ಯುಪಿಎ ಸರ್ಕಾರ ಇದ್ದಿದ್ದರೆ ಭಾರತೀಯರ ಬದಲು ತಾಲಿಬಾನಿಗಳು ಬರುತ್ತಿದ್ದದರು; ನಳಿನ್ ಕುಮಾರ್ ಕಟೀಲ್

| Updated By: sandhya thejappa

Updated on: Aug 25, 2021 | 1:26 PM

ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಯಾರೆಂಬ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸೀಟಿಗೆ ರೇಸ್ ಶುರುವಾಗಿದೆ. ಮುಂದಿನ 20 ವರ್ಷಗಳ ಕಾಲ ಬಿಜೆಪಿ ಸರ್ಕಾರ ಇರುತ್ತೆ. ಬಿಜೆಪಿಯಲ್ಲಿ ಗುಂಪುಗಾರಿಕೆ ಇಲ್ಲ.

ಯುಪಿಎ ಸರ್ಕಾರ ಇದ್ದಿದ್ದರೆ ಭಾರತೀಯರ ಬದಲು ತಾಲಿಬಾನಿಗಳು ಬರುತ್ತಿದ್ದದರು; ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್
Follow us on

ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel), ಮಂಡ್ಯ ಪರಿವರ್ತನೆಗೆ ನಾಂದಿ ಹಾಡಿರುವ ಜಿಲ್ಲೆ. ಇಲ್ಲಿ ಗೂಂಡಾಗಿರಿ, ಕುಟುಂಬ, ಜಾತಿಕಾರಣ ನೋಡಿದ್ದೆವು. ಅದಕ್ಕೆಲ್ಲ ಅಂತ್ಯವಾಡಲು ಇಂದಿನ ಸಭೆಯಲ್ಲಿ ಸಂಕಲ್ಪವಾಗಲಿದೆ. ಇಂದು ಇಡೀ ವಿಶ್ವವೇ ಭಾರತದ ಕಡೆ ನೋಡುತ್ತಿದೆ. ಇಂದು ಎಲ್ಲರೂ ಅಫ್ಘಾನಿಸ್ತಾನದ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಯುಪಿಎ ಸರ್ಕಾರ ಇದ್ದಿದ್ದರೆ ಭಾರತೀಯರ ಬದಲಿಗೆ ತಾಲಿಬಾನಿಗಳನ್ನು ಭಾರತಕ್ಕೆ ಕರೆತರುತ್ತಿತ್ತು ಅಂತ ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಇರುವುದರಿಂದ ಭಾರತೀಯರನ್ನು ಕರೆತರುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಡಲ್ಲ. ಯಾರೇ ಅಕ್ರಮ ಗಣಿಗಾರಿಕೆಯಲ್ಲಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಬಿ.ಎಸ್.ಯಡಿಯೂರಪ್ಪ ಇದ್ದಾಗ ಮೈಶುಗರ್​ಗೆ ಸಾಕಷ್ಟು ಅನುದಾನ ಕೊಟ್ಟಿದ್ದರು. ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. 3 ಪಾಲಿಕೆ ಚುನಾವಣೆಗಳಲ್ಲಿಯೂ ಬಿಜೆಪಿಯೇ ಗೆಲ್ಲಲಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಯಾರೆಂಬ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸೀಟಿಗೆ ರೇಸ್ ಶುರುವಾಗಿದೆ. ಮುಂದಿನ 20 ವರ್ಷಗಳ ಕಾಲ ಬಿಜೆಪಿ ಸರ್ಕಾರ ಇರುತ್ತೆ. ಬಿಜೆಪಿಯಲ್ಲಿ ಗುಂಪುಗಾರಿಕೆ ಇಲ್ಲ. ನಮ್ಮಲ್ಲಿ ಎಲ್ಲರೂ ಒಟ್ಟಾಗಿ ಒಂದೇ ದಾರಿಯಲ್ಲಿ ಹೋಗುತ್ತೇವೆ ಎಂದು ಕಟೀಲ್ ತಿಳಿಸಿದರು.

ಇನ್ನು ಬಿಜೆಪಿ ಪದಾಧಿಕಾರಿಗಳ ಸಭೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಉದ್ಘಾಟಿಸಿದರು. ಪರದೆ ಎಳೆಯುತ್ತಿದ್ದಂತೆ ಬೆಲ್ಲದ ಅಚ್ಚುಗಳು ಪ್ರದರ್ಶನಗೊಂಡಿತು. ಗಣ್ಯರು ಪರಸ್ಪರ ಬೆಲ್ಲದ ಮಿಠಾಯಿಯನ್ನು ಗಣ್ಯರು ತಿಂದರು.

ಕೊರೊನಾ ನಿಯಮ ಉಲ್ಲಂಘನೆ
ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಬಿಜೆಪಿ ನಾಯಕರು ಬೃಹತ್ ಸಭೆ ನಡೆಸಿದ್ದಾರೆ. 30ಕ್ಕೂ ಹೆಚ್ಚು ಜನ ಸೇರುವ ಸಭೆ ಸಮಾರಂಭವನ್ನು ಮಂಡ್ಯ ಜಿಲ್ಲಾಡಳಿತ ನಿರ್ಬಂಧಿಸಿದೆ. ಆದರೆ ಜಿಲ್ಲಾಧಿಕಾರಿ ಆದೇಶಕ್ಕೆ ಕ್ಯಾರೆ ಎನ್ನದೇ ಬಿಜೆಪಿ ನಾಯಕರು ಸಾವಿರಾರು ಕಾರ್ಯಕರ್ತರನ್ನ ಸೇರಿಸಿ ಸಭೆ ನಡೆಸುತ್ತಿದ್ದಾರೆ.

ಇದನ್ನೂ ಓದಿ

ರೂಲ್ಸ್ ಮಾಡಿದವರಿಂದಲೇ ರೂಲ್ಸ್ ಬ್ರೇಕ್! ಮಂಡ್ಯದಲ್ಲಿ ಬಿಜೆಪಿ ನಾಯಕರಿಂದ ಬೃಹತ್ ಸಭೆ

ಆಡಳಿತ ಪಕ್ಷ ಜೊತೆ ಮುನಿಸಿನ ಮಧ್ಯೆ ಅಳಿಯನಿಗೆ ಟ್ರಾನ್ಸ್​​ಫರ್​​ ಮಾಡಿಸಿಕೊಂಡ ಫೈರ್​ಬ್ರ್ಯಾಂಡ್​​ ಹಳ್ಳಿಹಕ್ಕಿ! ಸಿಎಂ ಬೊಮ್ಮಾಯಿಗೆ ಥ್ಯಾಂಕ್ಸ್​​ ಎಂದರು

(If there was a UPA government the Taliban would come to India instead of Indians from Afghanistan said Nalin Kumar Kateel)