Peanut: ಕಡಲೆಕಾಯಿ ತಿನ್ನುವ ಅಭ್ಯಾಸ ಇದೆಯೇ? ಹೃದ್ರೋಗ ನಿವಾರಣೆಗೆ ಇದು ಹೇಗೆ ಸಹಕಾರಿ ತಿಳಿಯಿರಿ
ಕಡಲೆಕಾಯಿಯಲ್ಲಿ ನೇರವಾಗಿ ಹೃದಯಕ್ಕೆ ಆರೋಗ್ಯಯುತವಾದ ಅನೇಕ ಅಂಶಗಳಿವೆ. ಉದಾಹರಣೆಗೆ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು, ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳು, ಖನಿಜಗಳು, ಜೀವಸತ್ವಗಳು ಮತ್ತು ಫೈಬರ್.
ಕಡಲೆಕಾಯಿ ತಿನ್ನುವ ಮೂಲಕ ಹೆಚ್ಚಿನ ಜನರು ಹೃದಯ ಸಂಬಂಧಿ ಕಾಯಿಲೆಯ ಅಪಾಯವನ್ನು ತಪ್ಪಿಸಿಕೊಳ್ಳಬಹುದು. ಜಪಾನ್‌ನ ಒಸಾಕಾ ವಿಶ್ವವಿದ್ಯಾಲಯದ ಸಂಶೋಧಕರು ತಮ್ಮ ಇತ್ತೀಚಿನ ಸಂಶೋಧನೆಯಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ. ಜಪಾನಿನಲ್ಲಿ ವಾಸಿಸುತ್ತಿರುವ ಏಷ್ಯಾದ ಮಹಿಳೆಯರು ಮತ್ತು ಪುರುಷರು ದಿನಕ್ಕೆ ಸರಾಸರಿ 4 ರಿಂದ 5 ಕಡಲೆಕಾಯಿಯನ್ನು ತಿನ್ನುತ್ತಾರೆ. ಇದು ರಕ್ತಕೊರತೆ, ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಜರ್ನಲ್ ಆಫ್ ಸ್ಟ್ರೋಕ್ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಕಡಲೆಕಾಯಿ ತಿನ್ನುವ ಜನರಲ್ಲಿ ಇಂತಹ ರೋಗಗಳ ಲಕ್ಷಣಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಸಂಶೋಧಕರಾದ ಸತ್ಯೋ ಕೆಹರಾ ಅವರ ಪ್ರಕಾರ, ಏಷ್ಯಾ ಮೂಲದ ಜನರಲ್ಲಿ ಯಾರು ಹೆಚ್ಚು ಕಡಲೆಕಾಯಿ ತಿನ್ನುತ್ತಾರೋ ಅಂತವರಲ್ಲಿ ಪಾರ್ಶ್ವವಾಯು ಅಪಾಯ ಕಡಿಮೆ ಇದೆ. ಹೀಗಾಗಿ ಸಂಶೋಧನೆಯು ಕಡಲೆಕಾಯಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಪ್ರಯೋಜನಕಾರಿ ಎಂದು ತೋರಿಸಿದೆ ಎಂದು ಅವರು ವಿವರಿಸಿದರು.
ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಶೇಂಗಾ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಹಲವಾರು ಬಾರಿ ಸಂಶೋಧನೆ ಮಾಡಲಾಗಿದೆ. ಸಂಶೋಧನೆಯನ್ನು ಎರಡು ಹಂತಗಳಲ್ಲಿ ನಡೆಸಲಾಯಿತು. ಮೊದಲ ಸಂಶೋಧನೆಯನ್ನು 1995 ರಲ್ಲಿ ಮಾಡಲಾಯಿತು. ಎರಡನೇ ಸಂಶೋಧನೆಯು 1998 – 1999 ರ ನಡುವೆ ನಡೆಯಿತು. ಸಂಶೋಧನೆಯು 74,000 ಏಷ್ಯನ್ ಮಹಿಳೆಯರು ಮತ್ತು ಪುರುಷರನ್ನು ಒಳಗೊಂಡಿತ್ತು. 45 ರಿಂದ 74 ವರ್ಷದವರನ್ನು ಈ ಸಂಶೋಧನೆಗೆ ಒಳಪಡಿಸಲಾಗಿದೆ.
ಸಂಶೋಧನೆಯಲ್ಲಿ ತೊಡಗಿರುವ ಜನರನ್ನು ದಿನನಿತ್ಯ ಅಥವಾ ವಾರದಲ್ಲಿ ಎಷ್ಟು ಕಡಲೆಕಾಯಿ ತಿನ್ನುತ್ತಾರೆ ಎಂದು ಪರೀಕ್ಷಿಸಲಾಗಿತ್ತು ಮತ್ತು ಮುಂದಿನ 15 ದಿನಗಳ ಕಾಲ ಇವರನ್ನು ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಸಂಶೋಧಕರು ತಿಳಿಸಿದ್ದಾರೆ.
ಕಡಲೆಕಾಯಿಯನ್ನು ಉಪ್ಪು ಇಲ್ಲದೆ ತಿನ್ನಿರಿ ಸಂಶೋಧಕರ ಪ್ರಕಾರ, ಏಷ್ಯಾದ ದೇಶಗಳಲ್ಲಿ ಕಡಲೆಕಾಯಿ ತಿನ್ನುವ ಅಭ್ಯಾಸ ಬಹಳ ಕಡಿಮೆ. ಆದಾಗ್ಯೂ, ದೈನಂದಿನ ಜೀವನದಲ್ಲಿ ಸೇರಿಸುವುದು ಅಪಾಯವನ್ನು ಕಡಿಮೆ ಮಾಡುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಶನ್ ಪ್ರಕಾರ, ವಾರಕ್ಕೆ ಐದು ಬಾರಿ, 2 ಚಮಚ ಕಡಲೆಕಾಯಿಯನ್ನು ಉಪ್ಪು ಇಲ್ಲದೆ ತಿನ್ನುವುದು ಸೂಕ್ತ.
ಏಕೆ ಕಡಲೆಕಾಯಿ ತಿನ್ನಬೇಕು? ಕಡಲೆಕಾಯಿಯಲ್ಲಿ ನೇರವಾಗಿ ಹೃದಯಕ್ಕೆ ಆರೋಗ್ಯಯುತವಾದ ಅನೇಕ ಅಂಶಗಳಿವೆ. ಉದಾಹರಣೆಗೆ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು, ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳು, ಖನಿಜಗಳು, ಜೀವಸತ್ವಗಳು ಮತ್ತು ಫೈಬರ್. ಇದು ಅಧಿಕ ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಇದರ ಜೊತೆಯಲ್ಲಿ, ಎದೆಯುರಿಯನ್ನು ಕಡಿಮೆ ಮಾಡಲು ಸಹಕಾರಿಯಾದ ಅಂಶಗಳನ್ನು ಹೊಂದಿದೆ. ಈ ರೀತಿಯಾಗಿ ಅನೇಕ ಹೃದಯ ರೋಗಗಳ ಅಪಾಯವನ್ನು ಕಡಲೆಕಾಯಿ ಕಡಿಮೆ ಮಾಡುತ್ತದೆ.
ಇದನ್ನೂ ಓದಿ: Peanut Butter: ಕಡಲೆಕಾಯಿಯಲ್ಲೂ ಬೆಣ್ಣೆ ತಯಾರಿಸಬಹುದು; ಇದು ಅನೇಕ ಆರೋಗ್ಯಕರ ಗುಣಗಳಿಂದ ಕೂಡಿದೆ
Health Tips: ರಾತ್ರಿ ಎಡಭಾಗಕ್ಕೆ ತಿರುಗಿ ಮಲಗುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಗಮನಿಸಿ