ಮೇಲುಕೋಟೆಯ ಪ್ರಾಚ್ಯ ಸ್ಮಾರಕವನ್ನು ಬಾರ್ ಆಗಿ ಪರಿವರ್ತನೆ: ನಾಗ ಚೈತ್ಯನ್ಯ ನಟಿಸುತ್ತಿರುವ 3 ನಾಟ್ 2 ಚಿತ್ರ ತಂಡದ ವಿರುದ್ಧ FIR

| Updated By: ಆಯೇಷಾ ಬಾನು

Updated on: Oct 09, 2022 | 11:21 AM

ಪ್ರಾಚ್ಯವಸ್ತು ಇಲಾಖೆಯ ಸ್ಮಾರಕದ ಬಳಿ ಬಾರ್ ಸೆಟ್​ ಹಾಕಿದ್ದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಾರ್ ಸೆಟ್ ನಿರ್ಮಿಸಿ ಶ್ರೀ ವೈಷ್ಣವ ಕ್ಷೇತ್ರ ಅಪಮಾನ ಮಾಡಿರೋದಾಗಿ‌ ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.

ಮೇಲುಕೋಟೆಯ ಪ್ರಾಚ್ಯ ಸ್ಮಾರಕವನ್ನು ಬಾರ್ ಆಗಿ ಪರಿವರ್ತನೆ: ನಾಗ ಚೈತ್ಯನ್ಯ ನಟಿಸುತ್ತಿರುವ 3 ನಾಟ್ 2 ಚಿತ್ರ ತಂಡದ ವಿರುದ್ಧ FIR
ಪ್ರಾಚ್ಯ ಸ್ಮಾರಕವನ್ನು ಬಾರ್ ಆಗಿ ಪರಿವರ್ತನೆ
Follow us on

ಮಂಡ್ಯ: ಚಿತ್ರೀಕರಣಕ್ಕಾಗಿ ಪ್ರಾಚ್ಯ ಸ್ಮಾರಕವನ್ನು ಬಾರ್ ಆಗಿ ಪರಿವರ್ತನೆ ಮಾಡಿದ ಹಿನ್ನೆಲೆ ತೆಲುಗು ಚಿತ್ರತಂಡದ ವಿರುದ್ಧ ಗ್ರಾಮಸ್ಥರು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ನಡೆದಿದೆ.

ಮಂಡ್ಯದ ಪಾಂಡವಪುರ ತಾಲೂಕಿನ ಮೇಲುಕೋಟೆಯ ಪ್ರಸಿದ್ಧ ರಾಯಗೋಪುರ ಸ್ಥಳದ ಬಳಿ ತೆಲುಗಿನ ಖ್ಯಾತ ನಟ ನಾಗ ಚೈತ್ಯನ್ಯ ನಟಿಸುತ್ತಿರುವ 3 ನಾಟ್ 2 ಚಿತ್ರದ ಚಿತ್ರ ತಂಡ ಚಿತ್ರೀಕರಣಕ್ಕ ಬಾರ್ ನಿರ್ಮಾಣ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪ್ರಾಚ್ಯವಸ್ತು ಇಲಾಖೆಯ ಸ್ಮಾರಕದ ಬಳಿ ಬಾರ್ ಸೆಟ್​ ಹಾಕಿದ್ದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಾರ್ ಸೆಟ್ ನಿರ್ಮಿಸಿ ಶ್ರೀ ವೈಷ್ಣವ ಕ್ಷೇತ್ರ ಅಪಮಾನ ಮಾಡಿರೋದಾಗಿ‌ ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ. ಚಿತ್ರೀಕರಣಕ್ಕೆ ಅನುಮತಿ ಪಡೆದು ನಿಯಮ ಉಲ್ಲಂಘಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚಿತ್ರೀಕರಣ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಲ ಸ್ಥಳೀಯರು ಒತ್ತಾಯಿಸಿದ್ದಾರೆ.

Gandhada Gudi Trailer Release: ಅದ್ಧೂರಿಯಾಗಿ ರಿಲೀಸ್ ಆದ ಗಂಧದಗುಡಿ ಟ್ರೈಲರ್ ​​

ಬೆಂಗಳೂರು: ಗಂಧದಗುಡಿ ಸಾಕ್ಷ್ಯಚಿತ್ರದ ಟ್ರೈಲರ್ ಅದ್ಧೂರಿಯಾಗಿ​​ ಬಿಡುಗಡೆಯಾಗಿದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ನಟ ದಿ.ಪುನೀತ್​ ರಾಜ್​ಕುಮಾರ್​​ ಡ್ರೀಮ್​ ಪ್ರಾಜೆಕ್ಟ್ ಗಂಧದಗುಡಿ ಸಾಕ್ಷ್ಯಚಿತ್ರದ ಟ್ರೈಲರ್​ ರಿಲೀಸ್​ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಪುನೀತ್​ ಪತ್ನಿ ಅಶ್ವಿನಿ, ರಾಘಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಗಂಧದಗುಡಿ ಟ್ರೈಲರ್ ನೋಡಿ ಪುನೀತ್​ ಪತ್ನಿ ಅಶ್ವಿನಿ ಭಾವುಕರಾದರು. ಟ್ರೈಲರ್​​ನಲ್ಲಿ ಅಪ್ಪುವನ್ನು​ ನೋಡಿ ರಾಘಣ್ಣ ದಂಪತಿ ಕೂಡ ಕಣ್ಣೀರು ಹಾಕಿದರು. ಹಾಗೂ ಮತ್ತೊಂದು ಕಡೆ ಟ್ರೈಲರ್ ನೋಡಿ ಪುನೀತ್​ ರಾಜ್​ಕುಮಾರ್ ಫ್ಯಾನ್ಸ್​ ಸಂಭ್ರಮಿಸಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:18 am, Sun, 9 October 22