ಸರ್ಕಾರಿ ಉರ್ದು ಶಾಲೆ ಪ್ರಾರ್ಥನಾ ಮಂದಿರವಾಗಿ ಬದಲಾವಣೆ; ಧಾರ್ಮಿಕ ಮುಖಂಡರ ಅತಿಕ್ರಮಣಕ್ಕೆ ಸಾಥ್ ಕೊಟ್ತಾ ಗ್ರಾಮ ಪಂಚಾಯಿತಿ?

| Updated By: ಆಯೇಷಾ ಬಾನು

Updated on: Sep 23, 2021 | 1:12 PM

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಉರ್ದು ಶಾಲೆಯನ್ನು ಪ್ರಾರ್ಥನಾ ಮಂದಿರವಾಗಿ ಬದಲಾಯಿಸಲು ಗ್ರಾಮ ಪಂಚಾಯಿತಿ ಮುಂದಾಗಿದೆ.

ಸರ್ಕಾರಿ ಉರ್ದು ಶಾಲೆ ಪ್ರಾರ್ಥನಾ ಮಂದಿರವಾಗಿ ಬದಲಾವಣೆ; ಧಾರ್ಮಿಕ ಮುಖಂಡರ ಅತಿಕ್ರಮಣಕ್ಕೆ ಸಾಥ್ ಕೊಟ್ತಾ ಗ್ರಾಮ ಪಂಚಾಯಿತಿ?
ಸರ್ಕಾರಿ ಶಾಲೆಗೆ ಹಸಿರು ಬಣ್ಣ ಬಳಿದು ಬಾಬಯ್ಯನ ದೇಗುಲವಾಗಿ ಮಾರ್ಪಾಡು ಮಾಡಲಾಗಿದೆ
Follow us on

ಮಂಡ್ಯ: ಸರ್ಕಾರಿ ಶಾಲೆಗಳನ್ನು ಉಳಿಸ ಬೇಕು ಎಂದು ಅದೆಷ್ಟೂ ಜನ ಹೋರಾಡುತ್ತಿದ್ದಾರೆ. ಆದ್ರೆ ಮಹಾಮಾರಿ ಕೊರೊನಾಗೆ ಈಗಾಗಲೇ ಹಲವು ಶಾಲೆಗಳು ಮುಚ್ಚಿ ಹೋಗಿವೆ. ಇದರ ನಡುವೆ ಸಕ್ಕರೆ ನಾಡು ಮಂಡ್ಯದಲ್ಲಿ ಸರ್ಕಾರಿ ಉರ್ದು ಶಾಲೆಯನ್ನು(Urdu School) ಪ್ರಾರ್ಥನಾ ಮಂದಿರವಾಗಿ ಬದಲಾವಣೆ ಮಾಡಲಾಗುತ್ತಿದೆ. ಹೀಗಾಗಿ ಈ ಬಗ್ಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಉರ್ದು ಶಾಲೆಯನ್ನು ಪ್ರಾರ್ಥನಾ ಮಂದಿರವಾಗಿ ಬದಲಾಯಿಸಲು ಗ್ರಾಮ ಪಂಚಾಯಿತಿ ಮುಂದಾಗಿದೆ. 45 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸರ್ಕಾರಿ ಉರ್ದು ಶಾಲೆಗೆ 20 ವರ್ಷಗಳ ಹಿಂದೆ ಬಿಸಿಯೂಟದ ಅಡುಗೆ ಮನೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯವನ್ನು ಸರ್ಕಾರ ಮಾಡಿಕೊಟ್ಟಿತ್ತು. ಕನ್ನಡ ಶಾಲೆಯ ಎರಡು ಕೊಠಡಿ, ವಿದ್ಯಾರ್ಥಿ ನಿಲಯ ಹಾಗೂ ಅಂಗನವಾಡಿ ಕೇಂದ್ರವನ್ನೂ ಇದೇ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಆದ್ರೆ ಈಗ ಈ ಶಾಲೆಗೆ ಮಕ್ಕಳ ಕೊರತೆ ಉಂಟಾಗಿದೆ. ಹೀಗಾಗಿ ಕೆಲ ವರ್ಷಗಳಿಂದ ಶಾಲೆ ಮುಚ್ಚಲಾಗಿದೆ.

ಈ ವೇಳೆ ಹೊರಗಿನಿಂದ ಬಂದಿರುವ ಕೆಲವು ಧಾರ್ಮಿಕ ಮುಖಂಡರು ಸರ್ಕಾರಿ ಶಾಲೆ ಅತಿಕ್ರಮಣ ಮಾಡಿಕೊಂಡಿದ್ದಾರಂತೆ. ಅಕ್ರಮಕ್ಕೆ ಗ್ರಾಮ ಪಂಚಾಯಿತಿ ಸಾಥ್ ಕೊಟ್ಟಿರುವ ಆರೋಪ ಕೇಳಿ ಬಂದಿದೆ. ಸರ್ಕಾರಿ ಶಾಲೆಗೆ ಹಸಿರು ಬಣ್ಣ ಬಳಿದು ಬಾಬಯ್ಯನ ದೇಗುಲವಾಗಿ ಮಾರ್ಪಾಡು ಮಾಡಲಾಗಿದೆ. ಇನ್ನು ಸರ್ಕಾರಿ ಶಾಲಾ ಜಾಗವನ್ನು ಬಾಬಯ್ಯನ ಗುಡಿ ಎಂದು 2021ರ ಜೂನ್ 16ರಂದು ಧಾರ್ಮಿಕ ಕೇಂದ್ರದ ಆಸ್ತಿಯನ್ನಾಗಿ ಗ್ರಾಮ ಪಂಚಾಯಿತಿ ಬದಲಾವಣೆ ಮಾಡಿಕೊಟ್ಟಿದೆ. ಗ್ರಾಮ ಪಂಚಾಯಿತಿ ನಡೆಗೆ ಸ್ಥಳೀಯರ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಸರ್ಕಾರಿ ಉರ್ದು ಶಾಲೆ ಅತಿಕ್ರಮಣ ತೆರವು
ಸಂತೇಬಾಚಹಳ್ಳಿ ಸರ್ಕಾರಿ ಉರ್ದು ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳಿಂದ ಅತಿಕ್ರಮಣ ತೆರವು ಮಾಡಲಾಗಿದೆ. ಕೆ.ಆರ್. ಪೇಟೆ ತಹಶೀಲ್ದಾರ್, ಶಿಕ್ಷಣಾಧಿಕಾರಿಗಳು ಶಾಲೆಯಲ್ಲಿದ್ದ ವಸ್ತುಗಳನ್ನು ತೆರವುಗೊಳಿಸಿದ್ದಾರೆ.

ಹೊರರಾಜ್ಯದ ಮುಸ್ಲಿಂ ಧರ್ಮ ಗುರುಗಳು ಶಾಲೆಯಲ್ಲಿ ಅಕ್ರಮ ವಾಸ್ತವ್ಯ ಹೂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಧರ್ಮ ಗುರುಗಳು ಶಾಲೆಯನ್ನ ಮನೆಯ ರೀತಿ ನವೀಕರಿಸಿದ್ದರಂತೆ. ಅಧಿಕಾರಿಗಳು ಬರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಬಾಂಗ್ಲಾದೇಶ ಹಾಗೂ ಬಿಹಾರಿಗಳ ವಾಸವಿತ್ತು ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಬೆಳಗಾವಿ: ತೋಟದಲ್ಲಿ ಕೆಲಸಕ್ಕಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಮಾಲೀಕ!

Published On - 11:27 am, Thu, 23 September 21