ಅನೈತಿಕ ಸಂಬಂಧ; ಪತ್ನಿ, ಇಬ್ಬರು ಮಕ್ಕಳನ್ನ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದವ​ ಅಂದರ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: May 01, 2024 | 6:35 PM

ಅವರದ್ದು ಸುಂದರ ಸಂಸಾರವಾಗಿತ್ತು. ಗಂಡ-ಹೆಂಡತಿ ಇಬ್ಬರು ಮುದ್ದಾದ ಮಕ್ಕಳು. ಸಲ್ಯೂನ್ ಶಾಪ್​ನಲ್ಲಿ ಆತ ಕೆಲಸ ಮಾಡುತ್ತ, ಸ್ವಂತದ ಮನೆಯಲ್ಲಿ ಒಳ್ಳೆಯ ಜೀವನ ಕಟ್ಟಿಕೊಂಡಿದ್ದ. ಆದರೆ, ಇಂತಹ ಸಂಸಾರದಲ್ಲಿ ಅದೊಬ್ಬಳ ಎಂಟ್ರಿ ಆಗಿತ್ತು. ಐಪಿಎಲ್ ಬೆಟ್ಟಿಂಗ್ ದಂಧೆ, ಸಾಕಷ್ಟು ಸಾಲ, ಜೊತೆಗೆ ಅನೈತಿಕ ಸಂಬಂಧ. ಹೀಗಾಗಿ ಕಟ್ಟಿಕೊಂಡ  ಪತ್ನಿಗೆ ಕೊಡಬಾರದ ಕಾಟ ಕೊಟ್ಟಿದ್ದ. ಅದು ವಿಕೋಪಕ್ಕೆ ತಿರುಗಿ ಜೀವನ ಪೂರ್ತಿ ನಿನ್ನ ಜೊತೆ ಇರುತ್ತೇನೆ ಎಂದಿದ್ದ ಪತ್ನಿಯನ್ನ ಹಾಗೂ ಪ್ರಪಂಚದ ಬಗ್ಗೆ ತಿಳುವಳಿಕೆ ಇಲ್ಲದ ಮುಗ್ದ ಮಕ್ಕಳನ್ನ ಕೂಡ ಭೀಕರವಾಗಿ ಹತ್ಯೆ ಮಾಡಿ ಎಸ್ಕೇಪ್​ ಆಗಿದ್ದ. ಇದೀಗ ಆರೋಪಿ ಹಾಗೂ ಅದಕ್ಕೆ ಸಹಕಾರ ನೀಡಿದ ಮಾವನನ್ನು ಪೊಲೀಸರು ಬಂಧಿಸಿದ್ದಾರೆ.

ಅನೈತಿಕ ಸಂಬಂಧ; ಪತ್ನಿ, ಇಬ್ಬರು ಮಕ್ಕಳನ್ನ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದವ​ ಅಂದರ್​
ಆರೋಪಿ ನರಸಿಂಹ, ಮೃತ ಯುವತಿ, ಮಗು
Follow us on

ಮಂಡ್ಯ , ಮೇ.01: ಪತ್ನಿಯನ್ನ ಹಾಗೂ ಪ್ರಪಂಚದ ಬಗ್ಗೆ ತಿಳುವಳಿಕೆ ಇಲ್ಲದ ಮುಗ್ದ ಮಕ್ಕಳನ್ನ ಭೀಕರವಾಗಿ ಹತ್ಯೆ ಮಾಡಿ ಎಸ್ಕೇಪ್​ ಆಗಿದ್ದ ಆರೋಪಿ ಹಾಗೂ ಅದಕ್ಕೆ ಸಹಕಾರ ನೀಡಿದ ಮಾವನನ್ನು ಪೊಲೀಸರು ಬಂಧಿಸಿದ್ದಾರೆ. ಹೌದು, ಏಪ್ರಿಲ್ 18 ರಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ(Nagamangala) ಭೀಕರವಾಗಿ ಮೂವರ ಹತ್ಯೆಯಾಗಿತ್ತು. ಎಲ್ಲರೂ ಚುನಾವಣಾ ಬ್ಯುಸಿಯಲ್ಲಿ ಇದ್ದರೇ. ಇದೊಂದು ವಿಚಾರ ಎಲ್ಲರನ್ನ ಆತಂಕಕ್ಕೆ ಒಳಗಾಗುವಂತೆ ಮಾಡಿತ್ತು. ನಾಗಮಂಗಲ ನಗರದಲ್ಲೇ ಸಲ್ಯೂನ್ ಶಾಪ್ ಇಟ್ಟುಕೊಂಡಿದ್ದ ನರಸಿಂಹ ಎಂಬಾತನ ಪತ್ನಿ ಕೀರ್ತನಾ(24), ಮಕ್ಕಳಾದ ಜಯಸಿಂಹ(4) ಹಾಗೂ ಒಂದೂವರೆ ವರ್ಷದ ರಿಷಿಕಾ ಕೊಲೆಯಾಗಿದ್ದರು.

ಈ ವಿಚಾರ ಇಡೀ ಮಂಡ್ಯ ಜಿಲ್ಲೆಯಲ್ಲೇ ಆತಂಕಕ್ಕೆ ಕಾರಣವಾಗಿತ್ತು. ಕ್ರೂರಿ ನರಸಿಂಹ ಏಪ್ರಿಲ್ 18ರಂದು ತನ್ನ ಸಲ್ಯೂನ್ ಶಾಪ್ ನಿಂದ ಮನೆಗೆ ಬಂದಿದ್ದ. ಮನೆಗೆ ಬರುವ ಮಾರ್ಗ ಮಧ್ಯೆ, ಕ್ರಿಮಿನಾಶಕ ಹಾಗೂ ಒಂದು ಲೀಟರ್ ನೀರು ತೆಗೆದುಕೊಂಡು ಅವರೆಡನ್ನು ಮಿಕ್ಸ್ ಮಾಡಿಕೊಂಡು ಮನೆಗೆ ಬಂದಿದ್ದ. ನರಸಿಂಹ ಮನೆಯಲ್ಲಿ ಮಟ ಮಟ ಮಧ್ಯಾಹ್ನವೇ ತನ್ನ ಹೆಂಡತಿಗೆ ಚೆನ್ನಾಗಿ ಥಳಿಸಿದ್ದ. ನಂತರ  ಚಾರ್ಜರ್ ವೈಯರ್​ನಿಂದ ಕತ್ತು ಬಿಗಿದು ಪತ್ನಿ ಮತ್ತು ಮನೆಯಲ್ಲೇ ಇದ್ದ ಒಂದೂವರೆ ವರ್ಷದ ಹೆಣ್ಣು ಮಗುವನ್ನ ಬಿಗಿದು ಕೊಲೆ ಮಾಡಿದ್ದ. ಬಳಿಕ ಸಮ್ಮರ್ ಕ್ಯಾಂಪ್​ಗೆಂದು ಹೋಗಿದ್ದ ತನ್ನ ನಾಲ್ಕು ವರ್ಷದ ಮಗುವನ್ನ ಮನೆಗೆ ಕರೆದುಕೊಂಡು ಬಂದು ಕೈಯಿಂದ ಕತ್ತು ಬಿಗಿದು ಹತ್ಯೆ ಮಾಡಿದ್ದ.

ಇದನ್ನೂ ಓದಿ:ಅತಿಥಿ ಉಪನ್ಯಾಸಕನ ಭೀಕರ ಹತ್ಯೆ; ಚೌಡಿ ಪೂಜೆ ಮಾಡಿ ಆಚೆ ಹೋದವ ಸೇರಿದ ಮಸಣ

ಮೂವರು ಸಾವನ್ನಪ್ಪಿದ್ದ ತದನಂತರ ವಿಷ ಮಿಶಿತ್ರ ನೀರನ್ನ ಬಾಯಿಗೆ ಹಾಕಿ, ತಾನು ಕುಡಿದು ನಾಟಕವಾಡಿದ್ದ. ಬಳಿಕ ಮನೆಗೆ ಹೋಗಿ ಎಷ್ಟು ಹೊತ್ತು ಆದರೂ ಶಾಪ್​ಗೆ ಬರಲಿಲ್ಲ ಎಂದು ಆರೋಪಿ ತಂದೆ ಸ್ವಾಮಿ ಕೂಡ ಮನೆಗೆ ಹೋಗಿದ್ದ. ಅಷ್ಟರಲ್ಲಿ ಆರೋಪಿ ನರಸಿಂಹ ಕೆಳಗೆ ಬಿದ್ದು ಒದ್ದಾಡುತ್ತಿರುವಂತೆ ನಾಟಕವಾಡಿದ್ದ. ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದರೂ ಉಳಿದ ಮೂವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಐದು ವರ್ಷದ ಹಿಂದೆ ಮದುವೆಯಾಗಿದ್ದ ಜೋಡಿ

ನಾಗಮಂಗಲದ ನರಸಿಂಹ ಹಾಗೂ ಮಂಡ್ಯ ತಾಲೂಕಿನ ಕಂಬದಹಳ್ಳಿ ಗ್ರಾಮದ ಕೀರ್ತಾನ ಐದು ವರ್ಷದ ಕೆಳಗೆ ವಿವಾಹವಾಗಿದ್ದರು. ಇಬ್ಬರಿಗೂ ಮುದ್ದಾದ ಮಕ್ಕಳು ಸಹ ಇದ್ದರು. ನಾಗಮಂಗಲ ನಗರದಲ್ಲೇ ಸ್ವಂತ ಮನೆ ಮಾಡಿಕೊಂಡು ಕಟ್ಟಿಂಗ್ ಶಾಪ್ ನಡೆಸುತ್ತಿದ್ದ. ಕೀರ್ತನಾ ತಂದೆ ಶಿವನಂಜಯ್ಯ ಕೂಡ ತನ್ನ ಕೈಲಾದ ಮಟ್ಟಿಗೆ ಕೀರ್ತನಾಳನ್ನ ಮದುವೆ ಮಾಡಿಕೊಟ್ಟಿದ್ದರು. ಪ್ರಾರಂಭದಲ್ಲಿ ಆಕೆಯ ಜೀವನ ಚೆನ್ನಾಗಿಯೇ ಇತ್ತು. ಆದರೆ, ಆನಂತರದಲ್ಲಿ ಕೈತುಂಬ ಸಾಲ ಮಾಡಿಕೊಂಡಿದ್ದ ನರಸಿಂಹ, ಹಣಕ್ಕಾಗಿ ಪೀಡಿಸಲು ಪ್ರಾರಂಭಿಸಿದ್ದ. ಇದೇ ವಿಚಾರಕ್ಕೆ ಬಹಳಷ್ಟು ಬಾರಿ
ಗಲಾಟೆ ನಡೆದಿತ್ತು. ಈ ಮಧ್ಯೆ ಐಪಿಎಲ್ ಬೆಟ್ಟಿಂಗ್ ದಂಧೆಗೆ ಬಿದ್ದಿದ್ದ ನರಸಿಂಹ ಮತ್ತಷ್ಟು ಸಾಲ ಮಾಡಿಕೊಂಡಿದ್ದ. ಹೀಗಾಗಿ ಪದೇ ಪದೇ ದುಡ್ಡಿಗಾಗಿ ಪೀಡಿಸಲು ಪ್ರಾರಂಭಿಸಿದ್ದ.

ಈ ಮಧ್ಯೆ ಮಂಡ್ಯ ಮೂಲದ ಯುವತಿಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದನಂತೆ. ಕೆಲ ದಿನಗಳ ನಂತರ ಈ ವಿಚಾರ ಕೀರ್ತನಾಳಿಗೆ ಗೊತ್ತಾಗಿ, ಗಲಾಟೆ ನಡೆಯುತ್ತಿತ್ತು. ಗಲಾಟೆ ಮಧ್ಯೆದಲ್ಲಿ ಆ ಯುವತಿಯನ್ನ ನರಸಿಂಹ ಮನೆಗೆ ಕರೆದುಕೊಂಡು ಬರುತ್ತಿದ್ದ. ಹೀಗಾಗಿ ಗಂಡನಿಗೆ ತರಾಟೆ ತೆಗೆದುಕೊಂಡಿದ್ದಳು. ಇದೇ ವಿಚಾರವಾಗಿ ಆರೋಪಿ ನರಸಿಂಹ ಏಪ್ರಿಲ್ 18 ರಂದು ಮೂವರನ್ನು ಹತ್ಯೆ ಮಾಡಿದ್ದಾನೆ. ಪ್ರಕರಣ ಸಂಬಂಧ ನಾಗಮಂಗಲ ಟೌನ್ ಠಾಣೆ ಪೊಲೀಸರು ಆರೋಪಿ ನರಸಿಂಹ ಹಾಗೂ ಆತನ ತಂದೆ ಸ್ವಾಮಿ ಎಂಬಾತನನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:32 pm, Wed, 1 May 24