ಮಂಡ್ಯ: ಮದುವೆ ಆಗುವ ನೆಪದಲ್ಲಿ ವಿದ್ಯಾರ್ಥಿನಿಯ ಬಾಳಲ್ಲಿ ಹಾಸ್ಟೆಲ್ ವಾರ್ಡನ್ ಚೆಲ್ಲಾಟವಾಡಿರುವಂತಹ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನಡೆದಿದೆ. ಹಾಸ್ಟೆಲ್ ವಾರ್ಡನ್ ಬಣ್ಣದ ಮಾತಿಗೆ ಸೋತು ವಿದ್ಯಾರ್ಥಿನಿ ಜೀವನ ಹಾಳು ಮಾಡಿಕೊಂಡಿದ್ದಾಳೆ. ಮದುವೆ ಆಗೋ ಆಸೆ ಹುಟ್ಟಿಸಿ ವಾರ್ಡನ್ ಸತೀಶ್ ಕಾಮ ತೃಷೆ ತೀರಿಸಿಕೊಂಡಿದ್ದಾನೆ. ಓಬಿಸಿ ಹಾಸ್ಟಲ್ ನಲ್ಲಿ ವಾರ್ಡನ್ ಆಗಿರುವ ಸತೀಶ್ ಸಂತ್ರಸ್ಥ ವಿದ್ಯಾರ್ಥಿಯನ್ನ ಪುಸಲಾಯಿಸಿ ತನ್ನ ಕೆಲಸ ಮುಗಿಸಿದ್ದಾನೆ. ನಿಶ್ಚಿತಾರ್ಥ ಮಾಡಿ ಕೊಂಡಿದ್ದ ಸತೀಶ್ ಪದೇ ಪದೇ ದೈಹಿಕ ಸಂಪರ್ಕ ಬೆಳೆಸಿದ್ದ. ಸತೀಶ್ ಮನೆಯಲ್ಲಿ ನಿಶ್ಚಿತಾರ್ಥ ಕುರಿತು ತಾಯಿ ಚಕಾರೆ ತೆಗೆದಿದ್ದಾರೆ. ಈ ವೇಳೆ ಗರ್ಭಿಣಿಯಾಗಿದ್ದ ವಿದ್ಯಾರ್ಥಿನಿಯನ್ನ ವಾರ್ಡನ್ ಮೂರು ಬಾರಿ ಅಬಾಷನ್ ಮಾಡಿಸಿದ್ದ.
ಇದನ್ನೂ ಓದಿ: ‘ವೀಲ್ ಚೇರ್ ರೋಮಿಯೋ’ ಚಿತ್ರ ನೋಡಿದ ಜಮೀರ್ ಅಹ್ಮದ್; ಹೊಸ ಹೀರೋಗೆ ಸನ್ಮಾನ
ಮದುವೆಯಾಗುವಂತೆ ಸಂತ್ರಸ್ಥೆ ಒತ್ತಾಯಿಸುತ್ತಿದ್ದಂತೆ ಸತೀಶ್ ಹೊಸ ವರ್ಸೆ ತೆಗೆದಿದ್ದು, ಸರ್ಕಾರಿ ನೌಕರೆಯನ್ನ ಮದುವೆಯಾಗುವುದಾಗಿ ಉಡಾಫೆ ಉತ್ತರ ನೀಡಿದ್ದಾನೆ. ನೊಂದ ಸಂತ್ರಸ್ಥೆಯಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು,
ಮದ್ದೂರು ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಾದರು ವಾರ್ಡನ್ ಸತೀಶ್ ಕ್ಯಾರೆ ಎನ್ನುತ್ತಿಲ್ಲ. ನನ್ನನ್ನ ಏನು ಮಾಡಲು ಸಾದ್ಯವಿಲ್ಲ, ನನಿಗೆ ರಾಜಕಾರಣಿಗಳು ಗೊತ್ತು. ನಿನ್ನನ್ನ ಜೀವ ಸಮೇತ ಬಿಡುವುದಿಲ್ಲವೆಂದು ಅವಾಜ್ ಹಾಕಿದ್ದಾನೆ. ಪೊಲೀಸ್ ಇಲಾಖೆ ನನ್ನನ್ನ ಟಚ್ ಕೂಡ ಮಾಡಲು ಸಾದ್ಯವಿಲ್ಲ. ನನ್ನ ತಂಟೆಗೆ ಬಂದರೆ ಜೀವ ಸಮೇತ ಉಳಿಸುವುದಿಲ್ಲವೆಂದು ಸಂತ್ರಸ್ಥೆಗೆ ಬೆದರಿಕೆ ಹಾಕಿದ್ದಾನೆ. ಪ್ರಕರಣ ದಾಖಲಾದರು ಪೊಲೀಸರು ಕ್ರಮ ಕೈಗೊಳ್ಳದಿರುವುದಕ್ಕೆ ಪೊಲೀಸರ ವಿರುದ್ದ ಸಂತ್ರಸ್ಥೆ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹಣ ಪಡೆದು ಆರೋಪಿಯನ್ನ ಬಿಟ್ಟು ಕಳಿಸಿರುವುದಾಗಿ ಸಂತ್ರಸ್ಥೆ ಕುಟುಂಬಸ್ಥರು ಆರೋಪಿಸಿದ್ದಾರೆ.
ವಿಕಲಚೇತನ ಯುವತಿ ಮೇಲೆ ದುಷ್ಕರ್ಮಿಗಳಿಂದ ಅತ್ಯಾಚಾರ
ಹಾವೇರಿ: ಹದಿನೆಂಟು ವರ್ಷದ ವಿಕಲಚೇತನ ಯುವತಿ ಮೇಲೆ ಅತ್ಯಾಚಾರ ನಡೆದಿರುವಂತಹ ದಾರುಣ ಘಟನೆ ಜಿಲ್ಲೆ ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಕಲಚೇತನ ಯುವತಿಯ ಬಾಯಿಗೆ ಬಟ್ಟೆ ತುರುಕಿ ದುಷ್ಕರ್ಮಿಗಳು ಅತ್ಯಾಚಾರ ಮಾಡಿದ್ದಾರೆ. ಪರಶುರಾಮ ಮಡಿವಾಳರ ಮತ್ತು ಯಶವಂತ ಎಂಬುವರಿಂದ ಕೃತ್ಯವೆಸಗಲಾಗಿದೆ. ಪ್ರಮುಖ ಆರೋಪಿ ಪರಶುರಾಮ ಮಡಿವಾಳರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಾರಿ ಆಗಿರುವ ಆರೋಪಿ ಯಶವಂತಗಾಗಿ ಪೊಲೀಸರಿಂದ ಶೋಧಕಾರ್ಯ ನಡೆಯುತ್ತಿದೆ. ವಿಕಲಚೇತನ ಯುವತಿ ಮೇಲೆ ಅತ್ಯಾಚಾರ ಮಾಡಲು ಪರಶುರಾಮಗೆ ಆರೋಪಿ ಯಶವಂತ ಸಹಕಾರ ನೀಡಿದ್ದಾನೆ. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇಂಟರ್ನ್ಯಾಷನಲ್ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾಡಿ ನೂರಾರು ಕೋಟಿ ವಂಚನೆ
ಬೆಂಗಳೂರು: ಇಂಟರ್ನ್ಯಾಷನಲ್ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾಡಿ ನೂರಾರು ಕೋಟಿ ಸರ್ಕಾರಕ್ಕೆ ವಂಚಿಸಿದ್ದ ಗ್ಯಾಂಗ್ನ್ನ ಅರೆಸ್ಟ್ ಮಾಡಲಾಗಿದೆ. ರವಿಚಂದ್ರ, ಸುಬೇರ್, ಮನು, ಇಸ್ಮಾಯಿಲ್ ಅಬ್ದುಲ್ಲಾ, ಸಾಹಿರ್, ಜೋಹರ್ ಶರಿಫ್ ಬಂಧಿತ ಆರೋಪಿಗಳು. ವಿದೇಶಿ ಕರೆಗಳಿಗೆ ಒಂದು ನಿಮಿಷಕ್ಕೆ ಹತ್ತು ರೂ. ಇದ್ದರೆ, ಈ ಮಾರ್ಗವಾಗಿ ಕರೆ ಮಾಡಿದರೆ ಕೇವಲ ಒಂದು ರೂ.ನಲ್ಲಿ ಕರೆ ಮಾಡಬಹುದು. ಒಂದು ತಿಂಗಳಲ್ಲಿ ಆರೋಪಿಗಳು ಹದಿನೇಳು ಲಕ್ಷ ಹಣ ಗಳಿಸಿದ್ದಾರೆ. ಆರೋಪಿಗಳು ಗಳಿಕೆಗಿಂತ ಹತ್ತು ಪಟ್ಟು ಹಣ ಸರದಕಾರಕ್ಕೆ ವಂಚನೆ ಆಗುತ್ತಿತ್ತು. ಕಾಲ್ ಸೆಂಟರ್ ಮಾದರಿಯಲ್ಲಿ ತೆರೆದುಕೊಂಡಿದ್ದ ಆರೋಪಿಗಳು, ಸಿಮ್ ಬಾಕ್ಸ್ ಮತ್ತು ಸಿಪ್ ಟ್ರಂಕ್ಸ್ ಬಳಸುತಿದ್ದರು.
ಚೈನಾದಿಂದ ಸಿಮ್ ಬಾಕ್ಸ್ ಹಾಗು ಟ್ರಂಕ್ಸ್ಗಳನ್ನು ಖರೀದಿ ಮಾಡಿದ್ದರು. ಏಳು ಲ್ಯಾಪ್ ಟಾಪ್, 204 ಸಿಮ್ ಕಾರ್ಡ್, ಹದಿನಾಲ್ಕು ಸಿಮ್ ಬಾಕ್ಸ್ , ಇಂಟರ್ ನೆಟ್ ವೈಫೈ ರೂಟರ್ಸ್, ಮೊಬೈಲ್ ಫೋನ್ಗಳು ವಶಕ್ಕೆ ಪಡೆಯಲಾಗಿದೆ. ಬಾಡಿಗೆಗೆ ಮನೆಗಳನ್ನು ಪಡೆದುಕೊಂಡು ಕೃತ್ಯ ಎಸಗುತಿದ್ದ ಆರೋಪಿಗಳು, ಇಂಟರ್ನೆಟ್ ಬಳಸಿ ನಂಬರ್ ಬದಲಾವಣೆ ಕರೆ ಬರುತ್ತಿದ್ದವು. ಇಂಟರ್ನ್ಯಾಷನಲ್ ಕರೆ ಮೂಲಕ ಬೆದರಿಕೆ ಕರೆಗಳನ್ನು ಮಾಡುತ್ತಿದ್ದರು. ಈ ಮೂಲದ ದುಬೈನಿಂದ ಪುತ್ತೂರಿನ ವ್ಯಕ್ತಿ ಒರ್ವನಿಗೆ ಬೆದರಿಕೆ ಹಾಕಿದ್ದ ಕೇಸ್ ದಾಖಲಾಗಿತ್ತು.
ಕುಡಿದ ಅಮಲಿನಲ್ಲಿ ಮಾವನನ್ನೇ ಕೊಲೆಗೈದ ಬಾಮೈದ
ಕೋಲಾರ: ಕುಡಿದ ಅಮಲಿನಲ್ಲಿ ಮಾವನನ್ನೇ ಬಾಮೈದ ಕೊಲೆಗೈದಿರುವಂತಹ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿದೆ. ಮಾವ ಜಯಪ್ಪ(56)ನನ್ನು ಬಾಮೈದ ಮುರಳಿ ಕೊಂದಿದ್ದಾನೆ. ಮನೆಯಲ್ಲಿ ಕುಡಿದು ಇಬ್ಬರು ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಮನೆಯಲ್ಲಿ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಆರೋಪಿ ಮುರಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.