈದ್ಯರೊಬ್ಬರಿಂದ ಐದು ಸ್ಕ್ಯಾನಿಂಗ್ ಮಶೀನ್​ಗಳನ್ನ ಖರೀದಿಸಿದ್ದರು. ಹೀಗಾಗಿ ಪೊಲೀಸರಿಗೂ ಕೂಡ ದೊಡ್ಡ ತಲೆ ನೋವಾಗಿತ್ತು.

ಬಳಿಕ ಪ್ರಮುಖ ಕಿಂಗ್ ಪಿನ್ ಸೇರಿ ಹಲವರನ್ನ ಬಂಧಿಸಲು ಪ್ರತ್ಯೇಕ ಏಳು ತಂಡಗಳನ್ನ ರಚನೆ ಮಾಡಲಾಗಿತ್ತು. ಆರೋಗ್ಯ ಇಲಾಖೆಯ ಮಾಹಿತಿ ಆಧರಿಸಿ ಮಂಡ್ಯ ಪೊಲೀಸರು ಇದೀಗ 12 ಆರೋಪಿಗಳನ್ನ ಬಂಧಿಸಿದ್ದು, ಪ್ರಕರಣದಲ್ಲಿ ಹಲವು ವೈದ್ಯರ ಪಾತ್ರ ಕೂಡ ಇದ್ದು, ಅವರ ಬಂಧನಕ್ಕೂ ಜಾಲ ಬೀಸಿದ್ದಾರೆ. ಒಟ್ಟಾರೆ ಹಣದಾಸೆಗೆ ಕರಳುಬಳ್ಳಿಗಳನ್ನ ಕೊಲ್ಲುತ್ತಿದ್ದ ಕೀಚಕರನ್ನ ಕೊನೆಗೂ ಪೊಲೀಸರು ಹೆಡೆಮುರಿ ಕಟ್ಟಿದ್ದು, ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ