ಶಾಸಕ ಡಿ ಸಿ ತಮ್ಮಣ್ಣ ಕಾಲಿಗೆ ಬಿದ್ದ ಉಪನ್ಯಾಸಕ; ಸಮಸ್ಯೆ ನಿವಾರಿಸಲು ಮನವಿ

| Updated By: guruganesh bhat

Updated on: Aug 12, 2021 | 8:21 PM

ಉಪನ್ಯಾಸಕ ಶಿವಾನಂದ ಅವರ ಮನವಿಗೆ ಸ್ಪಂದಿಸಿದ ಶಾಸಕ ಡಿ.ಸಿ. ತಮ್ಮಣ್ಣ, ‘ಶಿಕ್ಷಣಕ್ಕೆ ತೊಂದರೆ ಕೊಡುವವರನ್ನು ಹೊರಗೆ ಹಾಕುತ್ತೇನೆ. ಇದರಿಂದ ಲಕ್ಷಾಂತರ ಮತ ಬರಬೇಕಿಲ್ಲ, ಅಧಿಕಾರ ಮುಖ್ಯವಲ್ಲ. ಆದರೆ ಸಮಸ್ಯೆ ಹೇಳಿಕೊಳ್ಳುವಾಗ ಸರಿಯಾಗಿ ಹೇಳಬೇಕು..’ ಎಂದು ಉಪನ್ಯಾಸಕ ಶಿವಾನಂದ ಅವರಿಗೆ ಸಾಂತ್ವನ ಹೇಳಿದ್ದಾರೆ.

ಶಾಸಕ ಡಿ ಸಿ ತಮ್ಮಣ್ಣ ಕಾಲಿಗೆ ಬಿದ್ದ ಉಪನ್ಯಾಸಕ; ಸಮಸ್ಯೆ ನಿವಾರಿಸಲು ಮನವಿ
ಶಾಸಕರಿಗೆ ಮನವಿ ಮಾಡುತ್ತಿರುವ ಉಪನ್ಯಾಸಕ
Follow us on

ಮಂಡ್ಯ: ಮದ್ದೂರು ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕನೋರ್ವರು ಶಾಸಕ ಡಿ.ಸಿ.ತಮ್ಮಣ್ಣ ಅವರ ಕಾಲಿಗೆ ಬಿದ್ದ ಘಟನೆ ನಡೆದಿದೆ. ಕಾಲೇಜಿಗೆ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಭೇಟಿ ನೀಡಿದ್ದ ಸಮಯದಲ್ಲಿ ಪ್ರಾಂಶುಪಾಲ ಪಾಪಯ್ಯ ಎಂಬುವವರು ಜಾತೀಯತೆ ಮಾಡುತ್ತಿದ್ದಾರೆ ಎಂದು ಉಪನ್ಯಾಸಕ ಶಿವಾನಂದ ಅವರು ದೂರಿದ್ದಾರೆ. ಸಣ್ಣಪುಟ್ಟ ವಿಚಾರಕ್ಕೆ ಅಟ್ರಾಸಿಟಿ ಕೇಸ್ ದಾಖಲಿಸುತ್ತಿದ್ದಾರೆ. ನಾವು ಪೊಲೀಸ್ ಠಾಣೆಗೆ ಅಲೆದು ಸುಸ್ತಾಗಿದ್ದೇವೆ ಎಂದು ಆರೋಪಿಸಿದ ಉಪನ್ಯಾಸಕ ಶಿವಾನಂದ ಅವರು, ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಅವರ ಕಾಲಿಗೆ ಬಿದ್ದು ದೂರು ನೀಡಿದ್ದಾರೆ. ಇದರಿಂದ ಹೇಗಾದರೂ ನಮ್ಮನ್ನ ಪಾರು ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಉಪನ್ಯಾಸಕ ಶಿವಾನಂದ ಅವರ ಮನವಿಗೆ ಸ್ಪಂದಿಸಿದ ಶಾಸಕ ಡಿ.ಸಿ. ತಮ್ಮಣ್ಣ, ‘ಶಿಕ್ಷಣಕ್ಕೆ ತೊಂದರೆ ಕೊಡುವವರನ್ನು ಹೊರಗೆ ಹಾಕುತ್ತೇನೆ. ಇದರಿಂದ ಲಕ್ಷಾಂತರ ಮತ ಬರಬೇಕಿಲ್ಲ, ಅಧಿಕಾರ ಮುಖ್ಯವಲ್ಲ. ಆದರೆ ಸಮಸ್ಯೆ ಹೇಳಿಕೊಳ್ಳುವಾಗ ಸರಿಯಾಗಿ ಹೇಳಬೇಕು..’ ಎಂದು ಉಪನ್ಯಾಸಕ ಶಿವಾನಂದ ಅವರಿಗೆ ಸಾಂತ್ವನ ಹೇಳಿದ್ದಾರೆ.

ಮಂಡ್ಯದಲ್ಲಿ ಏಕಾಏಕಿ ಕೇಳಿಬಂದ ಭಾರಿ ಶಬ್ದ; ಹುಟ್ಟಿಕೊಂಡಿತು ಅಕ್ರಮ ಗಣಿಗಾರಿಕೆಯ ಗುಮಾನಿ
ಬೇಬಿ ಬೆಟ್ಟ, ಚಿನಕುರುಳಿ ವ್ಯಾಪ್ತಿ ಹಲವೆಡೆಯೂ ಸೇರಿದಂತೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕು ವ್ಯಾಪ್ತಿಯಲ್ಲಿ ಮಧ್ಯಾಹ್ನ 12.45ರ ಸುಮಾರಿಗೆ ಭಾರಿ ಶಬ್ದ ಕೇಳಿಬಂದಿದೆ. ಈ ಕುರಿತು ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಅಧಿಕೃತ ಮಾಹಿತಿ ನೀಡಿದ್ದಾರೆ. ಯಾವ ಕಾರಣಕ್ಕೆ ಶಬ್ದ ಕೇಳಿ ಬಂದಿದೆ ಎಂದು ಗೊತ್ತಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಭಾರಿ ಶಬ್ದ ಕೇಳಿ ಬಂದಿದೆ. ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದು ತಿಳಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. ಆದರೆ ಕೇಳಿಬಂದ ಭಾರಿ ಶಬ್ದ ಅನುಮಾನಕ್ಕೆ ಕಾರಣವಾಗಿದ್ದು, ಕದ್ದುಮುಚ್ಚಿ ಗಣಿಗಾರಿಕೆ ನಡೆಯುತ್ತಿದೆಯೇ ಎಂಬ ಗುಮಾನಿಯನ್ನು ಸ್ಥಳಿಯರಲ್ಲಿ ಹುಟ್ಟುಹಾಕಿದೆ. 2018ರಲ್ಲೂ ಕೆ ಆರ್ ಎಸ್  ಆಣೆಕಟ್ಟು ಸುತ್ತ ಮುತ್ತಲ‌ ಪ್ರದೇಶದಲ್ಲೂ ಇಂತಹುದೇ ಭಾರಿ ಶಬ್ದ ಕೇಳಿಬಂದಿತ್ತು ಎಂದು ಸ್ಥಳೀಯರು ನೆನೆಸಿಕೊಂಡಿದ್ದಾರೆ.  ಒಟ್ಟಿನಲ್ಲಿ ಇಂದು ಪಾಂಡವಪುರ ತಾಲೂಕಿನಲ್ಲಿ ಕೇಳಿಬಂದಿರುವ ಭಾರಿ ಶಬ್ದ ಆತಂಕಕ್ಕೂ ಕಾರಣವಾಗಿದೆ.

ಸದ್ಯ ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯ ಕುರಿತು ಸದ್ದು ಗದ್ದಲ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಕೇಳಿಬಂದಿರುವ ಭಾರಿ ಸದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: 

ಮಂಡ್ಯದಲ್ಲಿ ಏಕಾಏಕಿ ಕೇಳಿಬಂದ ಭಾರಿ ಶಬ್ದ; ಹುಟ್ಟಿಕೊಂಡಿತು ಅಕ್ರಮ ಗಣಿಗಾರಿಕೆಯ ಗುಮಾನಿ

ಗಣಿಗಾರಿಕೆ ಸ್ಥಗಿತದಿಂದ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ: ಶಾಸಕ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ

(Lecturer fell to the leg of Maddur MLA DC Thammanna in college)