ಸೋನಾಮಸೂರಿ ಅಕ್ಕಿಯಲ್ಲಿ ಪ್ಲಾಸ್ಟಿಕ್ ಪತ್ತೆ ಆರೋಪ; ಸೂಪರ್ ಮಾರ್ಕೆಟ್ ಎದುರು ಗ್ರಾಹಕರ ಧರಣಿ
ಈ ಕುರಿತು ಟಿವಿ9 ಕನ್ನಡ ಡಿಜಿಟಲ್ ಪ್ರತಿನಿಧಿಯ ಜತೆ ಮಾತನಾಡಿದ ಮಂಡ್ಯದ ಗಾಂಧಿನಗರ ನಿವಾಸಿ ಗೋಪಾಲ್, ಖಾಸಗಿ ಸೂಪರ್ಮಾರ್ಕೆಟ್ನಿಂದ ಸೋನಾಮಸೂರಿ ಅಕ್ಕಿ ಖರೀದಿಸಿದ್ದೆವು. ಆ ಅಕ್ಕಿಯಿಂದ 3 ದಿನ ಅಡುಗೆ ಮಾಡಿದಾಗ ಮಕ್ಕಳಿಗೆ ಹೊಟ್ಟೆನೋವು ಬಂದಿದೆ ಎಂದು ದುರಿದರು.
ಮಂಡ್ಯ: ಹೊಸಹಳ್ಳಿ ಸರ್ಕಲ್‌ನಲ್ಲಿರುವ ಖಾಸಗಿ ಸೂಪರ್ ಮಾರ್ಕೆಟ್ ಒಂದರಲ್ಲಿ ಸೋನಾಮಸೂರಿ ಅಕ್ಕಿ ಮೂಟೆಯಲ್ಲಿ ಪ್ಲ್ಯಾಸ್ಟಿಕ್ ಪತ್ತೆ ಆರೋಪದಡಿ ಸೂಪರ್ಮಾರ್ಕೆಟ್ ಮಾಲೀಕರ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಗ್ರಾಹಕರಿಗೆ ಮೋಸ ಮಾಡಲು ಹೀಗೆ ಮಾಡ್ತಿದ್ದೀರಾ? ನಾವೇನು ನಿಮಗೆ ಹಣ ಕೊಡಲ್ವಾ? ಎಂದು ಜನರು ಸೂಪರ್ ಮಾರ್ಕೆಟ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಸೂಪರ್ಮಾರ್ಕೆಟ್ ಬಾಗಿಲು ಹಾಕುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ಪೂರ್ವ ಸ್ಟೇಶನ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಟಿವಿ9 ಕನ್ನಡ ಡಿಜಿಟಲ್ ಪ್ರತಿನಿಧಿಯ ಜತೆ ಮಾತನಾಡಿದ ಮಂಡ್ಯದ ಗಾಂಧಿನಗರ ನಿವಾಸಿ ಗೋಪಾಲ್, ಖಾಸಗಿ ಸೂಪರ್ಮಾರ್ಕೆಟ್ನಿಂದ ಸೋನಾಮಸೂರಿ ಅಕ್ಕಿ ಖರೀದಿಸಿದ್ದೆವು. ಆ ಅಕ್ಕಿಯಿಂದ 3 ದಿನ ಅಡುಗೆ ಮಾಡಿದಾಗ ಮಕ್ಕಳಿಗೆ ಹೊಟ್ಟೆನೋವು ಬಂದಿದೆ. ನಂತರ ಅಕ್ಕಿ ಮತ್ತು ಅನ್ನವನ್ನು ಪರಿಶೀಲಿಸಿದಾಗ ಅದರಲ್ಲಿ ಪ್ಲಾಸ್ಟಿಕ್ನ ವಸ್ತುಗಳು ಇರುವುದು ಕಂಡುಬಂತು’ ಎಂದು ಆರೋಪಿಸಿದರು.
ಈ ಕುರಿತು ಟಿವಿ9 ಕನ್ನಡ ಡಿಜಿಟಲ್ ಪ್ರತಿನಿಧಿ ಬಳಿ ಖಾಸಗಿ ಸೂಪರ್ಮಾರ್ಕೆಟ್ ಮ್ಯಾನೇಜರ್ ಮೋಹನ್ ಮಾತನಾಡಿ, ‘ನಾವು ಗುಣಮಟ್ಟದ ವಸ್ತುಗಳನ್ನು ಪೂರೈಕೆ ಮಾಡುತಿದ್ದೇವೆ. ಎಲ್ಲೋ ಒಂದೆರಡರಲ್ಲಿ ವ್ಯತ್ಯಾಸ ಆಗಿರಬಹುದು. ಆದರೆ ಅದನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಸೇವೆ ನೀಡುತ್ತೇವೆ’ ಎಂದರು.
ಇದನ್ನೂ ಓದಿ:
(Accused of finding Plastic in Sonamasuri Rice Customers who put in the supermarket door)
Published On - 6:13 pm, Tue, 10 August 21