ಮಂಡ್ಯ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಸ್ಥಗಿತಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy), ಅಕ್ರಮ ಗಣಿಗಾರಿಕೆ ತಡೆಗೆ ದೊಡ್ಡ ಸಾಮರ್ಥ್ಯದವರಿದ್ದಾರೆ. ಹೀಗಾಗಿ ಈ ಗೊಂದಲದ ಬಗ್ಗೆ ನಾನು ಮೂಗು ತೂರಿಸಲ್ಲ. ಜಿಲ್ಲೆಯಲ್ಲಿ ಸಮರ್ಥರಿದ್ದಾರೆ, ಅವರೇ ಸರಿಪಡಿಸಿಕೊಳುತ್ತಾರೆ ಎಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ವಿರುದ್ಧ ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಇಂದಿನ ಅಧಿವೇಶನದಲ್ಲಿ ಯಾವುದೇ ಚರ್ಚೆಗಳು ಇರಲ್ಲ ಎಂದು ಹೇಳಿಕೆ ನೀಡಿದ ಮಾಜಿ ಸಿಎಂ ಹೆಚ್ಡಿಕೆ, ಇವತ್ತು ಕೇವಲ ಸಂತಾಪ ಸೂಚಕ ಸಭೆ ಮಾತ್ರ ಇದೆ. ನಾಳೆಯಿಂದ ಅಧಿವೇಶನದಲ್ಲಿ ಚರ್ಚೆಗಳು ನಡೆಯುತ್ತವೆ. ಈ ಬಗ್ಗೆ ಇಂದು ಜೆಡಿಎಲ್ಪಿ ಸಭೆ ಕರೆದಿದ್ದೇನೆ. ಸಭೆಯಲ್ಲಿ ಶಾಸಕರ ಜೊತೆ ಅಧಿವೇಶದಲ್ಲಿ ಮಾಡುವ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಯಾವ ಯಾವ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ಕಲಬುರಗಿ ಪಾಲಿಕೆಯಲ್ಲಿ ಯಾರಿಗೆ ಬೆಂಬಲಿಸಬೇಕೆಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಗೌಪ್ಯತೆಯನ್ನು ಬಿಟ್ಟುಕೊಟ್ಟಿಲ್ಲ. ಈ ವಿಚಾರದ ಬಗ್ಗೆ ಹೇಳುವುದಕ್ಕೆ ಇನ್ನೂ ಸಮಯವಿದೆ. ಅದಕ್ಕೆ ಏನು ಅರ್ಜೆಂಟ್ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ
ಕಾಂಗ್ರೆಸ್ನವರು ಯುಪಿಎ ಸರ್ಕಾರ ಇದ್ದಾಗ ಪ್ರತಿಭಟನೆ ಮಾಡಬೇಕಿತ್ತು; ಸದನದಲ್ಲೇ ತಕ್ಕ ಉತ್ತರ ನೀಡುವೆ – ಸಿಎಂ ಬೊಮ್ಮಾಯಿ
’ಕಾಂಗ್ರೆಸ್ ಪಕ್ಷ ಭಯೋತ್ಪಾದನೆಯ ತಾಯಿ’- ವಿವಾದ ಸೃಷ್ಟಿಸಿದ ಸಿಎಂ ಯೋಗಿ ಆದಿತ್ಯನಾಥ್
(HD Kumaraswamy React to Illegal Mining in mandya)
Published On - 11:29 am, Mon, 13 September 21