AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KRS ಡ್ಯಾಂ ಮೆಟ್ಟಿಲ ಕಲ್ಲುಗಳ ಕುಸಿತ ದೃಶ್ಯ ಸಿಸಿಟಿವಿಯಲ್ಲಿ ಸೆರೆ; ಜಲಾಶಯ ಬಿರುಕು ಸತ್ಯಶೋಧನೆಗೆ ಬಿಜೆಪಿ ತಂಡ ರಚನೆ

ಅಕ್ರಮ ಗಣಿಗಾರಿಕೆ, ಡ್ಯಾಂ ಪರಿಶೀಲನೆಗೆ ತಂಡಗಳ ರಚನೆ ಮಾಡಲಾಗುವುದು. ಪರಿಶೀಲನೆ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೆಆರ್​ಎಸ್ ಜಲಾಶಯ ಪರಿಶೀಲನೆ ಬಳಿಕ ರವಿಕುಮಾರ್ ಹೇಳಿಕೆ ನೀಡಿದ್ದಾರೆ.

KRS ಡ್ಯಾಂ ಮೆಟ್ಟಿಲ ಕಲ್ಲುಗಳ ಕುಸಿತ ದೃಶ್ಯ ಸಿಸಿಟಿವಿಯಲ್ಲಿ ಸೆರೆ; ಜಲಾಶಯ ಬಿರುಕು ಸತ್ಯಶೋಧನೆಗೆ ಬಿಜೆಪಿ ತಂಡ ರಚನೆ
ಕೃಷ್ಣರಾಜ ಸಾಗರ ಜಲಾಶಯ (ಸಂಗ್ರಹ ಚಿತ್ರ)
TV9 Web
| Edited By: |

Updated on:Jul 19, 2021 | 4:08 PM

Share

ಮಂಡ್ಯ: ಕೆಆರ್​ಎಸ್ ಡ್ಯಾಂ (KRS Dam) ಮೆಟ್ಟಿಲ ಕಲ್ಲುಗಳ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಸಿಸಿಟಿವಿ ದೃಶ್ಯ ಸೆರೆಯಾಗಿದೆ. ಮೆಟ್ಟಿಲು ಕುಸಿತವಾಗುತ್ತಿರುವ ದೃಶ್ಯ ಕೆಆರ್​ಎಸ್ ಡ್ಯಾಂನಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಮಧ್ಯೆ, ಕೆಆರ್​ಎಸ್​ ಜಲಾಶಯದಲ್ಲಿ ಬಿರುಕು ಹೇಳಿಕೆ ವಿವಾದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ತಂಡದಿಂದ ಜಲಾಶಯದಲ್ಲಿ ಸತ್ಯಶೋಧನೆ ಕಾರ್ಯ ನಡೆದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್ ಜಲಾಶಯವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ತಂಡ ಪರಿಶೀಲನೆ ನಡೆಸಿದೆ.

ಪರಿಶೀಲನೆ ಬಳಿಕ ರವಿಕುಮಾರ್ ಮಾತನಾಡಿದ್ದಾರೆ. ಬಿರುಕು, ಅಕ್ರಮ ಗಣಿ ವಿಚಾರ ಚರ್ಚೆ ಹೆಚ್ಚಾಗಿದೆ. ಹಾಗಾಗಿ, ವರಿಷ್ಠರ ಸಲಹೆಯಂತೆ ಇಂದು ಕೆಆರ್​ಎಸ್ ಜಲಾಶಯ ಪರಿಶೀಲನೆ ಮಾಡಲಾಗಿದೆ. ಸತ್ಯಾಸತ್ಯತೆ ಅರಿಯಲು ಬಿಜೆಪಿಯಿಂದ ತಂಡ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯ 2 ತಂಡ ರಚಿಸಿ ಪರಿಶೀಲನೆ ಕಾರ್ಯ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಅಕ್ರಮ ಗಣಿಗಾರಿಕೆ, ಡ್ಯಾಂ ಪರಿಶೀಲನೆಗೆ ತಂಡಗಳ ರಚನೆ ಮಾಡಲಾಗುವುದು. ಪರಿಶೀಲನೆ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೆಆರ್​ಎಸ್ ಜಲಾಶಯ ಪರಿಶೀಲನೆ ಬಳಿಕ ರವಿಕುಮಾರ್ ಹೇಳಿಕೆ ನೀಡಿದ್ದಾರೆ.

ಕೆಆರ್​ಎಸ್​ ಡ್ಯಾಂ ಸಮೀಪದಲ್ಲಿ (KRS Dam) ಕಲ್ಲು ಕುಸಿದ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ (JDS MLA Ravindra Srikantaiah) ಬೆಳ್ಳಂಬೆಳಗ್ಗೆ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಮಾತನಾಡಿದ ಅವರು, ಡ್ಯಾಂಗೂ, ಕಲ್ಲು ಕುಸಿದಿದ್ದಕ್ಕೂ ಸಂಬಂಧವಿಲ್ಲ. ಗಾರ್ಡನ್​ಗೆ ಹೋಗುವ ದಾರಿಯಲ್ಲಿ ಹತ್ತು ಹದಿನೈದು ಕಲ್ಲುಗಳು ಬಿದ್ದಿವೆ. ಇವುಗಳನ್ನ ಮಣ್ಣಿನಿಂದ ಕಟ್ಟಲಾಗಿದ್ದು, ಮಳೆಯಿಂದಾಗಿ (Heavy Rain) ಘಟನೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.

ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್​ ಡ್ಯಾಂಗೆ ತೊಂದರೆಯಾಗುತ್ತಿದೆ ಎಂಬ ಕೂಗು ಬಲವಾಗಿ ಕೇಳಿಬಂದ ಬೆನ್ನಲ್ಲೇ ಅಣೆಕಟ್ಟಿನ ಸಮೀಪ ಕಲ್ಲುಗಳು ಕುಸಿದಿದ್ದು, ಜಲಾಶಯದಿಂದ ಮೇಲ್ಭಾಗಕ್ಕೆ ತೆರಳಲು ರಸ್ತೆಯಂತಿರುವ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದವರ ಪಟ್ಟಿಯಲ್ಲಿ ರವೀಂದ್ರ ಶ್ರೀಂಕಠಯ್ಯ ಅವರ ಮೇಲೂ ಕೆಲ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ಭಾರೀ ವಾಗ್ಯುದ್ಧವೇ ನಡೆದಿತ್ತು. ಇದೀಗ ಅವಘಡ ಸಂಭವಿಸಿದ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಇದಕ್ಕೂ ಡ್ಯಾಂಗೂ ಸಂಬಂಧವಿಲ್ಲ ಎಂದು ಸ್ಪಷ್ಟೀಕರಿಸಿದ್ದರು.

ಇದನ್ನೂ ಓದಿ: KRS Dam: ಕೆಆರ್​ಎಸ್​ ಡ್ಯಾಂ ಬಳಿ 30ಕ್ಕೂ ಹೆಚ್ಚು ಕಲ್ಲುಗಳು ಕುಸಿತ; ಆತಂಕ ಬೇಡ ಎಂದ ಅಧಿಕಾರಿಗಳು

KRS Dam: ಕಬಿನಿ ಜಲಾನಯನ ಪ್ರದೇಶದಲ್ಲಿ ಬಿರುಸುಗೊಂಡ ಮಳೆ, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಎಷ್ಟಿದೆ ಈಗ?

Published On - 4:02 pm, Mon, 19 July 21

ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ?
ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ?
ಈಗ ಕಾಲ ಬದಲಾಗಿದೆ: ‘ಜೋಗಿ’ ನಿರ್ಮಾಪಕರ ‘ಘಾರ್ಗಾ’ ಚಿತ್ರ ಬಿಡುಗಡೆಗೆ ರೆಡಿ
ಈಗ ಕಾಲ ಬದಲಾಗಿದೆ: ‘ಜೋಗಿ’ ನಿರ್ಮಾಪಕರ ‘ಘಾರ್ಗಾ’ ಚಿತ್ರ ಬಿಡುಗಡೆಗೆ ರೆಡಿ
ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ
ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ
ಬೆಂಗಳೂರಿನಲ್ಲಿ ದಿಢೀರ್ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್!
ಬೆಂಗಳೂರಿನಲ್ಲಿ ದಿಢೀರ್ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್!
ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ
ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ
ಮುಳುಗುತ್ತಿದ್ದ ಇಬ್ಬರು ಯುವಕರನ್ನು ಕಾಪಾಡಿದ ಮಹಿಳಾ ಟ್ರಾಫಿಕ್ ಪೊಲೀಸ್
ಮುಳುಗುತ್ತಿದ್ದ ಇಬ್ಬರು ಯುವಕರನ್ನು ಕಾಪಾಡಿದ ಮಹಿಳಾ ಟ್ರಾಫಿಕ್ ಪೊಲೀಸ್
ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ
ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ
ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು