ಸೋದರ ಸಂಬಂಧಿ ಸಾವಿನ ಆಘಾತ ತಾಳಲಾರದೇ ಚಿತೆಗೆ ಹಾರಿ ಯುವಕ ಆತ್ಮಹತ್ಯೆ

ಸೋದರ ಸಂಬಂಧಿಯ ಸಾವಿನ ಆಘಾತ ತಾಳಲಾರದೆ ಯೊವಕನೊಬ್ಬ ಅಂತ್ಯ ಸಂಸ್ಕಾರದ ವೇಳೆ ಚಿತೆಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಸೋದರ ಸಂಬಂಧಿ ಸಾವಿನ ಆಘಾತ ತಾಳಲಾರದೇ ಚಿತೆಗೆ ಹಾರಿ ಯುವಕ ಆತ್ಮಹತ್ಯೆ
Funeral
Image Credit source: NDTV
TV9kannada Web Team

| Edited By: Nayana Rajeev

Jun 13, 2022 | 12:08 PM

ಭೋಪಾಲ್ : ಸೋದರ ಸಂಬಂಧಿಯ ಸಾವಿನ ಆಘಾತ ತಾಳಲಾರದೆ ಯೊವಕನೊಬ್ಬ ಅಂತ್ಯ ಸಂಸ್ಕಾರದ ವೇಳೆ ಚಿತೆಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಘಟನೆಯು ಸಾಗರ್ ಜಿಲ್ಲೆಯ ಮಝಗಾವನ್ ಎಂಬ ಗ್ರಾಮದಲ್ಲಿ ನಡೆದಿದೆ, ಮಹಿಳೆ ಆಯತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದರು., ಮಹಿಳೆಯ ಸಾವಿನಿಂದಾಗಿ ಯುವಕ ಬೇಸರಗೊಂಡಿದ್ದ, ಮೃತ ಮಹಿಳೆಯ ಶವದತ್ತ ಬಾಗಿದ್ದ ವ್ಯಕ್ತಿ ಏಕಾಏಕಿ ಚಿತೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಶನಿವಾರ ಅಂತ್ಯಸಂಸ್ಕಾರ ನಡೆದಿತ್ತು, ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಬಳಿಕ, ಸಂಬಂಧಿಕರು ಅವರವರ ಮನೆಗೆ ತೆರಳಿದರು. ಕೆಲ ಸಮಯದ ಬಳಿಕ ಆಕೆಯ ಸೋದರ ಸಂಬಂಧಿ ಕರಣ್ ಚಿತಾಗಾರಕ್ಕೆ ಆಗಮಿಸಿದ.

ಕರಣ್ ಚಿತಾಗಾರಕ್ಕೆ ಆಗಮಿಸಿದ್ದನ್ನು ನೋಡಿದ ತಕ್ಷಣ ಕುಟುಂಬಕ್ಕೆ ಗ್ರಾಮಸ್ಥರು ಮಾಹಿತಿ ನೀಡಿದರು. ಆದರೆ ಕುಟುಂಬದವರು ಆಗಮಿಸುವ ವೇಳೆಗೆ 21 ವರ್ಷದ ಯುವಕನ ದೇಹ ಬಹುತೇಕ ಸುಟ್ಟುಹೋಗಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಗ್ರಾಮ ಪಂಚಾಯ್ತಿ ಸರಪಂಚ ಭರತ್ ಸಿಂಗ್ ಘೋಷಿ ಹೇಳಿದ್ದಾರೆ.

ರವಿವಾರ ಯುವಕನ ಅಂತ್ಯಸಂಸ್ಕಾರವನ್ನು ಜ್ಯೋತಿಯ ಚಿತೆಯ ಬಳಿಯಲ್ಲೇ ನೆರವೇರಿಸಲಾಯಿತು. ಆದರೆ ಆತ ಪ್ರಾಣ ಕಳೆದುಕೊಳ್ಳಲು ಕಾರಣವೇನೆಂಬುದು ತನಿಖೆ ಬಳಿಕವೇ ತಿಳಿದುಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada