ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ಕೇಸ್​ ಬೇಧಿಸಿದ ಖಾಕಿ: ಮಂಡ್ಯದಲ್ಲಿ ಹೆಣ್ಣು ಭ್ರೂಣ ಪತ್ತೆ, ಹತ್ಯೆಯ ಕಿಂಗ್‌ಪಿನ್ ಬಂಧನ

ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ಕರಾಳ ದಂಧೆಯನ್ನು ಪೊಲೀಸರು ಬೇಧಿಸಿದ್ದಾರೆ. ಮಂಡ್ಯದಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಕಿಂಗ್​ಪಿನ್​ ಅಭಿಷೇಕ್​ ಎಂಬಾತನನ್ನು ಬಂಧಿಸಲಾಗಿದೆ. ಆ ಮೂಲಕ ಸಾವಿರಾರು ಕರುಳಬಳ್ಳಿ ಕೊಂದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಿಂಗ್​ಪಿನ್​ನ ಹಿನ್ನೆಲೆ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. 

ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ಕೇಸ್​ ಬೇಧಿಸಿದ ಖಾಕಿ: ಮಂಡ್ಯದಲ್ಲಿ ಹೆಣ್ಣು ಭ್ರೂಣ ಪತ್ತೆ, ಹತ್ಯೆಯ ಕಿಂಗ್‌ಪಿನ್ ಬಂಧನ
ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ಕೇಸ್​ ಬೇಧಿಸಿದ ಖಾಕಿ: ಮಂಡ್ಯದಲ್ಲಿ ಹೆಣ್ಣು ಭ್ರೂಣ ಪತ್ತೆ, ಹತ್ಯೆಯ ಕಿಂಗ್‌ಪಿನ್ ಬಂಧನ
Follow us
ಪ್ರಶಾಂತ್​ ಬಿ.
| Updated By: ಗಂಗಾಧರ​ ಬ. ಸಾಬೋಜಿ

Updated on: Sep 05, 2024 | 8:02 AM

ಮಂಡ್ಯ, ಸೆಪ್ಟೆಂಬರ್​ 05: ಇಡಿ ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ಮಂಡ್ಯದಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣವನ್ನು (female fetus) ಪೊಲೀಸರು ಬೇಧಿಸಿದ್ದು, ಕೊನೆಗೂ ಪ್ರಕರಣದ ಕಿಂಗ್‌ಪಿನ್​​ ನನ್ನು ಬಂಧಿಸಲಾಗಿದೆ. ಆ ಮೂಲಕ ಸವಾಲಾಗಿದ್ದ ಪ್ರಕರಣ ಭೇಧಿಸುವಲ್ಲಿ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಯಶಸ್ವಿ ಆಗಿದೆ. ಸಿಐಡಿಗೂ ಚಳ್ಳೆಹಣ್ಣು ತಿನ್ನಿಸಿ ದಂಧೆ ವಿಸ್ತರಿಸಿದ್ದ ಚಾಲಾಕಿ ಅಭಿಷೇಕ್​ ಬಂಧಿತ ಪ್ರಮುಖ ಆರೋಪಿ. ಕಿಂಗ್​ಪಿನ್ ಅಭಿಷೇಕ್ ಜೊತೆ ವಿರೇಶ್ ಸೇರಿದಂತೆ 12 ಆರೋಪಿಗಳನ್ನು ಬಂಧಿಸಲಾಗಿದೆ.

ಈಗಾಗಲೇ ಭ್ರೂಣ ಹತ್ಯೆ ಕೇಸ್​ನಲ್ಲಿ ವಿರೇಶ್​ ಜೈಲು ಸೇರಿ ಬೇಲ್ ಮೇಲೆ ಹೊರ ಬಂದಿದ್ದ. ಅಭಿಷೇಕ್ ಪಾಂಡವಪುರ ತಾಲೂಕಿನ ಎಂ ಶೆಟ್ಟಿಹಳ್ಳಿ ನಿವಾಸಿ. ಬಂಧಿತರಿಂದ 2 ಸ್ಕ್ಯಾನಿಂಗ್ ಮಷಿನ್, 3 ಕಾರು, ಮೊಬೈಲ್ ಸೇರಿ 23 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಿಂಗ್​ಪಿನ್ ಸೇರಿ ಪ್ರಕರಣ ಭೇದಿಸಲು ಏಳು ತಂಡ ರಚನೆ ಮಾಡಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿರುವ ವೈದ್ಯರ ಬಂಧನಕ್ಕೂ ಪೊಲೀಸರು ಮುಂದಾಗಿದ್ದಾರೆ.

ಕಿಂಗ್​ಪಿನ್ ಅಭಿಷೇಕ್ ಹಿನ್ನೆಲೆ ಭಯಾನಕ: ಪೊಲೀಸರೇ ಶಾಕ್ 

ಬಂಧಿತ ಆರೋಪಿ ಅಭಿಷೇಕ್​ನ ನೆಟ್‌ವರ್ಕ್‌ ಮತ್ತು ತಂತ್ರಗಾರಿಗೆ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ತನ್ನದೇ ನೆಟ್‌ವರ್ಕ್‌ ಮೂಲಕ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಹೇಯ ಕೃತ್ಯ ನಡೆಸುತ್ತಿದ್ದ. ಪೊಲೀಸರಿಗೆ ಯಾಮಾರಿಸಲು ಮೊಬೈಲ್ ಬದಲು ಇಂಟರ್ನೆಟ್ ಕಾಲ್ ಬಳಕೆ‌ ಮಾಡುತ್ತಿದ್ದ. ಹಾಡ್ಯ ಗ್ರಾಮದ ಆಲೆಮನೆ ಕೇಸ್‌ನಲ್ಲಿ ಸಿಐಡಿ ಕೈಗೂ ಸಿಗದೆ ದಂಧೆ ವಿಸ್ತರಣೆ ಮಾಡಲಾಗಿತ್ತು.

ಇದನ್ನೂ ಓದಿ: ಮಂಡ್ಯದಲ್ಲಿ ನಿಲ್ಲದ ಹೆಣ್ಣುಭ್ರೂಣ ಪತ್ತೆ, ಹತ್ಯೆ ದಂಧೆ: ಮಾವಿನಕೆರೆ ತೋಟದ ಮನೆಯಲ್ಲಿ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿಗಳು

ಆಲೆಮನೆ ಪ್ರಕರಣವನ್ನೇ ಬಳಸಿಕೊಂಡು ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದ. ಒಂದು ಹೆಣ್ಣು ಭ್ರೂಣಹತ್ಯೆಗೆ 25 ಸಾವಿರದಿಂದ 1 ಲಕ್ಷ ರೂ.ವರೆಗೆ ಹಣ ಪಡೆಯುತ್ತಿದ. ಆಲೆಮನೆ, ಪಾಂಡವಪುರ ಹೆಲ್ತ್ ಕ್ವಾಟರ್ಸ್ ಕೇಸ್ ಸೇರಿದಂತೆ 5 ಕೇಸ್‌ನಲ್ಲಿ ಅಭಿಷೇಕ್ ಕಿಂಗ್‌ಪಿನ್ ಆಗಿದ್ದಾನೆ. ಓಮಿನಿ ವಾಹನದಲ್ಲಿ ತಾನೇ ಸ್ಕ್ಯಾನಿಂಗ್ ಮಾಡುತ್ತಿದ್ದ.

ಇದನ್ನೂ ಓದಿ: ಮಂಡ್ಯ: 25-30 ಸಾವಿರಕ್ಕೆ ಗರ್ಭಪಾತ ಮಾಡುತಿದ್ವಿ, ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಬಂಧಿತ ನರ್ಸ್

ವೈದ್ಯರೊಬ್ಬರಿಂದ 5 ಸ್ಕ್ಯಾನಿಂಗ್ ಮಷಿನ್ ಖರೀದಿಸಿದ್ದ. ಸ್ಕ್ಯಾನಿಂಗ್‌ನಲ್ಲಿ ಹೆಣ್ಣು ಭ್ರೂಣ ಪತ್ತೆಯಾದರೆ, ಮಾತ್ರೆ ಬಳಸಿ ಭ್ರೂಣ ಹತ್ಯೆ ಮಾಡಲಾಗಿತಿತ್ತು. ಬಳಿಕ ಕರುಳಬಳ್ಳಿ ಹೊರೆ ತೆಗೆದು ಮೆಡಿಕಲ್ ತ್ಯಾಜ್ಯದೊಂದಿಗೆ ಎಸೆಯುತ್ತಿದ್ದ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.