ಕೆಆರ್​ಎಸ್​ ಖಾಲಿ ಖಾಲಿ; ತಮಿಳುನಾಡಿಗೆ ಕಾವೇರಿ ನೀರು ಬಿಟ್ಟರೆ ರಾಜ್ಯಕ್ಕೆ ಉಳಿಯುವುದೆಷ್ಟು? ಇಲ್ಲಿದೆ ಅಂಕಿ-ಅಂಶ

| Updated By: ಆಯೇಷಾ ಬಾನು

Updated on: Sep 20, 2023 | 11:07 AM

ಕೆಆರ್​ಎಸ್ ಜಲಾಶಯದಿಂದ ಕದ್ದು ಮುಚ್ಚಿ ನೀರು ಹರಿಸಲಾಗುತ್ತಿದೆ ಎನ್ನಲಾಗುತ್ತಿದೆ. ರಾಜ್ಯ ಸರ್ಕಾರ ನಾವು ನೀರು ಬಿಡುತಿಲ್ಲ ಎಂದು ಹೇಳಿದೆ. ಆದರೆ ಜಲಾಶಯದ ನೀರು ದಿನೇ ದಿನೆ ಕುಸಿಯುತ್ತಿದೆ. ಅಲ್ಲದೆ ಅಧಿಕಾರಿಗಳು‌ ಕೊಟ್ಟಿರುವ ಅಂಕಿ ಅಂಶ ಹಲವು ಅನುಮಾನಕ್ಕೆ ಕಾರಣವಾಗಿದೆ. ಹಾಗಾದ್ರೆ ಬನ್ನಿ ಕೆಆರ್​ಎಸ್​ನಲ್ಲಿ ಸದ್ಯ ಎಷ್ಟು ನೀರಿದೆ? ತಮಿಳುನಾಡಿಗೆ ಹರಿಬಿಟ್ಟ ನೀರನ್ನು ಹೊರತುಪಡಿಸಿದರೆ ರಾಜ್ಯಕ್ಕೆ ಎಷ್ಟು ನೀರು ಸಿಗುತ್ತದೆ ಇಲ್ಲಿ ತಿಳಿಯಿರಿ.

ಕೆಆರ್​ಎಸ್​ ಖಾಲಿ ಖಾಲಿ; ತಮಿಳುನಾಡಿಗೆ ಕಾವೇರಿ ನೀರು ಬಿಟ್ಟರೆ ರಾಜ್ಯಕ್ಕೆ ಉಳಿಯುವುದೆಷ್ಟು? ಇಲ್ಲಿದೆ ಅಂಕಿ-ಅಂಶ
ಕೆಆರ್​ಎಸ್​ ಡ್ಯಾಂ (ಸಂಗ್ರಹ ಚಿತ್ರ)
Follow us on

ಮಂಡ್ಯ, ಸೆ.20: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ಪ್ರತಿನಿತ್ಯ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್​ ನೀರು ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ. ಆದರೆ, ಇತ್ತ ಕೆಆರ್​ಎಸ್​ ಜಲಾಶಯದ(KRS Dam) ನೀರಿನ ವಾಸ್ತವ ಅಂಶ ನೋಡಿದರೆ ಮುಂದಿನ ದಿನಗಳಲ್ಲಿ ಕಾವೇರಿ ಪ್ರದೇಶದ ರೈತರಿಗೆ ನೀರಿನ ಹಾಹಾಕಾರ ಎದುರಾಗುವ ಭೀತಿ ಕಾಡುತ್ತಿದೆ.ತಮಿಳುನಾಡಿಗೆ ಕೆಆರ್​ಎಸ್ ಜಲಾಶಯದಿಂದ ಕದ್ದು ಮುಚ್ಚಿ ನೀರು ಹರಿಸಲಾಗುತ್ತಿದೆ ಎನ್ನಲಾಗುತ್ತಿದೆ. ರಾಜ್ಯ ಸರ್ಕಾರ(State Government) ನಾವು ನೀರು ಬಿಡುತಿಲ್ಲ ಎಂದು ಹೇಳಿದೆ. ಆದರೆ ಜಲಾಶಯದ ನೀರು ದಿನೇ ದಿನೆ ಕುಸಿಯುತ್ತಿದೆ. ಅಲ್ಲದೆ ಅಧಿಕಾರಿಗಳು‌ ಕೊಟ್ಟಿರುವ ಅಂಕಿ ಅಂಶ ಹಲವು ಅನುಮಾನಕ್ಕೆ ಕಾರಣವಾಗಿದೆ. ಹಾಗಾದ್ರೆ ಬನ್ನಿ ಕೆಆರ್​ಎಸ್​ನಲ್ಲಿ ಸದ್ಯ ಎಷ್ಟು ನೀರಿದೆ? ತಮಿಳುನಾಡಿಗೆ ಹರಿಬಿಟ್ಟ ನೀರನ್ನು ಹೊರತುಪಡಿಸಿದರೆ ರಾಜ್ಯಕ್ಕೆ ಎಷ್ಟು ನೀರು ಸಿಗುತ್ತದೆ ಇಲ್ಲಿ ತಿಳಿಯಿರಿ.

ತಮಿಳುನಾಡಿಗೆ ನೀರು ಬಿಟ್ಟರೆ ರಾಜ್ಯಕ್ಕೆ ಉಳಿಯುವುದೆಷ್ಟು?

ಕೆಆರ್​ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ದಿನೇ ದಿನೇ ಕುಸಿಯುತ್ತಿದೆ. ಡ್ಯಾಂ ಖಾಲಿಯಾಗುತ್ತಿದೆ. ಸದ್ಯ ಈಗ ಕೇವಲ 20 ಟಿಎಂಸಿ ನೀರು ಮಾತ್ರ ಜಲಾಶಯದಲ್ಲಿ ಸಂಗ್ರಹವಾಗಿದೆ. ಗರಿಷ್ಠ 49 TMC ನೀರಿದ್ದು ಅದರಲ್ಲಿ 5 ಟಿಎಂಸಿ ನೀರು ಡೆಡ್ ಸ್ಟೋರೇಜ್. ಇದರಿಂದ ಬಳಕೆಗೆ ಇರುವಂತಹದು 15 ಟಿಎಂಸಿ ನೀರು ಮಾತ್ರ. ಪ್ರಾಧಿಕಾರ ಆದೇಶ ಪಾಲನೆ ಮಾಡಿದರೆ 7-8 ಟಿಎಂಸಿ ನೀರು ಖಾಲಿಯಾಗಲಿದೆ. ಇದರಿಂದ ಮುಂದಿನ ಮೇ ವರೆಗೆ ಕೇವಲ 7-8 ಟಿಎಂಸಿ ನೀರು ಮಾತ್ರ ಲಭ್ಯವಾಗುತ್ತದೆ. ವಾಸ್ತವ ಅಂಕಿ ಅಂಶದ ಪ್ರಕಾರ ಮುಂದಿನ ಮೇ ತಿಂಗಳ ವರೆಗೆ ಕೃಷಿ ಹೊರತುಪಡಿಸಿ, ಕುಡಿಯುವ ನೀರಿಗೆ 35 ಟಿಎಂಸಿಯಷ್ಟು ನೀರು ಬೇಕಾಗಿದೆ. ಅದರಲ್ಲೂ ಬೆಂಗಳೂರು ನಗರಕ್ಕೆ 20 ಟಿಎಂಸಿಗೂ ಹೆಚ್ಚು ನೀರು ಬೇಕಾಗಿದೆ. ಹೀಗಾಗಿ ಇದೇ ರೀತಿ ತಮಿಳುನಾಡಿಗೆ ನೀರು ಹರಿಸಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಆತಂಕ ಎದುರಾಗಿದೆ.

ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ಬೆಂಬಲ ನೀಡದ ಚಿತ್ರ ನಟರ ವಿರುದ್ಧ ಸಿಡಿದೆದ್ದ ಮಂಡ್ಯ ರೈತರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಪೋಸ್ಟ್

ಕೆಆರ್​ಎಸ್​ನಲ್ಲಿ ಸದ್ಯ ನೀರು ಎಷ್ಟಿದೆ?

ಕೃಷ್ಣರಾಜಸಾಗರ ಜಲಾಶಯದ ಇಂದಿನ ನೀರಿನ ಮಟ್ಟ 97.08 ಅಡಿ. ಕೆಆರ್​ಎಸ್​ ಜಲಾಶಯದ ಗರಿಷ್ಠಮಟ್ಟ 124.80 ಅಡಿ. ಒಳಹರಿವು 6016 ಕ್ಯೂಸೆಕ್, ಹೊರಹರಿವು 5735 ಕ್ಯೂಸೆಕ್ ಇದೆ. ಇನ್ನು ನಾಲೆಗಳಿಗೂ ಸೇರಿ ಟಿಎಂಸಿ ಲೆಕ್ಕದಲ್ಲಿ ಗರಿಷ್ಠ 49.452 ಹಾಗೂ ಇಂದು 20.60 ಟಿಎಂಸಿ ನೀರು ಸಂಗ್ರಹವಾಗಿದೆ.

ಮಂಡ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ