Crime News: ಮಂಡ್ಯದಲ್ಲಿ ಹಾಡುಹಗಲೇ ಮಚ್ಚಿನಿಂದ ಹಲ್ಲೆ: ಬೆಂಕಿ ಹಚ್ಚಿ ಮಹಿಳೆ ಕೊಲೆಗೆ ಯತ್ನ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 13, 2022 | 2:19 PM

ಲಾಡ್ಜ್​​ವೊಂದರಲ್ಲಿ ಪ್ರಿಯಕರನಿಂದಲೇ ಪ್ರಿಯತಮೆಯ ಉಸಿರುಗಟ್ಟಿಸಿ ಕೊಲೆ ಮಾಡಿರುವಂತಹ ಘಟನೆ  ಯಶವಂತಪುರದಲ್ಲಿ ನಡೆದಿದೆ. ಪ್ರಿಯಕರ ಅನ್ಮೋಲ್​ ಕೊಲೆಗೈದು​ ಪರಾರಿಯಾಗಿದ್ದಾನೆ.

Crime News: ಮಂಡ್ಯದಲ್ಲಿ ಹಾಡುಹಗಲೇ ಮಚ್ಚಿನಿಂದ ಹಲ್ಲೆ: ಬೆಂಕಿ ಹಚ್ಚಿ ಮಹಿಳೆ ಕೊಲೆಗೆ ಯತ್ನ
ಹಲ್ಲೆಗೊಳಗಾದ ಮಹಿಳೆ
Follow us on

ಮಂಡ್ಯ: ಹಾಡಹಗಲೇ ಮಚ್ಚಿನಿಂದ ಹಲ್ಲೆ ನಡೆಸಿ ಮಹಿಳೆ ಕೊಲೆ (Murder) ಗೆ ಯತ್ನಿಸಿರುವಂತಹ (Attempt) ಘಟನೆ ನಾಗಮಂಗಲ ತಾಲೂಕಿನ ಗೆಳತಿ ಗುಡ್ಡ ಗ್ರಾಮದಲ್ಲಿ ನಡೆದಿದೆ. ಮಚ್ಚಿನಿಂದ ಹಲ್ಲೆ ನಡೆಸಿ ಬೆಂಕಿ ಹಚ್ಚಿ ಮಹಿಳೆಯನ್ನು ಕೊಲ್ಲಲು ಯತ್ನಿಸಲಾಗಿದೆ. ಶೇ.40ರಷ್ಟು ಮಹಿಳೆ ಪ್ರಭಾ(40) ಗಾಯಗೊಂಡಿದ್ದು, ಮಂಡ್ಯ ಮಿಮ್ಸ್​​ನಲ್ಲಿ ಚಿಕಿತ್ಸೆ ಪಡೆಯಲಾಗುತ್ತಿದೆ. ಬೆಂಗಳೂರಿನ ಗೊಲ್ಲರಹಟ್ಟಿ ನಿವಾಸಿ ಬಸವರಾಜುನಿಂದ ಕೃತ್ಯವೆಸಗಲಾಗಿದೆ. ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಬಸವರಾಜು, ಪ್ರಭಾ ಪತಿ ಪಾಪಣ್ಣ 3 ವರ್ಷದ ಹಿಂದೆ ಮೃತಪಟ್ಟಿದ್ದ. ಬಳಿಕ ಗಾರೆ ಕೆಲಸ ಮಾಡುತ್ತಿದ್ದ ಬಸವರಾಜು ಪರಿಚಯವಾಗಿತ್ತು. ಬಳಿಕ ಇಬ್ಬರ ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಕಳೆದ ಶುಕ್ರವಾರ ಇಬ್ಬರು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದರು. ಬಳಿಕ ಮೈಸೂರಿನ ಲಾಡ್ಜ್​​​ನಲ್ಲಿ ಉಳಿದುಕೊಂಡಿದ್ದರು. ನಾಗಮಂಗಲ ಬಳಿಯ ಸೂಳೆ ಕೆರೆ ನೋಡಲು ಹೋಗಿದ್ದರು. ಮಾರ್ಗ ಮಧ್ಯೆ ಗೆಳತಿ ಗುಡ್ಡದ ಬಳಿ ಪ್ರಭಾ ಕೊಲೆಗೆ ಯತ್ನಿಸಿದ್ದು, ಮಚ್ಚಿನಿಂದ ಹಲ್ಲೆ ನಡೆಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೃತ್ಯವೆಸಲಾಗಿದೆ. ಬೆಂಕಿ ಹೊತ್ತಿಕೊಂಡ ಬಳಿಕ ಪ್ರಭಾ ರಸ್ತೆಗೆ ಓಡಿ ಬಂದಿದ್ದು, ಸ್ಥಳೀಯರು ಪ್ರಭಾಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ನಾಗಮಂಗಲ ಟೌನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಪ್ರಿಯಕರನಿಂದಲೇ ಪ್ರಿಯತಮೆಯ ಉಸಿರುಗಟ್ಟಿಸಿ ಕೊಲೆ

ಬೆಂಗಳೂರು: ಲಾಡ್ಜ್​​ವೊಂದರಲ್ಲಿ ಪ್ರಿಯಕರನಿಂದಲೇ ಪ್ರಿಯತಮೆಯ ಉಸಿರುಗಟ್ಟಿಸಿ ಕೊಲೆ ಮಾಡಿರುವಂತಹ ಘಟನೆ  ಯಶವಂತಪುರದಲ್ಲಿ ನಡೆದಿದೆ. ಒಡಿಶಾ ಮೂಲದ ದೀಪಾ ಪದನ್​(37) ಕೊಲೆಯಾದ ಮಹಿಳೆ. ಪ್ರಿಯಕರ ಅನ್ಮೋಲ್​ ಕೊಲೆಗೈದು​ ಪರಾರಿಯಾಗಿದ್ದಾನೆ. ಹತ್ಯೆಯಾದ ದೀಪಾ ಆರೋಪಿ ಅನ್ಮೋಲ್​​ನ ಪತ್ನಿಯ ಸ್ನೇಹಿತೆ. ಪತ್ನಿ ಸ್ನೇಹಿತೆ ದೀಪಾ ಜತೆ ಅಕ್ರಮ ಸಂಬಂಧ ಹೊಂದಿದ್ದ ಅನ್ಮೋಲ್​,​ ಇತ್ತೀಚೆಗೆ ಬೇರೊಬ್ಬ ಯುವಕನ ಜತೆ ದೀಪಾ ಪದನ್ ಓಡಾಡುತ್ತಿದ್ದಳು.​ ವಿಷಯ ತಿಳಿದು ದೀಪಾ ಪದನ್​ಳನ್ನು ಜೂನ್ 10ರಂದು ಲಾಡ್ಜ್​​ನಲ್ಲಿ ಕೊಲೆ ಮಾಡಿ ಅನ್ಮೋಲ್​ ಪರಾರಿಯಾಗಿದ್ದಾನೆ. ಬೆಂಗಳೂರಿನ ಬಾಟಾ ಶೋರೂಂನಲ್ಲಿ ಅನ್ಮೋಲ್ ಕೆಲಸ ಮಾಡುತ್ತಿದ್ದ. ಯಶವಂತಪುರ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಸೋದರ ಸಂಬಂಧಿ ಸಾವಿನ ಆಘಾತ ತಾಳಲಾರದೇ ಚಿತೆಗೆ ಹಾರಿ ಯುವಕ ಆತ್ಮಹತ್ಯೆ

ಈಜಾಡುವ ವೇಳೆ ಕಾವೇರಿ ನದಿಯಲ್ಲಿ ಓರ್ವ ನೀರುಪಾಲು

ಚಾಮರಾಜನಗರ: ನದಿಯಲ್ಲಿ ಈಜಾಡುವ ವೇಳೆ ಓರ್ವ ಕೊಚ್ಚಿ‌ ಹೋಗಿದ್ದು, ಎಂಟು ಮಂದಿ ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಿರುವಂತಹ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಬಳಿ ನಡೆದಿದೆ. ಬೆಂಗಳೂರಿನ ನಿವಾಸಿ ಚರಣ್ 14 ಮೃತ ದುರ್ಧೈವಿ. ವಾರಾಂತ್ಯ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು, ಕಾವೇರಿ ನದಿಯಲ್ಲಿ ಮೋಜು ಮಸ್ತಿ ಮಾಡುವ ವೇಳೆ ನಿನ್ನೆ ಘಟನೆ ನಡೆದಿದೆ. ಪೊಲೀಸರಿಗೆ ಸ್ಥಳೀಯರು ಮಾಹಿತಿ ಕೊಟ್ಟಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ನೀರಿನಲ್ಲಿ ಸಿಲುಕಿದ್ದ ಎಂಟು ಮಂದಿ ರಕ್ಷಣೆ‌ ಮಾಡಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾರ್ಟ್ ಸರ್ಕ್ಯೂಟ್​ನಿಂದಾಗಿ ಕಬ್ಬು ಮಾವಿನ ತೋಟಕ್ಕೆ ಬೆಂಕಿ

ಬೀದರ್: ಶಾರ್ಟ್ ಸರ್ಕ್ಯೂಟ್​ನಿಂದಾಗಿ ಕಬ್ಬು ಮಾವಿನ ತೋಟ ಬೆಂಕಿಗಾಹುತಿಯಾಗಿದ್ದು ಅಪಾರ ಹಾನಿ ಉಂಟಾಗಿರುವಂತಹ ಘಟನೆ ತಾಲೂಕಿನ ರಾಜಗೀರಾ ಗ್ರಾಮದ ರಾಜ್ ರತನ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ನಡೆದಿದೆ. ಮೂರು ಎಕರೆಯಷ್ಟು ಕಬ್ಬು ನೂರಕ್ಕೂ ಹೆಚ್ಚು ಮಾವಿನ ಗಿಡಗಳು ಬೆಂಕಿಗಾಹುತಿಯಾಗಿವೆ. ಬೆಂಕಿಯ ಕೆನ್ನಾಲಿಗೆಗೆ ಎರಡು ಲಕ್ಷ ಮೌಲ್ಯದ ಡ್ರಿಪ್ ಪೈಪ್ ಗಳು ಸುಟ್ಟು ಭಸ್ಮವಾಗಿವೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಐದು ಲಕ್ಷಕ್ಕೂ ಹೆಚ್ಚು ನಷ್ಟವಾಗಿ ಎಂದು ರೈತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.