ಮಂಡ್ಯ: ಸಂಪ್​ನಲ್ಲಿ ಪತ್ತೆಯಾದ ಬಾಲಕಿ ಶವದ ಮರಣೋತ್ತರ ಪರೀಕ್ಷೆ ಆರಂಭ; ನಿಗೂಢ ಸಾವಿಗೆ ಹಲವು ಆಯಾಮದ ಶಂಕೆ

| Updated By: ಆಯೇಷಾ ಬಾನು

Updated on: Oct 12, 2022 | 2:41 PM

ಟ್ಯೂಷನ್​​ಗೆ ಹೋಗಿದ್ದ ಹತ್ತು ವರ್ಷದ ಬಾಲಕಿ ಶವ ನಿರ್ಮಾಣ ಹಂತದ ಮನೆಯ ಸಂಪ್​ನಲ್ಲಿ ಪತ್ತೆಯಾಗಿದೆ. ಬಾಲಕಿ ಸಾವಿಗೆ ಹಲವು ಆಯಾಮದ ಶಂಕೆ ವ್ಯಕ್ತವಾಗಿದೆ.

ಮಂಡ್ಯ: ಸಂಪ್​ನಲ್ಲಿ ಪತ್ತೆಯಾದ ಬಾಲಕಿ ಶವದ ಮರಣೋತ್ತರ ಪರೀಕ್ಷೆ ಆರಂಭ; ನಿಗೂಢ ಸಾವಿಗೆ ಹಲವು ಆಯಾಮದ ಶಂಕೆ
ಘಟನಾ ಸ್ಥಳ
Follow us on

ಮಂಡ್ಯ: ನಿನ್ನೆ ಟ್ಯೂಷನ್​​ಗೆ ಹೋಗಿದ್ದ ದಿವ್ಯಾ ಎಂಬ ಹತ್ತು ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದಲ್ಲಿ ನಿರ್ಮಾಣ ಹಂತದ ಮನೆಯ ಸಂಪ್​ನಲ್ಲಿ ಬಾಲಕಿ ಶವಪತ್ತೆಯಾಗಿದೆ. ದಿವ್ಯಾ ಮಧ್ಯಾಹ್ನ ಟ್ಯೂಷನ್​ಗೆ ತೆರಳಿದ್ದಳು. ಎಷ್ಟು ಸಮಯ ಕಳೆದರೂ ಬಾಲಕಿ ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರು ಹುಡುಕಾಡಿದ್ದಾರೆ. ಈ ವೇಳೆ ಟ್ಯೂಷನ್ ಹಿಂಭಾಗದಲ್ಲಿ ನಿರ್ಮಾಣ ಹಂತದ ಮನೆಯ ಸಂಪ್​​ನಲ್ಲಿ ಬಾಲಕಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಮಳವಳ್ಳಿ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ.

ಬಾಲಕಿಯನ್ನ ಅತ್ಯಾಚಾರವೆಸಗಿ ಕೊಲೆ ಮಾಡುದ್ರಾ?

ಈ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದೆ. ಬಾಲಕಿ ಸಾವಿಗೆ ಕಾರಣ ಏನೆಂಬುವುದು ಮರಣೋತ್ತರ ಪರೀಕ್ಷೆ ನಂತರ ಬಯಲಾಗಲಿದೆ. ಆದ್ರೆ ಬಾಲಕಿಯನ್ನ ಅತ್ಯಾಚಾರವೆಸಗಿ ಕೊಲೆಗೈದಿರುವ ಬಗ್ಗೆ ಪೋಷಕರು ಆರೋಪ ಮಾಡಿದ್ದಾರೆ. ಸದ್ಯ ಮಳವಳ್ಳಿ ಟೌನ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ವೇಳೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಪತ್ತೆಯಾದ್ರೆ ಪೋಕ್ಸೊ ಕಾಯ್ದೆ ಹಾಕಲಾಗುವುದು. ಸದ್ಯ ಐಪಿಸಿ 302ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೆಡಿಕಲ್ ಎಕ್ಸಾಮಿನೇಷನ್ ನ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಮಂಡ್ಯ ಎಸ್​ಪಿ ಎನ್ ಯತೀಶ್ ಟಿವಿ9ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕಾರ್ನಿಕ ಗುಳಿಗ ದೈವದ ಮೊರೆಹೊಕ್ಕ ಕೆಲವೇ ಗಂಟೆಗಳ ಬಳಿಕ ಶಾರದಾ ಮಹೋತ್ಸವದ ಬ್ಯಾನರ್ ಹರಿದ ಕಿಡಿಗೇಡಿಗಳ ಬಂಧನ!

ಬಾಲಕಿಯನ್ನ ಕೊಂದು ಸಂಪಿನಲ್ಲಿ ಎಸೆಯಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಮಳವಳ್ಳಿ ಟೌನ್ ಪೊಲೀಸ್ ಠಾಣೆ ಮುಂದೆ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೈಯಲ್ಲಿ ನಾಮಪಲಕವನ್ನ ಹಿಡಿದು ಕೊಳ್ಳೆಗಾಲ ಮದ್ದೂರು ಮಾರ್ಗದ ರಸ್ತೆ ತಡೆದು ಆಕ್ರೋಶ ಹೊರ ಹಾಕಿದ್ದಾರೆ. ಬಾಲಕಿಯ ಸಾವಿಗೆ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:41 pm, Wed, 12 October 22