ಮಂಡ್ಯ, ಆ.4: ತಮ್ಮ ಹವಾ ಸೃಷ್ಟಿಸಿಕೊಳ್ಳಲು ಹಾಡು ಹಗಲಲ್ಲೇ ನಡು ರಸ್ತೆಯಲ್ಲಿ ನಿಂತಿದ್ದ ಯುವಕನ ಮೇಲೆ ಲಾಂಗ್ನಿಂದ ಹಲ್ಲೆ ಮಾಡಿದ ಘಟನೆ ಮಂಡ್ಯ(Mandya) ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದಿದೆ. ಮೂಲಕ ಪುಡಿ ರೌಡಿಗಳ ಅಟ್ಟಹಾಸ ಜೋರಾಗಿದೆ. ಶಾರಂತ್ (29) ಪುಡಿ ರೌಡಿಗಳ ಅಟ್ಟಹಾಸದಲ್ಲಿ ಲಾಂಗ್ ಏಟು ತಿಂದ ಯುವಕ. ಹೊಳಲು ಗ್ರಾಮದ ಮಾದ ಅಲಿಯಾಸ್ ಮಾದಪ್ಪ ಆಂಡ್ ಗ್ಯಾಂಗ್ನಿಂದ ಈ ಕೃತ್ಯ ಎಸಗಲಾಗಿರುವ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಹಲ್ಲೆ ಮಾಡಿದ ಮಾದಪ್ಪ, ಚಿಂಟು, ತರುಣ್, ಸುಶಾಂತ್, ಚಂದನ್ ಅವರ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.
ಇನ್ನು ಬರ್ತಡೇ ಹಿನ್ನಲೆ ಸ್ನೇಹಿತರೊಂದಿಗೆ ಕೇಕ್ ಕಟ್ ಮಾಡಿ ಹುಟ್ಟೂರಿಗೆ ಬಂದಿದ್ದ ಶಾರಂತ್. ಗ್ರಾಮದ ಸರ್ಕಲ್ ಒಂದರಲ್ಲಿ ಸ್ನೇಹಿತರ ಜೊತೆ ಮಾತನಾಡುತ್ತಿದ್ದ. ಈ ವೇಳೆ ಎರಡು ಬೈಕ್ನಲ್ಲಿ ಬಂದ ಐವರು ಕ್ಯಾತೆ ತೆಗೆದಿದ್ದಾರೆ. ಏಕಾಏಕಿ ಶಾರಂತ್ ಮೇಲೆ ಮಾದ ಅಂಡ್ ಗ್ಯಾಂಗ್ ಲಾಂಗು, ಡ್ರ್ಯಾಗರ್ನಿಂದ ಹಲ್ಲೆ ನಡೆಸಿದ್ದಾರೆ. ಲಾಂಗ್ ಬೀಸಿದ್ದರಿಂದ ಯುವಕನಿಗೆ ಕಣ್ಣಿನ ಉಬ್ಬು, ಬಾಯಿಗೆ ಗಂಭೀರ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ:ಹಾಡಹಗಲೇ ಕಾಲೇಜು ವಿದ್ಯಾರ್ಥಿ ಮೇಲೆ ಲಾಂಗ್ನಿಂದ ಹಲ್ಲೆ! ಘಟನೆಗೆ ಕಾರಣವಾಯ್ತಾ ಹುಡುಗಿ ವಿಚಾರ?
ಇನ್ನು ಲಾಂಗ್ ದಾಳಿ ತೀವ್ರ ಗಾಯಗೊಂಡ ಗಾಯಾಳು ಶಾರಂತ್ಗೆ ಮಂಡ್ಯದ ಮಿಮ್ಸ್ ವೈದ್ಯರು 16 ಸ್ಟಿಚ್ ಹಾಕಿದ್ದಾರೆ. ಇನ್ನು ಅಷ್ಟೇ ಅಲ್ಲ, ಈ ಹಿಂದೆ ಮಾದಪ್ಪನಿಗೆ ಬಾಸ್ ಎನ್ನುವಂತೆ ಮಾದನ ಸ್ನೇಹಿತರು ಅವಾಜ್ ಹಾಕಿದ್ದರಂತೆ. ಆ ವೇಳೆ ಅವನ್ಯಾವನೋ ಬಾಸ್ ಎಂದು ಶಾರಂತ್ ಟಾಂಗ್ ಕೊಟ್ಟಿದ್ದ. ಅಂದು ಗಲಾಟೆ ನಡೆದು ತಣ್ಣಗಾಗಿತ್ತು. ಅದೇ ದ್ವೇಷ ಇಟ್ಟುಕೊಂಡು ಬರ್ತ್ ಡೇ ದಿನವೇ ಶಾರಂತ್ ಮೇಲೆ ಕ್ಯಾತೆ ತೆಗೆದು ಮಾದಪ್ಪ ಅಂಡ್ ಟೀಂ ಲಾಂಗ್ನಿಂದ ಗಂಭೀರ ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿಂದ ಕಿರಾತಕರು ಎಸ್ಕೇಪ್ ಆಗಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ