ಜೆಡಿಎಸ್​, ಕುಮಾರಸ್ವಾಮಿ ಮೇಲೆ ಸಾಫ್ಟ್ ಆದ್ರಾ ಮಂಡ್ಯ ಸಂಸದೆ? ಅಭಿಮಾನಿಗಳು, ಕಾರ್ಯಕರ್ತರು ಗೊಂದಲ ಆಗಬೇಡಿ ಎಂದ ಸುಮಲತಾ

| Updated By: Rakesh Nayak Manchi

Updated on: Mar 01, 2024 | 7:43 AM

ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು ಎಂಬಂತಾಗಿದೆ ಸಂಸದೆ ಸುಮಲತಾ ಪರಿಸ್ಥಿತಿ. ಯಾಕೆಂದರೆ, ಈ ಕಡೆ ಟಿಕೆಟ್ ಕೋಡುತ್ತೇವೆ ಅಂತಿಲ್ಲ. ಆ ಕಡೆ ಟಿಕೆಟ್ ಕೊಡಲ್ಲ ಅಂತ ಹೇಳುತ್ತಿಲ್ಲ. ದಿನಗಳು ಉರುತ್ತಿವೆ ಹೊರತು ಸುಮಲತಾ ಮಂಡ್ಯ ಸ್ಪರ್ಧೆ ಬಗ್ಗೆ ಅಂತಿಮ ಆಗುತ್ತಿಲ್ಲ. ಈ ಕ್ಷಣದವರೆಗೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತಾಗಿದೆ ಮಂಡ್ಯ ಮೈತ್ರಿ ಟಿಕೆಟ್ ಸ್ಥಿತಿ.

ಜೆಡಿಎಸ್​, ಕುಮಾರಸ್ವಾಮಿ ಮೇಲೆ ಸಾಫ್ಟ್ ಆದ್ರಾ ಮಂಡ್ಯ ಸಂಸದೆ? ಅಭಿಮಾನಿಗಳು, ಕಾರ್ಯಕರ್ತರು ಗೊಂದಲ ಆಗಬೇಡಿ ಎಂದ ಸುಮಲತಾ
ಜೆಡಿಎಸ್​, ಕುಮಾರಸ್ವಾಮಿ ಮೇಲೆ ಸಾಫ್ಟ್ ಆದ್ರಾ ಸುಮಲತಾ? ಅಭಿಮಾನಿಗಳು, ಕಾರ್ಯಕರ್ತರು ಗೊಂದಲ ಆಗ್ಬೇಡಿ ಎಂದ ಸುಮಲತಾ
Follow us on

ಮಂಡ್ಯ, ಮಾ.1: ಲೋಕಸಭೆ ಚುನಾವಣೆ (Lok Sabha Elections) ದಿನಾಂಕ ಘೋಷಣೆಗೆ ಕೌಂಟ್​​ಡೌನ್​ ಶುರುವಾಗಿದೆ. ಯಾವುದೇ ಹೊತ್ತಲ್ಲೂ ಮತಯುದ್ಧದ ಮುಹೂರ್ತ ಫಿಕ್ಸ್ ಆಗಲಿದೆ. ಆದರೆ ಅದಕ್ಕೂ ಮುನ್ನವೇ ನಡೆಯುತ್ತಿರುವ ರಣಕಣ ಮಂಡ್ಯ ಜಿದ್ದಾಜಿದ್ದು. ಮಂಡ್ಯ ಟಿಕೆಟ್ (Mandya Ticket) ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು ಎಂಬಂತಾಗಿದೆ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಪರಿಸ್ಥಿತಿ.

ಯಾಕೆಂದರೆ, ಈ ಕಡೆ ಟಿಕೆಟ್ ಕೋಡುತ್ತೇವೆ ಅಂತಿಲ್ಲ. ಆ ಕಡೆ ಟಿಕೆಟ್ ಕೊಡಲ್ಲ ಅಂತ ಹೇಳುತ್ತಿಲ್ಲ. ದಿನಗಳು ಉರುತ್ತಿವೆ ಹೊರತು ಸುಮಲತಾ ಮಂಡ್ಯ ಸ್ಪರ್ಧೆ ಬಗ್ಗೆ ಅಂತಿಮ ಆಗುತ್ತಿಲ್ಲ. ಈ ಕ್ಷಣದವರೆಗೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತಾಗಿದೆ ಮಂಡ್ಯ ಮೈತ್ರಿ ಟಿಕೆಟ್ ಸ್ಥಿತಿ.

ಬಿಜೆಪಿಗೆ (BJP) ಹೋಗುತ್ತೋ ಅಥವಾ ಜೆಡಿಎಸ್ (JDS) ಪಾಲಾಗುತ್ತೋ ಎಂಬುದು ಇನ್ನೂ ಅಂತಿಮವಾಗಿಲ್ಲ. ಕಳೆದ ಬಾರಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವಿನ ಕೇಕೆ ಹಾಕಿದ್ದ ಸುಮಲತಾ ಈ ಬಾರಿ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಬಿಜೆಪಿ ನಾಯಕರು ವಿಶ್ವಾಸ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ.

ಅಲ್ಲದೆ, ಸ್ಪರ್ಧೆ ಹಾಗೂ ಟಿಕೆಟ್ ವಿಚಾರದಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಗೊಂದಲಕ್ಕೊಳಗಾಗಬೇಡಿ ಎಂದು ಸುಮಲತಾ ಹೇಳುತ್ತಿದ್ದಾರೆ. ಸಕ್ಕರೆ ನಾಡಲ್ಲಿ ಎದ್ದಿರುವ ಈ ಗೊಂದಲ ಮತ್ತು ಸುಮಲತಾ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಗುತ್ತೋ ಇಲ್ಲವೋ ಎಂಬ ಅನುಮಾನ ಮಾರ್ಚ್ 10ರ ನಂತರವೇ ಅಂತಿಮವಾಗಲಿದೆ.

ಇದನ್ನೂ ಓದಿ: Lok Sabha Election: ಮಂಡ್ಯ ಟಿಕೆಟ್ ಸುಮಲತಾಗಾ, ಜೆಡಿಎಸ್​ಗಾ? ಇನ್ನೂ ಬಗೆಹರಿಯದ ಕಗ್ಗಂಟು

ಇದು ಮಂಡ್ಯದ ಕಥೆಯಾದರೆ ಇತ್ತ ಮಂಡ್ಯದ ಟೆನ್ಷನ್ ಜೊತೆಗೆ ಈಗ ದಕ್ಷಿಣ ಕನ್ನಡದಲ್ಲೂ ಬಿಜೆಪಿಗೆ ಹೊಸ ತಲೆನೋವು ಶುರುವಾಗಿದೆ. ಲೋಕಸಭೆ ಚುನಾವಣೆ ಹುಮ್ಮಸ್ಸಿನಲ್ಲಿರುವ ರಾಜ್ಯ ಬಿಜೆಪಿಗೆ ಮತ್ತೆ ಬಂಡಾಯದ ಪೆಟ್ಟು ಬೀಳುತ್ತಿದೆ. ಕಳೆದ ಬಾರಿ ಪುತ್ತಿಲ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಪಕ್ಷವನ್ನ ಸೋಲುವಂತೆ ಮಾಡಿದ್ದಾರೆ. ಈಗಲೂ ದಕ್ಷಿಣ ಕನ್ನಡದಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಪುತ್ತಿಲ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಪುತ್ತಿಲ ಸ್ವತಂತ್ರ ಸ್ಪರ್ಧೆಯ ಬಗ್ಗೆ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ ಅಧಿಕೃತ ಘೋಷಿಸಿದ್ದಾರೆ.

ಇಲ್ಲಿ ವಿಷ್ಯ ಏನಂದರೆ, ಅರುಣ್ ಕುಮಾರ್ ಪುತ್ತಿಲ ಈ ಹಿಂದೆ ಸ್ವತಂತ್ರ ಸ್ಪರ್ಧೆ ಬಗ್ಗೆ ಅಂತಿಮ ತೀರ್ಮಾನ ಮಾಡಿರಲಿಲ್ಲ. ಬಿಜೆಪಿ ಸೇರ್ಪಡೆ ಸಂಬಂಧ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನ ಪುತ್ತಿಲ ಭೇಟಿಯಾಗಿದ್ದರು. ಈ ವೇಳೆ ಷರತ್ತುಗಳಿಲ್ಲದೇ ಪಕ್ಷ ಸೇರುವಂತೆ ವಿಜಯೇಂದ್ರ ಸೂಚಿಸಿದ್ದರು. ಆದರೆ ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನ ನೀಡುವಂತೆ ಪುತ್ತಿಲ ಪಟ್ಟು ಹಿಡಿದಿದ್ದಾರೆ. ಪಕ್ಷ ಸೇರಿದ ಬಳಿಕ ಜವಾಬ್ದಾರಿ ನೀಡುವ ಬಗ್ಗೆ ವಿಜಯೇಂದ್ರ ಒಲವು ತೋರಿದ್ದರು. ಹೀಗಾಗಿ ಮಾತುಕತೆ ವಿಫಲ ಆಗಿದ್ದರಿಂದ ಅರುಣ್ ಕುಮಾರ್ ಪುತ್ತಿಲ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಮತ್ತೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:42 am, Fri, 1 March 24