ಕಾನೂನು ಪಾಲಕರಿಂದಲೇ ಕಾನೂನು ಉಲ್ಲಂಘನೆ! ಅನುಮತಿ ಪಡೆಯದೆ ಸರ್ಕಾರಿ ನಿವಾಸದಲ್ಲಿದ್ದ ಮರಗಳ ಕಡಿದ ಮಂಡ್ಯ ಎಸ್​ಪಿ

ಎಸ್​ಪಿ ಅಶ್ವಿನಿಯ ಈ ವರ್ತನೆ ಇದೇ ಮೊದಲೇನಲ್ಲ. ತಿಂಗಳ ಹಿಂದೆಯೂ 50ಕ್ಕೂ ಹೆಚ್ಚು ಮರಗಳನ್ನು ಕಡಿದು ಸಾಗಣೆ ಮಾಡಿದ್ದಾರಂತೆ. ಪೊಲೀಸ್ ಮೈದಾನದಲ್ಲಿದ್ದ 50ಕ್ಕೂ ಹೆಚ್ಚು ಮರ ಕಡಿದು ಸಾಗಣೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಕಾನೂನು ಪಾಲಕರಿಂದಲೇ ಕಾನೂನು ಉಲ್ಲಂಘನೆ! ಅನುಮತಿ ಪಡೆಯದೆ ಸರ್ಕಾರಿ ನಿವಾಸದಲ್ಲಿದ್ದ ಮರಗಳ ಕಡಿದ ಮಂಡ್ಯ ಎಸ್​ಪಿ
ಅನುಮತಿ ಇಲ್ಲದೆ ಸರ್ಕಾರಿ ಮನೆಯ ಬಳಿಯಿದ್ದ ಮರಗಳನ್ನು ಎಸ್​ಪಿ ಕಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ
Follow us
TV9 Web
| Updated By: sandhya thejappa

Updated on:Sep 14, 2021 | 1:56 PM

ಮಂಡ್ಯ: ಅನುಮತಿ ಪಡೆಯದೆ ಮಂಡ್ಯ ಎಸ್​ಪಿ ಸರ್ಕಾರಿ ನಿವಾಸದಲ್ಲಿದ್ದ ಮರಗಳನ್ನು ಕಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಎಸ್​ಪಿ ಡಾ.ಅಶ್ವಿನಿ ತನ್ನ ಸರ್ಕಾರಿ ನಿವಾಸದ ಬಳಿಯಿದ್ದ ಸುಮಾರು 10ಕ್ಕೂ ಹೆಚ್ಚು ಮರಗಳನ್ನು ಕಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ತರಬೇತಿ ನಿರತ ಕಾನ್ಸ್​ಟೇಬಲ್​ಗಳನ್ನ ಎಸ್​ಪಿ ಜೀತದಾಳುಗಳಾಗಿ ಬಳಸಿಕೊಳ್ಳುತ್ತಿದ್ದಾರಂತೆ. ಮರ ಕಡಿದು ಸಾಗಿಸಲು ಪೊಲೀಸ್ ವಾಹನ, ತರಬೇತಿ ನಿರತ ಪೊಲೀಸರನ್ನು ಬಳಕೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಎಸ್​ಪಿ ಅಶ್ವಿನಿಯ ಈ ವರ್ತನೆ ಇದೇ ಮೊದಲೇನಲ್ಲ. ತಿಂಗಳ ಹಿಂದೆಯೂ 50ಕ್ಕೂ ಹೆಚ್ಚು ಮರಗಳನ್ನು ಕಡಿದು ಸಾಗಣೆ ಮಾಡಿದ್ದಾರಂತೆ. ಪೊಲೀಸ್ ಮೈದಾನದಲ್ಲಿದ್ದ 50ಕ್ಕೂ ಹೆಚ್ಚು ಮರ ಕಡಿದು ಸಾಗಣೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. ವಾಸ್ತು ನೆಪದಲ್ಲಿ ತಾವಿದ್ದ ಸರ್ಕಾರಿ ನಿವಾಸವನ್ನ ಎಸ್​ಪಿ ಬದಲಾಯಿಸಿದ್ದಾರೆ. ವಾಸ್ತುಗಾಗಿ ಬಂಗಲೆಯ ಗಾರ್ಡ್ ಕೊಠಡಿಯನ್ನು ಧ್ವಂಸಗೊಳಿಸಿರುವ ಅವರು, ಆಧುನಿಕವಾಗಿ ಕಚೇರಿ, ಮನೆಯನ್ನು ನವೀಕರಣ ಮಾಡಿಕೊಂಡಿದ್ದಾರೆ.

ಕೊರೊನಾದಲ್ಲಿ ಒಂದು ತುತ್ತಿನ ಊಟಕ್ಕೂ ಜನ ಪರದಾಡುತ್ತಿದ್ದಾರೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ. ಈ ನಡುವೆ ಎಸ್​ಪಿಯವರಿಗೆ ಇದೆಲ್ಲಾ ಬೇಕಿತ್ತಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಎಸ್​ಪಿಗೊಂದು ಕಾನೂನು, ಸಾಮಾನ್ಯ ಜನರಿಗೊಂದು ಕಾನೂನು ಉಂಟಾ? ಅಂತ ಪ್ರಶ್ನಿಸಿದ ಸಾರ್ವಜನಿಕರು, ಕಾನೂನು ಉಲ್ಲಂಘಿಸಿದ ಎಸ್​ಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಗೃಹ ಸಚಿವರಿಗೆ ದೂರು ಎಸ್‌ಪಿ ನಿವಾಸದಲ್ಲಿ ಮರ ಕಡಿಸಿರುವುದಕ್ಕೆ ವರ್ಲ್ಡ್ ಹ್ಯೂಮನ್ ರೈಟ್ಸ್ ಸೇವಾ ಕೇಂದ್ರ, ಗೃಹ ಸಚಿವರು, ಡಿಜಿ, ಐಜಿ, ನ್ಯಾಯಾಲಯಕ್ಕೆ ದೂರು ನೀಡಿದೆ. ವರ್ಲ್ಡ್ ಹ್ಯೂಮನ್ ರೈಟ್ಸ್​ನ ಸಿದ್ದಲಿಂಗೇಗೌಡರು ದೂರು ನೀಡಿ, ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ, ವಿದ್ಯುತ್ ತಂತಿಗಳು ಮರದ ರೆಂಬೆಗಳಿಗೆ ತಾಗುತ್ತಿದ್ದವು. ಹೀಗಾಗಿ ಮರದ ರೆಂಬೆಗಳನ್ನ ಕಡಿಯಲಾಗಿದೆ ಎಂದು ಹೇಳಿದ್ದಾರೆ.

ಮಂಡ್ಯ ಎಸ್​ಪಿ ನಿವಾಸದಲ್ಲಿ 9 ಮರಗಳನ್ನು ಕಡಿಯಲಾಗಿದೆ. ನಾನೇ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಬಂದಿದ್ದೇನೆ. ಸರ್ಕಾರಿ ನಿವಾಸದಲ್ಲಿ ಮರ ಕಡಿಯಲು ಅನುಮತಿ ಪಡಿಯಬೇಕು. ಅನುಮತಿ ಕೇಳಿ ಪತ್ರ ಬರೆದಿರುವುದಾಗಿ ಮಂಡ್ಯ ಎಸ್‌ಪಿ ಹೇಳಿದ್ದಾರೆ. ಆದರೆ ಮರ ಕಡಿಯುವುದಕ್ಕೆ ನಾವು ಅನುಮತಿ ನೀಡಿರಲಿಲ್ಲ. 9 ಮರಗಳ ಕಾಂಡವನ್ನು ಹೆಚ್ಚಾಗಿ ಕಡಿಯಲಾಗಿದೆ. ಅನುಮತಿ ಪಡೆಯದೆ ಮರ ಕಡಿದಿರುವುದು ತಪ್ಪು. ಯಾರೇ ತಪ್ಪು ಮಾಡಿದ್ರೂ ತಪ್ಪೇ. ಒಬ್ಬೊಬ್ಬರಿಗೆ ಒಂದೊಂದು ನಿಯಮ ಇಲ್ಲ ಅಂತ ಮಂಡ್ಯ ಡಿಸಿಎಫ್ ರವಿಶಂಕರ್ ಹೇಳಿದ್ದಾರೆ.

ಇದನ್ನೂ ಓದಿ

ಕನ್ನಡದ ಬಹುಬೇಡಿಕೆಯ ಡೈಲಾಗ್​ ರೈಟರ್​​ ಗುರು ಕಶ್ಯಪ್​ ನಿಧನ; ಕಂಬನಿ ಮಿಡಿಯುತ್ತಿರುವ ಸ್ಯಾಂಡಲ್​ವುಡ್​

Peanut: ಕಡಲೆಕಾಯಿ ತಿನ್ನುವ ಅಭ್ಯಾಸ ಇದೆಯೇ? ಹೃದ್ರೋಗ ನಿವಾರಣೆಗೆ ಇದು ಹೇಗೆ ಸಹಕಾರಿ ತಿಳಿಯಿರಿ

(Mandya SP has cut the trees in the government residence without permission)

Published On - 9:04 am, Tue, 14 September 21

29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ