AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಗೋಡಂಬಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಗೋಡಂಬಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಅಧಿಕ ಪ್ರೋಟೀನ್, ಫೈಬರ್ ಮತ್ತು ಕೊಬ್ಬುಗಳಿರುವುದರಿಂದ ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

Health Tips: ಗೋಡಂಬಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Sep 12, 2021 | 2:35 PM

ಗೋಡಂಬಿಯಲ್ಲಿ ತಾಮ್ರ, ಸತು, ಮೆಗ್ನೀಶಿಯಂ, ಕಬ್ಬಿಣ ಮತ್ತು ರಂಜಕದಂತಹ ಖನಿಜಾಂಶಗಳಿಂದ ಸಮೃದ್ಧವಾಗಿರುತ್ತದೆ. ಇದರ ಜೊತೆಯಲ್ಲಿ ಇದು ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿದೆ. ಜತೆಗೆ ಗೋಡಂಬಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಅಧಿಕ ಪ್ರೋಟೀನ್, ಫೈಬರ್ ಮತ್ತು ಕೊಬ್ಬುಗಳಿರುವುದರಿಂದ ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

ತೂಕ ಇಳಿಕೆಗೆ ಸಹಾಯಕ ಕಡಲೆಕಾಯಿ, ಬಾದಾಮಿಗೆ ಹೋಲಿಸಿದರೆ ಗೋಡಂಬಿ ಬೀಜಗಳಲ್ಲಿ ಕೊಬ್ಬು ಮತ್ತು ಕ್ಯಾಲೊರಿ ಅಂಶ ಕಡಿಮೆ. ಹಾಗಾಗಿ ಇದು ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯಕವಾಗಿದೆ. ದೇಹದಕ್ಕೆ ಬೇಕಾದ ವಿಟಮಿನ್, ಕ್ಯಾಲೊರಿಯನ್ನು ಒದಗಿಸುತ್ತದೆ. ಉತ್ತಮ ಫೈಬರ್​ಯುಕ್ತವಾಗಿರುವದರಿಂದ ಆರೋಗ್ಯಕ್ಕೆ ಉತ್ತಮ.

ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ ಎಲ್​ಡಿಎಲ್​ ಮತ್ತು ಹೆಚ್​ಡಿಎಲ್​ ಎಂಬ ಎರಡು ಕೊಲೆಸ್ಟ್ರಾಲ್​ಗಳನ್ನು ಇದು ಹೊಂದಿದೆ. ಎಲ್​ಡಿಎಲ್​ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗೋಡಂಬಿಯನ್ನು ಆಹಾರದಲ್ಲಿ ಸೇರಿಸುವುದು ಹೆಚ್​ಡಿಎಲ್​ ಕೊಲೆಸ್ಟ್ರಾಲ್ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಹೃದಯಕ್ಕೆ ಒಳ್ಳೆಯದು ವಾರಕ್ಕೆ ನಾಲ್ಕು ಬಾರಿ ಗೋಡಂಬಿಯನ್ನು ಸೇವಿಸುವವರಿಗೆ ಹೃದಯದ ಖಾಯಿಲೆಯ ಅಪಾಯವು ಶೇ.37ರಷ್ಟು ಕಡಿಮೆ. ಗೋಡಂಬಿ ಹೃದಯ ನಾಳದ ಖಾಯಿಲೆಗಳ ಅಪಾಯವನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ.

ಜೀವಕೋಶದ ಹಾನಿಯನ್ನು ತಡೆಗಟ್ಟುತ್ತದೆ ಗೋಡಂಬಿ ಬೀಜಗಳು ಉತ್ಕರ್ಷಣ ನಿರೋಧಕ ಅಂಶಕ್ಕೆ ಹೆಸರುವಾಸಿಯಾಗಿದೆ. ಅವು ಹಾನಿ ಉಂಟುಮಾಡುವ ಕೋಶಗಳನ್ನು ತಡೆಯಲು ಸಹಾಯ ಮಾಡುತ್ತವಡ. ದೇಹವನ್ನು ರೋಗಗಳಿಂದ ರಕ್ಷಿಸುತ್ತವೆ. ಜತೆಗೆ ಉರಿಯೂತವನ್ನು ಕಡಿಮೆ ಮಾಡುತ್ತವೆ. ಹುರಿದ ಗೋಡಂಬಿ ಹಸಿ ಗೋಡಂಬಿಗಿಂತ ಹೆಚ್ಚಿನ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೊಂದಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಗೋಡಂಬಿ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಗೋಡಂಬಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಹೀಗಾಗಿ ಇದು ನಿಧಾನವಾಗಿ ಮತ್ತು ಸ್ಥಿರವಾಗಿ ಗ್ಲುಕೋಸ್ಅನ್ನು ಬಿಡುಗಡೆ ಮಾಡುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಳವನ್ನು ತಡೆಯಲು ಸಹಾಯಕ.

ಇದನ್ನೂ ಓದಿ:

Health Tips: ಹೃದಯಾಘಾತದಿಂದ ಪಾರಾಗಲು 10 ಮಾರ್ಗಗಳು; ಆಯುರ್ವೇದ ತಜ್ಞರ ಸಲಹೆ ಇಲ್ಲಿದೆ

Health Tips: ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ಸರಳ ವಿಧಾನವನ್ನು ಅನುಸರಿಸಿ

(Health Benefits of cashew nuts check in Kannada)

ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ