ನಮ್ಮ ಎಂಪಿಗೆ ಮಂಡ್ಯ ಸಂಸ್ಕೃತಿ ಗೊತ್ತಿಲ್ಲ; ಎಲ್ರಿಗೂ ತೊಂದರೆ ಕೊಟ್ಟು, ಜಿಲ್ಲಾ ವ್ಯವಸ್ಥೆ ಅಲ್ಲೋಲಕಲ್ಲೋಲ ಮಾಡಿದ್ದಾರೆ: ಶಾಸಕ ರವೀಂದ್ರ

ನಮ್ಮ ಎಂಪಿಗೆ ಮಂಡ್ಯ ಸಂಸ್ಕೃತಿ ಗೊತ್ತಿಲ್ಲ; ಎಲ್ರಿಗೂ ತೊಂದರೆ ಕೊಟ್ಟು, ಜಿಲ್ಲಾ ವ್ಯವಸ್ಥೆ ಅಲ್ಲೋಲಕಲ್ಲೋಲ ಮಾಡಿದ್ದಾರೆ: ಶಾಸಕ ರವೀಂದ್ರ
ಶಾಸಕ ರವೀಂದ್ರ ಶ್ರೀಕಂಠಯ್ಯ

ನಾವು ಮನುಷ್ಯರ ಜೊತೆ ಬದುಕುತ್ತಿದ್ದೇವೆ, ವಿಶ್ವಾಸದಿಂದ ಇರಬೇಕು ಎಂದು ಸಂಸದೆ ಸುಮಲತಾ ವಿರುದ್ಧ ಗುಡುಗಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆಯನ್ನ ಸಕ್ರಮ ಮಾಡಬೇಕು. ಕಾನೂನುಬದ್ಧವಾಗಿ ರಾಜಧನ ನಿಗಧಿ ಮಾಡಿ ಮೆಟೀರಿಯಲ್ ಸಿಗುವ ಹಾಗೇ ಮಾಡಬೇಕು ಎಂದು ಕೋರಿದರು.

TV9kannada Web Team

| Edited By: sadhu srinath

Aug 06, 2021 | 11:33 AM

ಮಂಡ್ಯ: ಕೆಆರ್​ಎಸ್ ಅಣೆಕಟ್ಟೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಆರಂಭವಾದ ಮಾತಿನ ಚಕಮಕಿ ತದನಂತರ ಅಕ್ರಮ ಗಣಿಗಾರಿಕೆಗೂ ಕಾಲಿಟ್ಟು ಮಂಡ್ಯದ ಸಂಸದೆ ಸುಮಲತಾ ಅಂಬರೀಷ್​ ಮತ್ತು ಶಾಸಕ ರವೀಂದ್ರ ಶ್ರೀಕಂಠಯ್ಯ ನಡುವಣ ವೈಮನಸ್ಯಕ್ಕೆ ದಾರಿಯಾಗಿತ್ತು. ಆದರೆ ಅದಿನ್ನೂ ಮೂಂದುವರಿದಿದೆ. ಸಂಸದೆ ಸಂಸದೆ ಸುಮಲತಾ ದೆಹಲಿ ಮಟ್ಟದಲ್ಲಿ ತಮ್ಮ ಹೋರಾಟ ಮುಂದುವರಿಸಿದ್ದರೆ ಶಾಸಕ ರವೀಂದ್ರ ಅವರು ಸ್ಥಳೀಯವಾಗಿ ಲೋಕಲ್​ ವಾರ್​ ಮುಂದುವರಿಸಿದ್ದಾರೆ.

ಮಂಡ್ಯ ತಾಲೂಕು ಪೀ ಹಳ್ಳಿ ಗ್ರಾಮದಲ್ಲಿ ಮಾತನಾಡಿರುವ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ನಮ್ಮ ಎಂಪಿ ಅವರಿಗೆ ಮಂಡ್ಯ ಸಂಸ್ಕೃತಿ ಗೊತ್ತಿಲ್ಲ. ಮಂಡ್ಯದಲ್ಲಿ ನೂರಾರು ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿದೆ. ಎಲ್ಲರಿಗೂ ತೊಂದರೆ ಕೊಟ್ಟು, ಜಿಲ್ಲಾ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಅಭಿವೃದ್ಧಿಗಳು ಆಗುತ್ತಿಲ್ಲ. ಸಂಸದರ ಯೋಚನೆ ತುಘಲಕ್ ಸಂಸ್ಕೃತಿ ರೀತಿ‌ ಇದೆ ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ನಾವು ಮನುಷ್ಯರ ಜೊತೆ ಬದುಕುತ್ತಿದ್ದೇವೆ, ವಿಶ್ವಾಸದಿಂದ ಇರಬೇಕು ಎಂದು ಸಂಸದೆ ಸುಮಲತಾ ವಿರುದ್ಧ ಗುಡುಗಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆಯನ್ನ ಸಕ್ರಮ ಮಾಡಬೇಕು. ಕಾನೂನುಬದ್ಧವಾಗಿ ರಾಜಧನ ನಿಗಧಿ ಮಾಡಿ ಮೆಟೀರಿಯಲ್ ಸಿಗುವ ಹಾಗೇ ಮಾಡಬೇಕು ಎಂದು ಕೋರಿದರು.

ಇದೇ ವೇಳೆ, ಮಂತ್ರಿಯಾಗಿರುವ ನಾರಾಯಣಗೌಡರಿಗೆ ಅಭಿನಂದನೆ ಸಲ್ಲಿಸಿದ ಶಾಸಕ ರವೀಂದ್ರ ಕೇವಲ ಕೆಆರ್ ಪೇಟೆ ಮಾತ್ರ ಅಲ್ಲ; ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗೆಗೂ ಗಮನಹರಿಸಿ. ರಸ್ತೆ ಕಾಮಗಾರಿಗಳಿಗೆ ಮೆಟೀರಿಯಲ್ ಸಿಗ್ತಿಲ್ಲ. ಜನರಿಗೆ ಜಲ್ಲಿ ಕಲ್ಲು, ಮರಳು, ಎಂ ಸ್ಯಾಂಡ್ ಸಿಗದೆ ಪರದಾಡುತ್ತಿದ್ದಾರೆ. ಈ ಸಮಸ್ಯೆ ತುಂಬಾ ದೊಡ್ಡದಾಗಿದೆ, ಇದರ ಬಗ್ಗೆಯೂ ಗಮನಹರಿಸಿ ಎಂದು ಸಚಿವ ನಾರಾಯಣಗೌಡರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಮನವಿ ಮಾಡಿದರು.

ಕೆಆರ್​​ಎಸ್ ಅಣೆಕಟ್ಟೆಗೆ ಅಪಾಯ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ಮಾಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್

(Srirangapatna jds mla ravindra srikantaiah criticises mandya mp sumalatha ambareesh)

Follow us on

Related Stories

Most Read Stories

Click on your DTH Provider to Add TV9 Kannada