ನಾಗಮಂಗಲದಲ್ಲಿ ಮತ್ತೊಂದು ವರ್ಗಾವಣೆ: ಜೆಡಿಎಸ್​ ಪರ ಕೆಲಸ ಮಾಡಿದ್ದಕ್ಕೆ ಲೈನ್​ಮ್ಯಾನ್ ​ಟ್ರಾನ್ಸ್ಫರ್​

| Updated By: ವಿವೇಕ ಬಿರಾದಾರ

Updated on: Jul 14, 2023 | 1:19 PM

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್​ ಪರ ಕೆಲಸ ಮಾಡಿದ್ದಕ್ಕೆ ಕೆಎಸ್​ಆರ್​ಟಿಸಿ ಬಸ್​ ಚಾಲಕ ಕಂ ನಿರ್ವಾಹಕ ಜಗದೀಶ್​​ ಅವರ ವರ್ಗಾವಣೆ ಪ್ರಕ್ರಣ ಮಾಸುವ ಮುನ್ನವೇ ನಾಗಮಂಗಲದಲ್ಲಿ ಮೊತ್ತೊಂದು ವರ್ಗಾವಣೆ ಸದ್ದು ಮಾಡಿದೆ.​​

ನಾಗಮಂಗಲದಲ್ಲಿ ಮತ್ತೊಂದು ವರ್ಗಾವಣೆ: ಜೆಡಿಎಸ್​ ಪರ ಕೆಲಸ ಮಾಡಿದ್ದಕ್ಕೆ ಲೈನ್​ಮ್ಯಾನ್ ​ಟ್ರಾನ್ಸ್ಫರ್​
ಸಾಂದರ್ಭಿಕ ಚಿತ್ರ
Follow us on

ಮಂಡ್ಯ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ (JDS)​ ಪರ ಕೆಲಸ ಮಾಡಿದ್ದಕ್ಕೆ ಕೆಎಸ್​ಆರ್​ಟಿಸಿ (KSRTC) ಬಸ್​ ಚಾಲಕ ಕಂ ನಿರ್ವಾಹಕ ಜಗದೀಶ್​​ ಅವರನ್ನು ವರ್ಗಾವಣೆ ಮಾಸುವ ಮತ್ತೊಂದು ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿದೆ. ಹೌದು ತಮ್ಮ ಪಕ್ಷದ ಪರ ಕೆಲಸ ಮಾಡಿದ್ದಕ್ಕೆ ಲೈನ್​ಮ್ಯಾನ್ (Lineman) ಓರ್ವನನ್ನು ವರ್ಗಾವಣೆ ಮಾಡಲಾಗಿದೆ ಎಂದು ಜೆಡಿಎಸ್​​ ಆಡಿಯೋ ಬಹಿರಂಗಪಡಿಸಿದೆ.

ನಾಗಮಂಗಲ ತಾಲೂಕಿನ ಕೃಷ್ಣೇಗೌಡ ಎಂಬವರು ಕೆಇಬಿ ಸಿಬ್ಬಂದಿಗೆ ಕರೆ ಮಾಡಿ ಪದೇ ಪದೆ ಕರೆಂಟ್ ತೆಗೆಯುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಕರೆಂಟ್ ಪದೇ ಪದೆ ಹೋಗ್ತಿದೆ, ಮಕ್ಕಳು ಓದೋದು ಬೇಡ್ವಾ? ಗಂಟೆಗಟ್ಟಲೇ ಕರೆಂಟ್ ತೆಗೆದರೆ ಹೇಗೆ ಎಂದು ಕೃಷ್ಣೇಗೌಡ ಪ್ರಶ್ನಿಸಿದ್ದಾರೆ. ಒಬ್ಬ ಲೈನ್​ಮ್ಯಾನ್​​ ರಜೆ ಇದ್ದಾನೆ, ಇನ್ನೊಬ್ಬರ ವರ್ಗಾವಣೆ ಆಗಿದೆ. ಭೀಮನಹಳ್ಳಿಯ ಲೈನ್​ಮ್ಯಾನ್​​​ ವರ್ಗಾವಣೆ ಮಾಡಲಾಗಿದೆ. ಜೆಡಿಎಸ್​ ಪರ ಕೆಲಸ ಮಾಡಿದ್ದಕ್ಕೆ ವರ್ಗಾವಣೆ ಆಗಿದೆ. ಜೆಎಡಿಸ್​​​​​​ ಪರ ಇದ್ದವರು ಕೆಲಸದಲ್ಲಿ ಇರಂಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕೆಎಸ್​ಆರ್​ಟಿಸಿ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣ; ಸಚಿವ ಚಲುವರಾಯಸ್ವಾಮಿ ವಿಷಯಾಂತರ ಮಾಡುತ್ತಿದ್ದಾರೆಂದ ಸುರೇಶ್ ​ಗೌಡ

ಇದಕ್ಕೆ ಜೆಡಿಎಸ್​​​ ಆಗಲಿ, ಕಾಂಗ್ರೆಸ್ ಆಗಲಿ ಕರೆಂಟ್ ಕೊಡಬೇಕಲ್ಲ ಎಂದು ಕೃಷ್ಣೇಗೌಡ ಹೇಳಿದರು. ಪ್ರತಿಯಾಗಿ ಅಧಿಕಾರಿಗಳ ಬಳಿ ಇದನ್ನು ನಾವು ಕೇಳೋಕೆ ಆಗುತ್ತಾ ಎಂದು ಸಿಬ್ಬಂದಿ ಉತ್ತರಿಸಿದ್ದಾನೆ. ಕೊನೆಗೆ ಕೃಷ್ಟಣೇಗೌಡ ಫೋನ್ ಸಂಭಾಷಣೆ ರೆಕಾರ್ಡ್​ ಮಾಡಿದ್ದೇನೆ ಇದನ್ನು ಫೇಸ್​​ಬುಕ್​ಗೆ ಹಾಕುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ