ಕೆಎಸ್ಆರ್ಟಿಸಿ ಬಸ್ ಚಾಲಕ ಆತ್ಮಹತ್ಯೆಗೆ ಯತ್ನ ಪ್ರಕರಣ: ಅಂಬುಲೆನ್ಸ್ ಅಡ್ಡಗಟ್ಟಿದ ವಿಡಿಯೋ ಬಹಿರಂಗ
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರವ ಕೆಎಸ್ಆರ್ಟಿಸಿ ಬಸ್ ಚಾಲಕ ಕಂ ನಿರ್ವಾಹಕ ಜಗದೀಶ್ರನ್ನು ಜು.6 ರಂದು ಬಿಜಿಎಸ್ ಆಸ್ಪತ್ರೆಯಿಂದ ಹೆಚ್ಚುವರಿ ಚಿಕಿತ್ಸೆಗೆ ಮೈಸೂರಿನ ಕೊಲಂಬಿಯಾ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ತಡೆದಿರುವ ವಿಡಿಯೋ ಬಹಿರಂಗವಾಗಿದೆ.
ಮಂಡ್ಯ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರವ ಕೆಎಸ್ಆರ್ಟಿಸಿ (KSRTC) ಬಸ್ ಚಾಲಕ ಕಂ ನಿರ್ವಾಹಕ ಜಗದೀಶ್ರನ್ನು ಜು.6 ರಂದು ಬಿಜಿಎಸ್ ಆಸ್ಪತ್ರೆಯಿಂದ (BGS Hospital) ಹೆಚ್ಚುವರಿ ಚಿಕಿತ್ಸೆಗೆ ಮೈಸೂರಿನ (Mysore) ಕೊಲಂಬಿಯಾ ಆಸ್ಪತ್ರೆಗೆ (Hospital) ಕರೆದೊಯ್ಯಲಾಗುತ್ತಿತ್ತು. ಈ ವೇಳೆ ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ತಡೆದಿದ್ದರು ಎಂದು ಸಚಿವ ಚೆಲುವರಾಯಸ್ವಾಮಿ ಆರೋಪಿಸಿದ್ದರು. ಇದೀಗ ಮಾಜಿ ಶಾಸಕ ಸುರೇಶ್ ಗೌಡ ಆಂಬುಲೆನ್ಸ್ ತಡೆದಿರುವ ವಿಡಿಯೋ ಲಭ್ಯವಾಗಿದೆ.
ಮಾಜಿ ಶಾಸಕ ಸುರೇಶ್ ಗೌಡ ಹಾಗೂ ಅವರ ಬೆಂಬಲಿಗರು ನಾಗಮಂಗಲ ಪಟ್ಟಣದ ಟಿ.ಬಿ. ಬಡಾವಣೆ ಸರ್ಕಲ್ ಬಳಿ ಕೆಲವು ಕ್ಷಣ ಆಂಬುಲೆನ್ಸ್ ನಿಲ್ಲಿಸಿ ಜಗದೀಶ್ ಅವರಿಗೆ ಇಲ್ಲೇ ಚಿಕಿತ್ಸೆ ಕೊಡಿಸಲು ಆಗುವುದಿಲ್ಲವೇ ಎಂದು ವೈದ್ಯರಿಗೆ ಪ್ರಶ್ನಿಸಿದ್ದಾರೆ.
ಜುಲೈ 6 ರ ಮಧ್ಯರಾತ್ರಿ 1.6 ನಿಮಿಷದಲ್ಲಿ ಕೆಲವು ಸಕೆಂಡ್ ವಾಹನ ನಿಲ್ಲಿಸಿ ಡ್ರೈವರ್ ಮುಖ ನೋಡಿದ್ದು ನಿಜಾ ಎಂದು ಮಾಜಿ ಶಾಸಕ ಸುರೇಶ್ ಗೌಡ ಒಪ್ಪಿಕೊಂಡಿದ್ದರು. ಆತ ನಮ್ಮ ಪಕ್ಷದ ಪರವಾಗಿ ಕಳೆದ 20 ವರ್ಷಗಳಿಂದ ಕೆಲಸ ಮಾಡಿದ್ದಾನೆ. ಆತನ ಚಿಕಿತ್ಸೆಗೆ ನಾನು ಅಡ್ಡಿ ಪಡೆಸುತ್ತೇನಾ ಎಂದಿದ್ದರು. ಇದನ್ನೇ ಸಚಿವ ಚೆಲುವರಾಯಸ್ವಾಮಿ ಅವರು ವಾಹನ ತಡೆದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:12 am, Tue, 11 July 23