ಮಂಡ್ಯದಲ್ಲಿ ಎತ್ತಿನ ಗಾಡಿ ಸ್ಪರ್ಧೆಗೆ ಹೈಕೋರ್ಟ್ ಒಪ್ಪಿಗೆ, ಷರತ್ತುಬದ್ಧವಾಗಿ ಸ್ಪರ್ಧೆ ನಡೆಸಲು ಅನುಮತಿ

ಮೈಸೂರಿನ ಪ್ರಾಣಿ ಕಲ್ಯಾಣ ಸಂಘ ಪಿಐಎಲ್ ಸಲ್ಲಿಸಿತ್ತು. ಎತ್ತಿನಗಾಡಿ ಸ್ಪರ್ಧೆಯಿಂದ‌ ಎತ್ತುಗಳಿಗೆ ಹಿಂಸೆ ಎಂದು ವಾದ ಮಂಡಿಸಿತ್ತು. ಸರ್ಕಾರ ಎತ್ತಿನ ಗಾಡಿ ಸ್ಪರ್ಧೆಗೆ ಅನುಮತಿ ನೀಡಿತ್ತು.

ಮಂಡ್ಯದಲ್ಲಿ ಎತ್ತಿನ ಗಾಡಿ ಸ್ಪರ್ಧೆಗೆ ಹೈಕೋರ್ಟ್ ಒಪ್ಪಿಗೆ, ಷರತ್ತುಬದ್ಧವಾಗಿ ಸ್ಪರ್ಧೆ ನಡೆಸಲು ಅನುಮತಿ
ಕರ್ನಾಟಕ ಹೈಕೋರ್ಟ್​
Edited By:

Updated on: Sep 01, 2021 | 2:12 PM

ಬೆಂಗಳೂರು: ಮಂಡ್ಯದಲ್ಲಿ ಎತ್ತಿನ ಗಾಡಿ ಸ್ಪರ್ಧೆಗೆ ಹೈಕೋರ್ಟ್ ಒಪ್ಪಿಗೆ ನೀಡಿದೆ. ಷರತ್ತುಬದ್ಧವಾಗಿ ಸ್ಪರ್ಧೆ ನಡೆಸಲು ಅನುಮತಿ‌ ನೀಡಿದ್ದು ಸುಪ್ರೀಂಕೋರ್ಟ್ ವಿಧಿಸಿರುವ ಷರತ್ತು ಪಾಲಿಸಲು ಸೂಚಿಸಿದೆ.

ಮಂಡ್ಯದಲ್ಲಿ ಎತ್ತಿನ ಬಂಡಿ ಸ್ಪರ್ಧೆಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಮಂಡ್ಯದಲ್ಲಿ ಎತ್ತಿನ ಬಂಡಿ ಸ್ಪರ್ಧೆಗೆ ಮಂಡ್ಯದ ಜಿಲ್ಲಾಡಳಿತ ಅನುಮತಿ ನೀಡಿತ್ತು. ನಂತರ ಕೊವಿಡ್ ಕಾರಣದಿಂದ ಅನುಮತಿ ಹಿಂಪಡೆಯಲಾಗಿತ್ತು. ಎತ್ತಿನ ಬಂಡಿ ಸ್ಪರ್ಧೆ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಮೈಸೂರಿನ ಪ್ರಾಣಿ ಕಲ್ಯಾಣ ಸಂಘ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿತ್ತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ರಾಜ್ಯ ಸರ್ಕಾರ ಎತ್ತಿನ ಬಂಡಿ ಸ್ಪರ್ಧೆಗೆ ತನ್ನದೇ ಇತಿಹಾಸ ಹಾಗೂ ಪರಂಪರೆ ಇದೆ. ಸ್ಪರ್ಧೆ ವೇಳೆ ಯಾವುದೇ ಪ್ರಾಣಿ ಹಿಂಸೆ ಆಗುವುದಿಲ್ಲ. ಹೀಗಾಗಿಯೇ ಪ್ರಾಣಿ ಹಿಂಸೆ ತಡೆ ಕಾಯ್ದೆಗೆ ರಾಜ್ಯ ಸರ್ಕಾರ 2018 ರಲ್ಲಿ ತಿದ್ದುಪಡಿ ತಂದಿದೆ.

ಕಂಬಳ, ಎತ್ತಿನ ಓಟ, ಎತ್ತಿನ ಬಂಡಿ ಸ್ಪರ್ಧೆಗೆ ಅನುಮತಿ ನೀಡಿದೆ ಎಂದು ಆಕ್ಷೇಪಣೆಯಲ್ಲಿ ತಿಳಿಸಿತ್ತು. ಇದಲ್ಲದೇ ಸುಪ್ರೀಂ ಕೋರ್ಟ್ ಕೂಡಾ ಎತ್ತಿನ ಬಂಡಿ ಸ್ಪರ್ಧೆಗೆ ಷರತ್ತು ವಿಧಿಸಿದ್ದು, ಪ್ರಾಣಿಗಳ ಸಂರಕ್ಷಣೆಗೆ ಆಯೋಜಕರು ಎಲ್ಲಾ ಕ್ರಮ ಕೈಗೊಳ್ಳಬೇಕು, ಪ್ರಾಣಿಗಳಿಗ ನೋವು ಉಂಟುಮಾಡಬಾರದು, ಪ್ರಾಣಿಗಳನ್ನು ಹಿಂಸಾತ್ಮಕ ಹೋರಾಟದಲ್ಲಿ ತೊಡಗಿಸಬಾರದು, ಮಾನವೀಯವಾಗಿ ನಡೆಸಿಕೊಳ್ಳಬೇಕೆಂದು ಷರತ್ತು ವಿಧಿಸಿದೆ. ಈ ಷರತ್ತಿಗೆ ಬದ್ದವಾಗಿ ಎತ್ತಿನ ಬಂಡಿ ಸ್ಪರ್ಧೆ‌ ನಡೆಸಬಹುದೆಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಸಂಬಂಧ ಮೈಸೂರಿನ ಪ್ರಾಣಿ ಕಲ್ಯಾಣ ಸಂಘ ಸಲ್ಲಿಸಿದ್ದ ಪಿಐಎಲ್ ಇತ್ಯರ್ಥ ಪಡಿಸಿದೆ.

ಇದನ್ನೂ ಓದಿ: ಎತ್ತಿನ ಗಾಡಿಗೆ ಬೈಕ್ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು

Published On - 1:25 pm, Wed, 1 September 21