ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಸ್ಥಗಿತ: ತಪ್ಪಿದ ಭಾರಿ ದುರಂತ, 40 ನವಜಾತ ಶಿಶುಗಳ ರಕ್ಷಣೆ

ಬೀದರ್​ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಭಾರಿ ಅವಾಂತರಗಳನ್ನು ಸೃಷ್ಟಿಸಿದೆ. ಬ್ರಿಮ್ಸ್ ಆಸ್ಪತ್ರೆಯ ನೆಲಮಾಳಿಗೆಯಲ್ಲಿರುವ ಜನರೇಟರ್ ಕೋಣೆಗೆ ನೀರು ನುಗ್ಗಿದ ಪರಿಣಾಮ ಶಾರ್ಟ್​ ಸರ್ಕ್ಯೂಟ್ ಉಂಟಾಗಿ ಬುಧವಾರ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿತು. ಅದೃಷ್ಟವಶಾತ್, ಸಿಬ್ಬಂದಿಯ ಸಮಯಪ್ರಜ್ಞೆಯಿಂದ 40 ನವಜಾತ ಶಿಶುಗಳ ಜೀವ ಉಳಿದಿದೆ.

ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಸ್ಥಗಿತ: ತಪ್ಪಿದ ಭಾರಿ ದುರಂತ, 40 ನವಜಾತ ಶಿಶುಗಳ ರಕ್ಷಣೆ
ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಸ್ಥಗಿತ: ತಪ್ಪಿದ ಭಾರಿ ದುರಂತ, 40 ನವಜಾತ ಶಿಶುಗಳ ರಕ್ಷಣೆ
Follow us
|

Updated on: Sep 05, 2024 | 8:12 AM

ಬೀದರ್, ಸೆಪ್ಟೆಂಬರ್ 5: ಜಿಲ್ಲಾಸ್ಪತ್ರೆ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಆಮ್ಲಜನಕ ಪೂರೈಕೆಗೆ ಅಡ್ಡಿಯಾಗಿ ಬುಧವಾರ ಸಮಸ್ಯೆ ಉಂಟಾಯಿತು. ಆದರೆ, ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ತುರ್ತು ಕ್ರಮದಿಂದಾಗಿ 40 ನವಜಾತ ಶಿಶುಗಳ ಪ್ರಾಣ ಉಳಿದಿದೆ. ಆಮ್ಲಜನಕ ಪೂರೈಕೆ ಸ್ಥಗಿತಗೊಂಡ ತಕ್ಷಣವೇ ಆಸ್ಪತ್ರೆ ಸಿಬ್ಬಂದಿ ಶಿಶುಗಳನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಮೂಲಕ ಜೀವ ಉಳಿಸಿದ್ದಾರೆ.

ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಬ್ರಿಮ್ಸ್ ಕಟ್ಟಡದ ನೆಲಮಾಳಿಗೆಯಲ್ಲಿರುವ ಜನರೇಟರ್ ಕೋಣೆಗೆ ನೀರು ನುಗ್ಗಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮೂರನೇ ಮಹಡಿಗೆ ಮತ್ತು ಆರನೇ ಮಹಡಿಯಲ್ಲಿನ ಎನ್‌ಐಸಿಯು ಘಟಕಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಎಚ್ಚೆತ್ತ ಸಿಬ್ಬಂದಿ ನವಜಾತ ಶಿಶುಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದರು. ನರ್ಸಿಂಗ್ ಸಿಬ್ಬಂದಿ ಕೈ ಪಂಪ್ ಮೂಲಕ ಆಮ್ಲಜನಕ ಒದಗಿಸಿ ವೃದ್ಧೆಯೊಬ್ಬರ ಜೀವ ಉಳಿಸಿದ್ದಾರೆ.

ಬ್ರಿಮ್ಸ್​​ನ ಎನ್​ಐಸಿಯು ಘಟಕದಲ್ಲಿ 40 ಶಿಶುಗಳಿದ್ದವು. ಆಮ್ಲಜನಕ ಪೂರೈಕೆ ಸ್ಥಗಿತಗೊಂಡ ನಂತರ ಎಲ್ಲಾ 40 ನವಜಾತ ಶಿಶುಗಳನ್ನು ಬೇರೆ ಆಸ್ಪತ್ರೆಗಳಿಗೆ ರವಾನಿಸಲಾಯಿತು. ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿಗಳ ಸಹಾಯದಿಂದ ಜನರೇಟರ್ ಕೊಠಡಿಯಿಂದ ನೀರನ್ನು ಹೊರಹಾಕಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹೇಶ ಬಿರಾದಾರ್ ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

ಬೀದರ್​​ನಲ್ಲಿ ಮೂರು ದಿನಗಳಿಂದ ಧಾರಾಕಾರ ಮಳೆ

ಬೀದರ್ ಜಿಲ್ಲೆಯಲ್ಲಿ ಕಳೆದ ಮೂರು ದಿನದಿಂದ ಧಾರಕಾರವಾಗಿ ಮಳೆಯಾಗುತ್ತಿದ್ದು ಜನ ಮನೆಯಿಂದ ಹೊರಬಾದಂತಾ ಸ್ಥಿತಿಯುಂಟಾಗಿದೆ. ಬೀದರ್ ಚಿಟ್ಟಾ ಮುಖ್ಯರಸ್ತೆಯ ಮೇಲೆ ಹಳ್ಳದ ನೀರು ಹರಿಯುತ್ತಿದ್ದು ಅದರಲ್ಲಿಯೇ ಜನರು ಜೀವದ ಹಂಗುತೊರೆದು ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ: ಬೀದರ್: ಸರ್ಕಾರಿ ಶಾಲೆ ಸುತ್ತಮುತ್ತ ತುಂಬಿದ ನೀರು, ಒಳಗಡೆ ಹೋಗಲಾಗದ್ದಕ್ಕೆ ಐದು ದಿನ ರಜೆ!

ಮಳೆಯಿಂದಾಗಿ ಜಿಲ್ಲೆಯ ರೈತರು ನಲುಗಿಹೋಗಿದ್ದಾರೆ. ನಿರಂತರ ಮಳೆಯಿಂದಾಗಿ ಸೋಯಾ, ಉದ್ದು, ತೊಗರಿ ಬೆಳೆ ನಾಶವಾಗಿದ್ದು ಲಕ್ಷಾಂತರ ರೂಪಾಯಿ ಹಣ ನಷ್ಟವಾಗಿದೆ. ಸಾಲ ಸೋಲ ಮಾಡಿ ಬಿತ್ತಿದ ಬೆಳೆ ಕೈಗೆ ಬರುವಷ್ಟರಲ್ಲೇ ಮಣ್ಣುಪಾಲಾಗಿದ್ದು ರೈತರನ್ನು ಸಂಕಷ್ಟಕ್ಕೆ ತಳ್ಳಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ