ಕೆಎಸ್​ಆರ್​ಟಿಸಿ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣ; ಸಚಿವ ಚಲುವರಾಯಸ್ವಾಮಿ ವಿಷಯಾಂತರ ಮಾಡುತ್ತಿದ್ದಾರೆಂದ ಸುರೇಶ್ ​ಗೌಡ

ರೋಗಿಯನ್ನು ನೋಡಬಹುದು ಎಂದಿದ್ದಕ್ಕೆ ನಾನು ನೋಡಿದ್ದೇನೆ. ಮಾನವೀಯತೆಯಿಂದ ಆತನನ್ನು ನೋಡಿದ್ದೇನೆಯೇ ಹೊರತು ಬೇರೇನಿಲ್ಲ ಸುರೇಶ್​​ ಗೌಡ ಹೇಳಿದ್ದಾರೆ.

ಕೆಎಸ್​ಆರ್​ಟಿಸಿ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣ; ಸಚಿವ ಚಲುವರಾಯಸ್ವಾಮಿ ವಿಷಯಾಂತರ ಮಾಡುತ್ತಿದ್ದಾರೆಂದ ಸುರೇಶ್ ​ಗೌಡ
ಸುರೇಶ್ ​ಗೌಡ
Follow us
| Updated By: ಗಣಪತಿ ಶರ್ಮ

Updated on: Jul 11, 2023 | 4:21 PM

ಮಂಡ್ಯ: ಕೆಎಸ್​ಆರ್​ಟಿಸಿ (KSRTC) ಚಾಲಕ ಜಗದೀಶ್​​ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಆ್ಯಂಬುಲೆನ್ಸ್​ ತಡೆದಿರುವ ಆರೋಪವನ್ನು ಮಾಜಿ ಶಾಸಕ ಸುರೇಶ್ ಗೌಡ ಅಲ್ಲಗಳೆದಿದ್ದಾರೆ. ಈ ವಿಚಾರವಾಗಿ ಸಚಿವ ಚಲುವರಾಯಸ್ವಾಮಿ ವಿಷಯಾಂತರ ಮಾಡಲು ಯತ್ನಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ‘ಟಿವಿ9’ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಆ್ಯಂಬುಲೆನ್ಸ್​ ತಡೆದಿದ್ದರೆ ತನಿಖೆ ಮಾಡಲಿ. ನಾನು ಆ್ಯಂಬುಲೆನ್ಸ್​​ ತಡೆದಿಲ್ಲ, ನಾನೇ ಯೋಗಕ್ಷೇಮ ವಿಚಾರಿಸಿದೆ. ವಿಡಿಯೋ ವೈರಲ್ ಆಗಿರುವುದರ ಹಿಂದೆ ಚಲುವರಾಯಸ್ವಾಮಿ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಪ್ರಕರಣ ಬಗ್ಗೆ ಸರ್ಕಾರ ಈಗ ಯಾವುದೋ ತನಿಖೆ ಮಾಡಿಸುತ್ತಿದೆ. ಪೊಲೀಸರ ಬಳಿ ಇದ್ದ ಸಿಸಿಟಿವಿ ದೃಶ್ಯ ಯಾಕೆ ವೈರಲ್ ಆಯಿತು? ಚಲುವರಾಯಸ್ವಾಮಿ ವಿಷಯವನ್ನು ಡೈವರ್ಟ್ ಮಾಡುತ್ತಿದ್ದಾರೆ. ಜಗದೀಶ್​ ಕುಟುಂಬದ ಪರ ನಾವಿದ್ದೆವು. ಜಗದೀಶ್​​ ವರ್ಗಾವಣೆ ಪತ್ರ ಹಾಗೂ ಡೆತ್​ನೋಟ್ ಏನಾಯ್ತು? ಪೊಲೀಸರು ಯಾಕೆ ಆ ಡೆತ್​ನೋಟ್​ ವಶಪಡಿಸಿಕೊಂಡಿಲ್ಲ ಎಂದು ಸುರೇಶ್ ಗೌಡ ಪ್ರಶ್ನಿಸಿದ್ದಾರೆ.

ರೋಗಿಯನ್ನು ನೋಡಬಹುದು ಎಂದಿದ್ದಕ್ಕೆ ನಾನು ನೋಡಿದ್ದೇನೆ. ಮಾನವೀಯತೆಯಿಂದ ಆತನನ್ನು ನೋಡಿದ್ದೇನೆಯೇ ಹೊರತು ಬೇರೇನಿಲ್ಲ ಸುರೇಶ್​​ ಗೌಡ ಹೇಳಿದ್ದಾರೆ.

ಇದನ್ನೂ ಓದಿ: ಮಂಡ್ಯ: ಮಾಜಿ ಶಾಸಕ ಚಲುವರಾಯಸ್ವಾಮಿ ಮತ್ತು ಶಾಸಕ ಸುರೇಶ್ ಗೌಡ ನಡುವೆ ಟಾಕ್ ಫೈಟ್

ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕ ಜಗದೀಶ್ ಅವರನ್ನು ಜುಲೈ 6 ರಂದು ಬಿಜಿಎಸ್ ಆಸ್ಪತ್ರೆಯಿಂದ ಹೆಚ್ಚುವರಿ ಚಿಕಿತ್ಸೆಗೆ ಮೈಸೂರಿನ ಕೊಲಂಬಿಯಾ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಇದೇ ವೇಳೆ ಸುರೇಶ್ ಗೌಡ ಆ್ಯಂಬುಲೆನ್ಸ್ ತಡೆದಿದ್ದರು ಎಂದು ಸಚಿವ ಚೆಲುವರಾಯಸ್ವಾಮಿ ಆರೋಪಿಸಿದ್ದರು. ನಂತರ ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ