AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವೇರಿ ಹೋರಾಟಕ್ಕೆ ಬೆಂಬಲ ನೀಡದ ಚಿತ್ರ ನಟರ ವಿರುದ್ಧ ಸಿಡಿದೆದ್ದ ಮಂಡ್ಯ ರೈತರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಪೋಸ್ಟ್

ಮಂಡ್ಯದಲ್ಲಿ ಸ್ಯಾಂಡಲ್ ವುಡ್ ನಟರ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದೆ. ಕಾವೇರಿ ಹೋರಾಟಕ್ಕೆ ಬೆಂಬಲ ನೀಡದ ಹಿನ್ನೆಲೆ ಚಿತ್ರ ನಟರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಧಿಕ್ಕಾರದ ಪೋಸ್ಟ್​ಗಳನ್ನು ಹಾಕಿ ಮಂಡ್ಯ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಕಾವೇರಿ ಬಗ್ಗೆ ಧ್ವನಿ ಎತ್ತದ ಕನ್ನಡ ಚಲನಚಿತ್ರ ನಟರಿಗೆ ಧಿಕ್ಕಾರ ಧಿಕ್ಕಾರ ಎಂದು ಫೇಸ್ ಬುಕ್, ವಾಟ್ಸ್ ಆಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿದಾಡುತ್ತಿವೆ.

ಪ್ರಶಾಂತ್​ ಬಿ.
| Edited By: |

Updated on:Sep 20, 2023 | 11:13 AM

Share

ಮಂಡ್ಯ, ಸೆ.20: ಕಾವೇರಿ ನೀರು ಸಂಕಷ್ಟ(Cauvery Water Dispute) ಕುರಿತು ಸಿಎಂ ಸಿದ್ದರಾಮಯ್ಯ(Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್(DK Shivakumar) ಅವರು ದೆಹಲಿಯ ತಾಜ್ ಹೋಟೆಲ್​ನಲ್ಲಿ ಸಭೆ ನಡೆಸುತ್ತಿದ್ದಾರೆ. ಆದರೆ ಇತ್ತ ಮಂಡ್ಯದಲ್ಲಿ ಸ್ಯಾಂಡಲ್ ವುಡ್ ನಟರ ವಿರುದ್ಧ ರೈತರ(Farmers) ಆಕ್ರೋಶ ಭುಗಿಲೆದ್ದಿದೆ. ಕಾವೇರಿ ಹೋರಾಟಕ್ಕೆ ಬೆಂಬಲ ನೀಡದ ಹಿನ್ನೆಲೆ ಚಿತ್ರ ನಟರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಧಿಕ್ಕಾರದ ಪೋಸ್ಟ್​ಗಳನ್ನು ಹಾಕಿ ಮಂಡ್ಯ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಕಾವೇರಿ ಬಗ್ಗೆ ಧ್ವನಿ ಎತ್ತದ ಕನ್ನಡ ಚಲನಚಿತ್ರ ನಟರಿಗೆ ಧಿಕ್ಕಾರ ಧಿಕ್ಕಾರ ಎಂದು ಫೇಸ್ ಬುಕ್, ವಾಟ್ಸ್ ಆಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿದಾಡುತ್ತಿವೆ. ಪ್ರಮುಖ ನಟರ ಫೋಟೋ ಹಾಕಿ, ನಟರ ಬಾಯಿಗೆ ಪಟ್ಟಿ ಅಂಟಿಸಿ ಅಸಮಾಧಾನ ಹೊರ ಹಾಕಲಾಗುತ್ತಿದೆ.

ಡಾ.ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರಿಗೆ ಕನ್ನಡ ನಾಡಿನ ರೈತರಿಗೆ ಅನ್ಯಾಯ ಆದಾಗ ಮುನ್ನುಗ್ಗಿ ಬರುವ ಶಕ್ತಿ ಅವರಿಗಿತ್ತು ಎಂದು ದಿ.ನಟರನ್ನು ಸ್ಮರಿಸಲಾಗಿದೆ. ಆದರೆ ಇಂದು ಯಾವ ನಟರೂ ಕಾವೇರಿ ಬಗ್ಗೆ ಧ್ವನಿ ಎತ್ತದೇ ಇರೋದು ಬಹಳ ನೋವಿನ ಸಂಗತಿ. ನಮ್ಮಿಂದ ನಟರೇ ಹೊರತು, ನಟರಿಂದ ನಾವಲ್ಲ ಅನ್ನೋ ಸತ್ಯ ಅರಿಯಬೇಕು. ಇಂತಹ ನಿರ್ಲಕ್ಷ್ಯ ನಟರನ್ನ ನಂಬದೆ ಎಲ್ಲಾ ಕನ್ನಡಿಗರು ರೈತರ ಪರ ನಿಲ್ಲಬೇಕು. ರೈತ ಉಳಿದರೆ ನಾವೆಲ್ಲ, ರೈತನಿಲ್ಲದೆ ಜಗವಿಲ್ಲ. ನಮ್ಮ ನಿರಂತರ ಹೋರಾಟ ಕಾವೇರಿಗಾಗಿ ಎಂದು ಪೋಸ್ಟ್​ಗಳನ್ನು ಹಾಕಲಾಗಿದೆ.

ಇದನ್ನೂ ಓದಿ: ಕದ್ದು ಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದ್ಯಾ? ಅನುಮಾನ ಮೂಡಿಸಿದ ಅಧಿಕಾರಿಗಳ ಅಂಕಿ-ಅಂಶ

ರೈತರನ್ನ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ

ಇನ್ನು ಈ ಬಗ್ಗೆ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕುತ್ತೊದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಇಂತಹ ಆದೇಶ ಹೊರಡಿಸಿರುವುದು ಖಂಡನೀಯ. ರಾಜ್ಯದ ಜನರಿಗೆ ಬಗೆದಿರುವ ದ್ರೋಹ. ವಸ್ತುಸ್ಥಿತಿ ಅರಿಯದೇ ಆದೇಶ ಮಾಡಿರುವುದು ಅನ್ಯಾಯ. ಪ್ರಾಧಿಕಾರ ಆದೇಶದವನ್ನ ಹಿಂಪಡೇಯಬೇಕು. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡಬಾರದು. ರೈತರ ಹೋರಾಟ ಸರ್ಕಾರಕ್ಕೆ ಕಾಣುತ್ತಿಲ್ಲವೇ? ರೈತರನ್ನ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ. ಸರ್ಕಾರ ಏನು ಮಾಡುತ್ತಿದೆ? ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನಗಳನ್ನ ಕಾಂಗ್ರೆಸ್ ಗೆದ್ದಿದೆ. ಸಿನಿಮಾದವರಿಗೆ ಬೇಕಾಗಿರುವುದು ನೀರಲ್ಲ. ಸಿನಿಮಾ ಯಶಸ್ವಿಯಾಗಬೇಕು ಹಣ ಬರಬೇಕು. ಅವರಿಗೆ ಅಷ್ಟೇ ಬೇಕಾಗಿರುವುದು. ಕಾವೇರಿ ನೀರು ಸಿಗದೇ ಇದ್ದರೂ, ರೈತರು ಸಿನಿಮಾ ನೋಡಬೇಕು ಅಷ್ಟೇ. ರೈತರು ಮಾತ್ರ ಹೋರಾಟ ಮಾಡಬೇಕು. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಬಂದು ಪ್ರಚಾರ ಮಾಡುತ್ತಾರೆ ಸಿನಿಮಾ ನಟರು. ಆದರೆ ರೈತರ ರಕ್ಷಣೆಗೆ ಮಾತ್ರ ನಿಲ್ಲುವುದಿಲ್ಲ ಎಂದು ಸಿನಿಮಾ ನಟರ ವಿರುದ್ದ ರೈತರು ವಾಗ್ದಾಳಿ ನಡೆಸಿದ್ದಾರೆ.

ಕಾವೇರಿ ವಿಚಾರವಾಗಿ ನಟ ಜಗ್ಗೇಶ್ ಟ್ವೀಟ್

ನಾನು ಕನ್ನಡ ಚಿತ್ರರಂಗದಲ್ಲಿ 42 ವರ್ಷಕಾಲ ಸೇವೆ ಸಲ್ಲಿಸಿ ಕನ್ನಡಿಗರ ಪ್ರೀತಿ ಅಭಿಮಾನಕ್ಕೆ ಪಾತ್ರನಾಗಿದ್ದೇನೆ. ತಿಂಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರ ಕರೆದಿದ್ದ ಸರ್ವ ಪಕ್ಷ ಸಭೆಗೆ ಹಾಜರಾಗಿ ಮುಖ್ಯಮಂತ್ರಿಗಳು ಹಾಗೂ ಡಿಸಿಎಂ ಡಿಕೆಶಿ ರವರ ಮುಂದೆ ಕಾವೇರಿ ನದಿಯ ನೀರಿನ ವಿಚಾರವಾಗಿ ನಮ್ಮ ಬೆಂಬಲ ಸದಾ ಕನ್ನಡಿಗರ ಪರವಾಗಿಯೇ ಇದೆ ಎಂದು ತಿಳಿಸಿ ಬಂದಿದ್ದೆ. ದೆಹಲಿಯಲ್ಲಿ ಕರ್ನಾಟಕ ಸರ್ವಪಕ್ಷ ಸಭೆ ಆಯೋಜಿಸಲಾಗಿದೆ ಅದರಲ್ಲೂ ಭಾಗಿಯಾಗಿ “ಕಾವೇರಿ ನದಿಯ” ಪರವಾಗಿ ಹಾಗೂ ಕನ್ನಡದ ರೈತರ ಪರವಾಗಿ ನನ್ನ ಧ್ವನಿಯನ್ನು ಪ್ರಸ್ತಾಪಿಸುತ್ತೇನೆ ಎಂದು ನಟ ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:34 am, Wed, 20 September 23

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ