ಮಂಡ್ಯ ಅಕ್ರಮ ಗಣಿಗಾರಿಕೆ ಪ್ರಕರಣ; ಸಿಎಂ ಗಮನಕ್ಕೆ ತರಲು ಜೆಡಿಎಸ್ ನಿರ್ಧಾರ

| Updated By: sandhya thejappa

Updated on: Aug 10, 2021 | 9:02 AM

ಪ್ರಧಾನಿ ಆಗಲಿ, ಮುಖ್ಯಮಂತ್ರಿಯಾಗಲಿ, ಎಂಎಲ್ಸಿಗಳಾಗಲಿ, ಯಾವುದೇ ಕಾರಣಕ್ಕೂ ಸಾಮಾನ್ಯ ಜನರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಬಾರದು. ಬೇಬಿಬೆಟ್ಟದಲ್ಲಿ ಗಣಿಗಾರಿಕೆಯಿಂದ ಥ್ರೆಟ್ ಇದ್ದರೆ ಕ್ರಮಕೈಗೊಳ್ಳಲಿ.

ಮಂಡ್ಯ ಅಕ್ರಮ ಗಣಿಗಾರಿಕೆ ಪ್ರಕರಣ; ಸಿಎಂ ಗಮನಕ್ಕೆ ತರಲು ಜೆಡಿಎಸ್ ನಿರ್ಧಾರ
ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು
Follow us on

ಮಂಡ್ಯ: ಜಿಲ್ಲೆಯ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ರಾಜ್ಯದ ಮುಖ್ಯಮಂತ್ರಿ ಅಂಗಳಕ್ಕೆ ತೆಗೆದುಕೊಂಡು ಹೋಗಲು ಜೆಡಿಎಸ್ (JDS) ನಿರ್ಧರಿಸಿದೆ. ಗಣಿಗಾರಿಕೆ ವಿಚಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ಗಮನಕ್ಕೆ ತರಲು ನಿರ್ಧರಿಸಿರುವ ಬಗ್ಗೆ ಮಾಹಿತಿ ನೀಡಿದ ಮೇಲುಕೋಟೆಯ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು, ಗಣಿಗಾರಿಕೆಯನ್ನೇ ನಂಬಿ ಬದುಕು ಸಾಗಿಸುತ್ತಿದ್ದ ನೂರಾರು ಕುಟುಂಬಗಳು ಸಂಕಷ್ಟದಲ್ಲಿವೆ. ಗಣಿಗಾರಿಕೆ ವಿಚಾರವನ್ನು ಮುಖ್ಯಮಂತ್ರಿ ಬಳಿಗೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ಜಿಲ್ಲೆಯ ಎಲ್ಲಾ ಶಾಸಕರು ಸಿಎಂ ಭೇಟಿ ಮಾಡಿ ಮನವರಿಕೆ ಮಾಡುತ್ತೇವೆ. ರಾಜಕಾರಣಿಗಳದ್ದು ಒಂದಲ್ಲ ಒಂದು ರೀತಿ ನಡೆದು ಹೋಗುತ್ತೆ. ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿರುವುದು ಎಲ್ಲರ ಜವಾಬ್ದಾರಿ ಅಂತ ತಿಳಿಸಿದ್ದಾರೆ.

ಪ್ರಧಾನಿ ಆಗಲಿ, ಮುಖ್ಯಮಂತ್ರಿಯಾಗಲಿ, ಎಂಎಲ್​ಸಿಗಳಾಗಲಿ, ಯಾವುದೇ ಕಾರಣಕ್ಕೂ ಸಾಮಾನ್ಯ ಜನರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಬಾರದು. ಬೇಬಿಬೆಟ್ಟದಲ್ಲಿ ಗಣಿಗಾರಿಕೆಯಿಂದ ಥ್ರೆಟ್ ಇದ್ದರೆ ಕ್ರಮಕೈಗೊಳ್ಳಲಿ. ಅದನ್ನು ಬಿಟ್ಟು ಉಳಿದ ಗಣಿಗಾರಿಕೆಗೆ ಅವಕಾಶ ನೀಡಬೇಕು. ಇಡೀ ಜಿಲ್ಲೆಯಲ್ಲಿ ಗಣಿಗಾರಿಕೆ ನಿಲ್ಲಿಸಿದರೆ ವ್ಯವಸ್ಥೆ ಏನಾಗಬೇಕು? ಗಣಿಗಾರಿಕೆ ಸ್ಥಗಿತದಿಂದ ಆದ ಸಮಸ್ಯೆ ಬಗ್ಗೆ ಸಿಎಂ ಹೇಳಬೇಕು ಅಂತ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.

ಕೆಆರ್ಎಸ್ (KRS Dam) ಡ್ಯಾಂ ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಹೇಳಿಕೆ ನೀಡಿದ್ದರು. ಹೇಳಿಕೆಯ ನಂತರ ಸಾಕಷ್ಟು ವಿವಾದದ ಸ್ವರೂಪ ಪಡೆದುಕೊಂಡಿತ್ತು. ಅಕ್ರಮ ಗಣಿಗಾರಿಕೆಯಿಂದಾಗಿಯೇ ಡ್ಯಾಂಗೆ ಗಂಡಾಂತರ ಕಾದಿದೆ ಎಂದು ಆರೋಪಿಸಿ ಮಂಡ್ಯ ಸಂಸದೆ ಸುಮಲತಾ ಸ್ವತಹ ಸ್ಥಳ ಪರಿಶೀಲನೆ ನಡೆಸಿದ್ದರು. ಜುಲೈ 7ರಂದು ಸ್ಥಳ ಪರಿಶೀಲನೆ ನಡೆಸಿದ್ದರು. ಹಂಗರ ಹಳ್ಳಿಯ ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದ್ದರು.

ಇದಾದ ನಂತರ ಜುಲೈ 14 ರಂದು ಕೆಆರ್​ಎಸ್​ ಡ್ಯಾಂ ಹಾಗೂ ಬೇಬಿ ಬೆಟ್ಟದ ಪ್ರದೇಶಕ್ಕೆ ಭೇಟಿ ನೀಡಿ ಸಂಸದೆ ಪರಿಶೀಲನೆ ನಡೆಸಿದ್ದರು. ಸಂಸದೆಯ ಭೇಟಿ ಬಳಿಕ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಗಣಿಗಾರಿಕೆ ಸ್ಥಗಿತವಾಗಿದೆ. ಗಣಿಗಾರಿಕೆ ಸ್ಥಗಿತವಾಗಿದ್ದರಿಂದ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ.

ಇದನ್ನೂ ಓದಿ

KRS Dam: ಕೆಆರ್​ಎಸ್​ ಡ್ಯಾಂ ಬಳಿ 30ಕ್ಕೂ ಹೆಚ್ಚು ಕಲ್ಲುಗಳು ಕುಸಿತ; ಆತಂಕ ಬೇಡ ಎಂದ ಅಧಿಕಾರಿಗಳು

KRS ಡ್ಯಾಂ ಮೆಟ್ಟಿಲ ಕಲ್ಲುಗಳ ಕುಸಿತ ದೃಶ್ಯ ಸಿಸಿಟಿವಿಯಲ್ಲಿ ಸೆರೆ; ಜಲಾಶಯ ಬಿರುಕು ಸತ್ಯಶೋಧನೆಗೆ ಬಿಜೆಪಿ ತಂಡ ರಚನೆ

(JDS has decided to bring to the notice of the CM the illegal mining case of Mandya)