ತಲೆಹೊಟ್ಟು ಕಿರಿಕಿರಿಯೇ? ಇಲ್ಲಿದೆ ಸಮಸ್ಯೆ ಪರಿಹಾರಕ್ಕೆ ಸರಳ ವಿಧಾನ

TV9 Digital Desk

| Edited By: shruti hegde

Updated on: Sep 14, 2021 | 7:50 AM

ತಲೆಹೊಟ್ಟಿನ ಸಮಸ್ಯೆಯಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಜತೆಗೆ ಬಿಳಿ ಕೂದಲು ಹುಟ್ಟುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಈ ಕೆಲವು ಮನೆ ಮದ್ದುಗಳನ್ನು ಬಳಸಿ ತಲೆ ಹೊಟ್ಟು ನಿವಾರಣೆ ಮಾಡಿಕೊಳ್ಳಿ.

ತಲೆಹೊಟ್ಟು ಕಿರಿಕಿರಿಯೇ? ಇಲ್ಲಿದೆ ಸಮಸ್ಯೆ ಪರಿಹಾರಕ್ಕೆ ಸರಳ ವಿಧಾನ
ಸಾಂದರ್ಭಿಕ ಚಿತ್ರ

ತಲೆ ಹೊಟ್ಟು ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಈ ಕೆಲವು ವಿಧಾನಗಳನ್ನು ಅನುಸರಿಸಿ. ಸರಳ ವಿಧಾನದ ಮೂಲಕ ತಲೆ ಹೊಟ್ಟು ಸಮಸ್ಯೆಯಿಂದ ಪರಿಹಾರ ಪಡೆಯಬಹುದಾಗಿದೆ. ಮನೆಮದ್ದುಗಳನ್ನು ಬಳಸಿ ಬಹಳ ಕಡಿಮೆ ಸಮಯದಲ್ಲಿ ತಲೆ ಹೊಟ್ಟಿನ ಸಮಸ್ಯೆಯನ್ನು ವಾಸಿ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ತಲೆಹೊಟ್ಟಿನ ಸಮಸ್ಯೆಯಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಜತೆಗೆ ಬಿಳಿ ಕೂದಲು ಹುಟ್ಟುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಈ ಕೆಲವು ಮನೆ ಮದ್ದುಗಳನ್ನು ಬಳಸಿ ತಲೆ ಹೊಟ್ಟು ನಿವಾರಣೆ ಮಾಡಿಕೊಳ್ಳಿ.

ತಲೆ ಹೊಟ್ಟು ನಿವಾರಣೆಗೆ ಮನೆಮದ್ದುಗಳು ತೆಂಗಿನ ಎಣ್ಣೆಯನ್ನು ಬಳಸಿ ತೆಂಗಿನ ಎಣ್ಣೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಸಾಮಾನ್ಯವಾಗಿ ತಲೆಹೊಟ್ಟು ನಿವಾರಣೆಗೆ ಬಳಸಲಾಗುತ್ತದೆ. ಚರ್ಮದ ತೇವಾಂಶವನ್ನು ಸುಧಾರಿಸುವುದರ ಜತೆಗೆ ತಲೆ ಕೂದಲು ಬೆಳವಣಿಗೆಗೆ ಸಹಾಯಕವಾಗಿದೆ. ಆದ್ದರಿಂದ ತೆಂಗಿನ ಎಣ್ಣೆಯನ್ನು ತಲೆಗೆ ಸವರಿಕೊಳ್ಳುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಇದರಿಂದ ಬಹುಬೇಗ ಹೊಟ್ಟು ಸಮಸ್ಯೆಯಿಂದ ಪರಿಹಾರ ಪಡೆಯಬಹುದಾಗಿದೆ.

ಅಲೋವೆರಾ ಅಲೋವೆರಾ ಕೂಡಾ ಅಪಾರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಲೊವೆರಾ ತಣ್ಣನೇಯ ಅನುಭವವನ್ನು ನೀಡುವುದರ ಜತೆಗೆ ಚರ್ಮವನ್ನು ಮೃದುವಾಗಿಸುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ತಲೆಗೆ ಅಲೋವೆರಾವನ್ನು ಹಚ್ಚಿ 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಲೆ ಸ್ನಾನ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಬಹುಬೇಗ ತಲೆಯ ಹೊಟ್ಟೆ ನಿವಾರಣೆ ಮಾಡಿಕೊಳ್ಳಬಹುದಾಗಿದೆ.

ಬೆಳ್ಳುಳ್ಳಿ ಬೆಳ್ಳುಳ್ಳಿಯ ವಾಸನೆ ಕೆಲವರಿಗೆ ಆಗುವುದಿಲ್ಲ. ತಲೆಗೆ ಹಚ್ಚಿ ಕೆಲ ದಿನಗಳವರೆಗೂ ಸಹ ಬೆಳ್ಳುಳ್ಳಿಯ ವಾಸನೆ ಬರುತ್ತಿರುತ್ತದೆ. ಇದನ್ನು ತಲೆಹೊಟ್ಟು ನಿವಾರಕ ಚಿಕಿತ್ಸೆಯಾಗಿ ಬಳಸಬಹುದಾಗಿದೆ. ಒಂದು ಲವಂಗ ಮತ್ತು ಎರಡು ಬೆಳ್ಳುಳ್ಳಿಯನ್ನು ಪುಡಿ ಮಾಡಿ ನೀರಿನೊಂದಿಗೆ ಬೆರೆಸಿ ನಂತರ ತಲೆಗೆ ಹಚ್ಚಿಕೊಳ್ಳಿ. ಇದರಿಂದ ತಲೆ ಹೊಟ್ಟು ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ:

Health Tips: ರಾತ್ರಿ ಎಡಭಾಗಕ್ಕೆ ತಿರುಗಿ ಮಲಗುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಗಮನಿಸಿ

Health Tips: ಗೋಡಂಬಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

(Five easy home remedies for treat dandruff check in Kannada)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada